ಗುಂಡೂರು ದಲಿತರ ಕೇರಿ ಮೇಲೆ ದಾಳಿ : ಖಂಡನೆ

 ಗುಂಡೂರು ಗ್ರಾಮದ ದಲಿತರ ಮೇಲೆ ಸವರ್ಣೀಯ ಗುಂಡಾಗಳು ದಾಳಿ ಮಾಡಿದ ಬಗ್ಗೆ ಸತ್ಯಶೋಧನೆ ಮಾಡಲು ಜಾತಿ ನಿರ್ಮೂಲನೆ ಚಳುವಳಿ ಮತ್ತು ಪಿಯುಸಿಎಲ್ ಸಂಘಟನೆಗಳ ಮುಖಂಡರು ಗುಂಡೂರು ಗ್ರಾಮದಲ್ಲಿ ಸತ್ಯಶೋಧನೆ ಮಾಡಿ ದೂರದ ಗ್ರಾಮಗಳಿಂದ ಸವರ್ಣೀಯ ಗುಂಡಾಗಳು ದಾಳಿ ಮಾಡಿದ್ದು ಖಚಿತಗೊಂಡಿದ್ದು, ಗುಂಡೂರು ದಲಿತರ ರಕ್ಷಣೆಗಾಗಿ ಕರ್ನಾಟಕ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಾತಿ ನಿರ್ಮೂಲನೆ ಸಂಘಟನೆಯ ರಾಜ್ಯ ಸಂಚಾಲಕ ಹೆಚ್.ಎನ್. ಬಡಿಗೇರ, ಮುಖಂಡರಾದ ಬಸವರಾಜ ಹೊಸಳ್ಳಿ ಮತ್ತು ಪಿಯುಸಿಎಲ್‌ನ ಮುಖಂಡರಾದ ಭಾರದ್ವಾಜ್  ತಿಳಿಸಿದ್ದಾರೆ. 
         ದಿನಾಂಕ ೦೭-೦೫-೨೦೧೪ ರಂದು ಪ್ರಗತಿಪರ ಸಂಘಟನೆಗಳ ಮುಖಂಡರು ಬಸ್ಟ್ಯಾಂಡ್ ಹತ್ತಿರ ಇರುವ ಕ್ರಾಂತಿ ಕೇಂದ್ರದಲ್ಲಿ ಸಭೆ ಸೇರಿ ಗುಂಡೂರು ದಲಿತರ ಮೇಲೆ ಆಗಿರುವ ದೌರ್ಜನ್ಯವನ್ನು ಒಕ್ಕೂರಿಲಿನಿಂದ ಖಂಡಿಸಿದ್ದಾರೆ. ಕೊಪ್ಪಳ ಜಿಲ್ಲಾ ಪ್ರಗತಿಪರ ಸಂಘಟನೆ ಜಿಲ್ಲೆಯಲ್ಲಿ ಇತ್ತೀಚಿಗೆ ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಎದುರಿಸಲು ನಿರ್ಧರಿಸಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರು ದಲಿತರಾಗಿದ್ದರೂ ದಲಿತರ ಬಹಿಷ್ಕಾರಗಳು, ದೌರ್ಜನ್ಯಗಳು ನಡೆಯುತ್ತಿದ್ದರು ಉಸ್ತುವಾರಿ ಸಚಿವರು ಚಕಾರವೆತ್ತದೇ ಇರುವುದು ಖಂಡನೀವಾದದ್ದು. ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಗಳ ವಿರುದ್ಧ ಪ್ರಗತಿರಪರ ಸಂಘಟನೆಗಳು ಉಗ್ರವಾದ ಹೋರಾಟಗಳನ್ನು ರೂಪಿಸಿ, ದಲಿತರ ರಕ್ಷಣೆಗಾಗಿ ನಿಲ್ಲುತ್ತೇವೆ ಎಂದು ಈ ಕೂಡಲೇ ಗಂಗಾವತಿ ತಹಸೀಲ್ದಾರರು ಹಾಗೂ ಪೊಲೀಸರು ಅಪರಾಧಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಲು  ಒತ್ತಾಯಿಸಿದ್ದಾರೆ.

Leave a Reply