ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ

 ಇತ್ತೀಚೆಗೆ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತಿ ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆ ಹಾಗೂ ಕಾಳಿದಾಸ ಯುವಕ ಸಂಘ ಮೋರನಾಳ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತಿಚೆಗೆ ತಾಲೂಕಿನ ಮೋರನಳ್ಳಿ ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆಯನ್ನು ಹಾಕಿಸಲಾಯಿತು. 
ವೈಧ್ಯಾದೀಕಾರಿಗಳಾದ ಡಾ. ವಿನಯ ಕುಮಾರ ಅಂಗಡಿ ಹಾಗೂ ಡಾ. ಎ. ಎಸ್. ಜಾಗೀರದಾರ ಇವರು ಗ್ರಾಮಸ್ತರಿಗೆ ಜಾನುವಾರುಗಳ ಆರೋಗ್ಯದ ಜಾಗೃತಿ ಕುರಿತು. ಮಾಹಿತಿನೀಡಿದರು, ಮತ್ತು ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದ ಉದ್ದೇಶವನ್ನು ಕುರಿತು ರೈತರಿಗೆ ಹಾಗೂ ಕುರಿಗಾರರಿಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ಕಾಳಿದಾಸ ಯುವಕ ಸಂಘದ ಅಧ್ಯಕ್ಷರಾದ ಅಂದಪ್ಪ ಚಿಲಗೋಡ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೂ ಲಸಿಕೆ ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿಗಳಾದ ಶರಣಪ್ಪ ಕೋರಗಲ್, ಜಗನ್ನಾಥ, ಕಾಜಾವಲಿ ಇವರು ಜಾನುವಾರುಗಳಿಗೆ ಲಸಿಕೆ ನೀಡಿದರು. ಗ್ರಾಮದ ಮುಖಂಡರಾದ ಅಂಬಣ್ಣ ಹಾರ‍್ನಳ್ಳಿ ಹಾಗೂ ಶ್ರೀನಿವಾಸ ಕಲಾದಗಿ, ಹನಮಂತ ಸಾಹುಕಾರ, ಇನ್ನಿತರರು ಉಪಸ್ಥಿತರಿದ್ದರು 

Leave a Reply