ಪೇಸ್ ಟು ಬುಕ್ ತೀರಾ ಕಡಿಮೆ

ಇಂದು ಪ್ರಪಂಚ ದಿನೇ ದಿನೇ ಹಣ ಗಳಿಕೆಯಲ್ಲಿ ಅಭಿವೃದ್ದಿ ರಾಷ್ಟಗಳ ಹಿಂದೆಯೇ ಓಡುತ್ತಲಿದೆ.ಅಧ್ಯಯನ ಶೀಲತೆ, ಸೃಜನತೆ ತೀರಾ ಕಡಿಮೆಯಾಗುತ್ತಿದೆ. ಇದರಿಂದಾಗಿ ಯುವಕರಲ್ಲಿ ಸಮಗ್ರ ಅಧ್ಯಯನದ ವಿವೇಚನೆ ಸಂಕುಚಿತವಾಗುತ್ತಿದೆ.  ಈ ಹಿಂದೆ ಅನೇಕ ಕವಿಗಳು ಕತೆ, ಕಾಂದರಂಬರಿ, ಸಾಹಿತ್ಯ, ಗ್ರಂಥಗಳನ್ನೆ ಹೊರ ತಂದಿದ್ದಾರೆ. ಅವುಗಳನ್ನು ಅಧ್ಯಯನ ಮಾಡಿ ಅರಗಿಸುವ ಶಕ್ತಿಯನ್ನೆ ಈಗಿನ ಯುವಕರು ಕಳೆದುಕೊಳ್ಳುತ್ತಿದ್ದಾರೆ. ಇಂದಿನ ಅಡ್ವಾನ್ಸ್ ಟೆಕ್ನಾಲಜಿಯಿಂದಾಗಿ ಚಿಕ್ಕ ಮಕ್ಕಳಿಂದ ವಯೋವೃದ್ದರೂ ತಡ ರಾತ್ರಿಯ ವರೆಗೂ ಆನ್ ಲೈನ್ ಚಾಟಿಂಗ್, ಲೈವ್ ಸ್ಪಿಕಿಂಗ್ ಅಂತಾನೇ ಕಾಲ ಕಳೆಯುತ್ತಿದ್ದಾರೆ. ಪೇಸ್ ಟು ಬುಕ್ ನತ್ತ ಹೋಗುತ್ತಿರುವುದು ತೀರಾ ಕಡಿಮೆಯಾಗುತ್ತಿದೆ. 
ಹೌದು.. ದೇಶದಲ್ಲಿ ಮಹಾನ್ ಕವಿಗಳು ಹೊಸ ಕಾವ್ಯದ ರಸದೌತಣವನ್ನೆ ನೀಡಿದ್ದಾರೆ. ಕಾವ್ಯದ ರಸಮಯ ವಿಷಯ ಪುಸ್ತಕದಲ್ಲಷ್ಟೆ ಅಡಕವಾಗಿದೆ.ಹುಡುಗರು ಫೇಸ್ ಬುಕ್ ನಲ್ಲಿ ಕಾಲ ಕಳೆಯುವುದೇ ಅಧಿಕವಾಗಿದೆ. ಇನ್ನು ಅಚ್ಚರಿಯ ವಿಷಯವೆಂದರೆ ದೇಶದ ದೊಡ್ಡ ದೊಡ್ಡ ಪಟ್ಟಣದ ಐಷಾರಾಮಿ ವ್ಯಕ್ತಿಗಳು ದೇಶದಲ್ಲಿನ ಪ್ರಸಿದ್ದಿ ಸ್ಥಳಗಳಿಗೆ ತೆರಳುದವುದು ಅಲ್ಲಿಯ ಇತಿಹಾಸ ತಿಳಿಯಲು ಅಲ್ಲ. ಬದಲಿಗೆ ತಿಂಗಳ ಜಾಲಿ ಟ್ರಿಪ್ ಅಂತ ಹೇಳಿ ಕಾಲ ಹರಣ ಮಾಡುವುದು. ಈಗಿನ ಯುವಕರು ಬೈಕ್ ನಲ್ಲಿ ದೇಶವನ್ನೆ ಸುತ್ತುತ್ತಾರೆ. ಆದರೆ,ದೇಶ ಸುತ್ತಿ ಬಂದ ಬಳಿಕ ಏನು ಅಲ್ಲಿಯ ಇತಿಹಾಸ ಎಂದು ಕೇಳಿದರೆ, ಹೇ.. ಹಾಗೆ ಮಾ.. ಜಾಲಿ ಟ್ರಿಪ್ ಮಾಡಿದ್ವಿ ಅಂತಾ ಸೊಗಸಾಗಿ ಹೇಳುತ್ತಾರೆ. ಇನ್ನು ಇತಿಹಾಸ ಪ್ರವಾಸಿ ತಾಣದಲ್ಲಿ ತಿಂಡಿ ತಿನಿಸಿಗೆ ನೂರಾರು ರೂಪಾಯಿ ವ್ಯಯ ಮಾಡ್ತಾರೆ. ಆದರೆ, ಅಲ್ಲಿಯ ಇತಿಹಾಸದ ಪುಸ್ತಕ ಖರೀದಿ ಮಾಡೋ ವೇಳೆ ವ್ಯಾಪಾರಿಯೊಂದಿಗೆ ಚೌಕಾಸಿ ಮಾಡಿ ಐದತ್ತು ರೂಪಾಯಿದಿಂದ ಕೊನೆ ಗಳಿಗೆಯಲಿ ಪುಸ್ತಕ ಖರೀದಿ ಮಾಡದೇ ಹಿಂದಿರುಗುತ್ತಾರೆ. ಹಾಗೆಂದ ಮಾತ್ರಕ್ಕೆ ಎಲ್ಲ ಯುವಕರು ಹೀಗೆ ಮಾಡ್ತಾರೆ ಅಂತಲ್ಲ. ಬದಲಿಗೆ ನೂರಕ್ಕೆ ಎಂಬತ್ತರಷ್ಟು ಯುವಕರು ಹಾಗೆ ಮಾಡ್ತಾರೆ.

ಅನ್ ಲೈನ್ ಚಾಟಿಂಗ್ ಇರಲಿ  ಜೊತೆಗೆ ಪುಸ್ತಕದ ವಿಷಯ ಮಸ್ತಕ ಸೇರಲಿ.
   
                                                         ದತ್ತಪ್ಪ ಕಮ್ಮಾರ
                                                          ಮುದ್ದಾಬಳ್ಳಿ . ದೂರವಾಣಿ -೯೫೯೧೭೦೫೯೫೫
  
Please follow and like us:
error