ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಕ್ಕೆ ಚಾಲನೆ

  ಗ್ರಾಮೀಣ
ಪೊಲೀಸ್ ಠಾಣೆಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. ಅಪರಾಧಗಳನ್ನ ತಡೆಗಟ್ಟುವುದು
ಹೇಗೆ  ಇದರಲ್ಲಿ ಸಾರ್ವಜನಿಕರ ಕರ್ತವ್ಯವೇನು ಎನ್ನುವದರ
ಬಗ್ಗೆ ಕರಪತ್ರಗಳನ್ನು ಹಂಚಲಾಯಿತು. ಕರಪತ್ರಗಳನ್ನು ಹಂಚುವುದರ ಮೂಲಕ ಉದ್ಘಾಟಿಸಿದ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್    ಜನರಲ್ಲಿ ಜಾಗೃತಿ ಅತ್ಯಗತ್ಯವಾಗಿದೆ. ಟಿವಿ ಪತ್ರಿಕೆಗಳಲ್ಲಿ
ಪದೇ ಪದೇ ಈ ರೀ

ತಿ ಮೋಸ ಮಾಡಿದವರ ಬಗ್ಗೆ  ವರದಿಗಳು
ಬರುತ್ತಿದ್ದರೂ ಸಹ ಇನ್ನೂ ಜನ ಮೋಸ ಹೋಗುತ್ತಿದ್ದಾರೆ. ಇತ್ತಿಚಿನ ದಿನಗಳಲ್ಲಿ ಆನ್ ಲೈನ್ ಮೂಲಕವೂ
ಸಹ ಹೆಚ್ಚಿನ ಮಟ್ಟದಲ್ಲಿ ಮೋಸ ಮಾಡಲಾಗುತ್ತಿದೆ. ಇದರ ಬಗ್ಗೆ  ಜಾಗೃತಿ ಜೊತೆಗೆ ಸಾರ್ವಜನಿಕರ ಸಹಭಾಗಿತ್ವವೂ  ಇಲಾಖೆಗೆ ಬೇಕು. ಅಪರಾಧ ಘಟಿಸಿದ ನಂತರದ ಕಾರ್ಯಚಾರಣೆಗಿಂತ
ಅದನ್ನು ನಡೆಯದಂತೆ ತಡೆಗಟ್ಟಬೇಕಾಗಿದೆ ಎಂದು ಹೇಳಿದರು . ಈ ಸಂದರ್ಭದಲ್ಲಿ  ಡಿವೈಎಸ್ಪಿ ಶ್ರೀಕಾಂತ ಕಟ್ಟಿಮನಿ, ಸಿಪಿಐ ಮೋಹನ ಪ್ರಸಾದ,
ಪಿಎಸ್ ಐಗಳಾದ ಚಿತ್ತರಂಜನ್, ಗಣೇಶ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. 

Please follow and like us:
error