ರಾಜ್ಯ ಮಟ್ಟದ ಸ್ಪರ್ಧೆಗೆ ಸ್ವರಚಿತ ಕವನಗಳ ಆಹ್ವಾನ

  ದ್ವಾರಕಾ ಪ್ರಕಾಶನ ಕೊಪ್ಪಳ ಇವರಿಂದ ಕರ್ನಾಟಕದ ಉದಯೋನ್ಮುಕ ಹಾಗೂ ಪ್ರತಿಭಾವಂತ ಕವಿಗಳ ಕವನ ಸಂಕಲನವನ್ನು ಸಹಕಾರ ತತ್ವದಡಿಯಲ್ಲಿ ಹೊರತರಲಾಗುತ್ತಿದೆ. ಅದಕ್ಕಾಗಿ ಕವಿಗಳಿಗಾಗಿ ರಾಜ್ಯ ಮಟ್ಟದ ಸ್ವರಚಿತ ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಕವಿಗಳು ತಮ್ಮ ಕವನಗಳನ್ನು ಸ್ವವಿಳಾಸದೊಂದಿಗೆ ದಿನಾಂಕ: ೧೫.೦೨.೨೦೧೫ರ ಒಳಗಾಗಿ ಶ್ರೀಮತಿ ಈಶವ್ವ ಕಂಬಳಿ ಛಿ/o: ಸಿರಿಗನ್ನಡ ಪುಸ್ತಕ ಮಳಿಗೆ ಆವರಣ, ಸಾಹಿತ್ಯ ಭವನ ಹತ್ತಿರ ಕೊಪ್ಪಳ-೫೮೩೨೩೧ ಈ ವಿಳಾಸಕ್ಕೆ ಕಳಿಸಬೇಕು. ಆಯ್ಕೆಯಾದ ಕವನಗಳನ್ನು ಕವನ ಸಂಕಲನದ ರೂಪದಲ್ಲಿ ಹೊರತರಲಾಗುವುದು. ಜೊತೆಯಲ್ಲಿ ಕಿರುಪರಿಚಯವನ್ನು ಲಗತ್ತಿಸಬೇಕು. ಕವಿಗಳು ತಮ್ಮ ಸ್ವರಚಿತ ಕವನಗಳನ್ನು ಸ್ಪರ್ಧೆಗೆ ಮತ್ತು ಪ್ರಕಟನೆಗೆ ಕಳಿಸಬೇಕು. ಕವನ ಸಂಕಲನವು ಡೆಮಿ ೧/೮ ಸೈಜಿನಲ್ಲಿರುತ್ತದೆ. ಸಂಕಲನದ ಹೆಸರು ’ಸ್ವಾತಿ ಮುತ್ತು’ ಮುಖಪುಟವು ಬಹುವರ್ಣದಲ್ಲಿ ಆರ್ಟ್‌ಕಾರ್ಡಿನಲ್ಲಿ ಮುದ್ರಿವಾಗುತ್ತದೆ. ಮುದ್ರಣಕ್ಕಾಗಿ ಬಳಸುವ ಕಾಗದ ಮ್ಯಾಪ್‌ಲಿಥು ಇದ್ದು ಒಳ್ಳೆಯ ಗುಣಮಟ್ಟದಲ್ಲಿರುತ್ತದೆ. ಕವನಗಳು ದೇಶಪ್ರೇಮ, ನಾಡಪ್ರೇಮ,  ಸೌಂದರ್ಯ, ದಾಂಪತ್ಯ, ಸ್ನೆಹ, ಪ್ರಣಯ, ಸರಸ-ವಿರಸ, ದಲಿತ, ವ್ಯಕ್ತಿಚಿತ್ರಣ, ನಿಸರ್ಗ ಚಿತ್ರಣ ಮಳೆಗಾಲ, ಅತಿವೃಷ್ಟಿ ಸುನಾಮಿ ಜಾನಪದ, ಬರಗಾಲ, ಬಂಡಾಯ, ರಾಜಕೀಯ, ಸಂವಾದ ಹೀಗೆ ಯಾವೂದೇ ವಿಷಯ ಹೊಂದಿರಬೇಕು. ಪ್ರತಿ ಕವನವನ್ನು ೩೦ ಸಾಲುಗಳಿಗೆ ಮಿಕ್ಕದಂತೆ ಕಾಗದದ ಒಂದೇ ಮಗ್ಗುಲಿಗೆ ಬರೆದು ಕಳಿಸಬೇಕು. ಕವಿಗಳು ಒಂದರಿಂದ ಆರು ಕವನಗಳನ್ನು ಸ್ಪರ್ಧೆಗೆ ಮತ್ತು ಪ್ರಕಟನೆಗೆ ಕಳುಹಿಸಬಹುದು.
              ಪ್ರಕಟನೆಯ ವೆಚ್ಚವಾಗಿ ಪ್ರತಿ ಪುಟಕ್ಕೆ (ಕವನ ಸಣ್ಣದಿದ್ದಲ್ಲಿ ಒಂದು ಪುಟದಲ್ಲಿ ೨ ಕವನ ಕೂಡ್ರಬಹುದು ಅಥವಾ ಕವನ ದೊಡ್ಡದಿದ್ದಲ್ಲಿ ಒಂದು ಪುಟದಲ್ಲಿ ಅಥವಾ ಎರಡನೆಯ ಪುಟದಲ್ಲಿ ಮುಂದುವರೆಯಬಹುದು) ರೂ.೩೫೦-೦ನ್ನು ಕಳುಹಿಸಬೇಕು. (ಇದರಲ್ಲಿ ಪ್ರಕಟಣೆ, ಪತ್ರ ವ್ಯಾವಹಾರ, ಬುಕ್ ಪೋಸ್ಟ್ ಹಾಗೂ ಪೋಸ್ಟವೆಚ್ಚ ಎಲ್ಲ ಸೇರಿದೆ). 
ಪ್ರಕಟಿತ ಪ್ರತಿ ಕವನಕ್ಕೆ (ಪ್ರತಿ ಪುಟಕ್ಕೆ) ಮೂರರಿಂದ ನಾಲ್ಕು ಪುಸ್ತಕಗಳನ್ನು ಸಂಭಾವನಾ ರೂಪದಲ್ಲಿ ಕಳುಹಿಸಲಾಗುವದು. ಪ್ರತ್ಯೇಕ ಕಾಗದದಲ್ಲಿ ನಿಮ್ಮ ಹೆಸರು, ವಿಳಾಸ, ಸಕ್ಷಿಪ್ತ ಪರಿಚಯ, ನೀವು ಕಳಿಸಿದ ಕವನಗಳ ಸಂಖ್ಯೆ, ಎಮ್.ಓ.ಹಣ ನಿಮ್ಮ ಪಾಸಪೋರ್ಟ್ ಸೈಜ ಪೋಟೋ, (ಎಮ್.ಒ. ಫಾರ್ಮಿನಲ್ಲಿ ನಮಗೆ ಕಟ್ ಮಡಿ ಕೊಡುವ ಭಾಗದಲ್ಲಿ ವಿಳಾಸ ಮತ್ತು ಹಣವನ್ನು ನಮೋದಿಸಬೇಕು) ಕವನಗಳ ಹೆಸರು ಬರೆದು ಕಳಿಸಬೇಕು. ಕವನಗಳ ಜೊತೆಯಲ್ಲಿ ನಿಮ್ಮ ವಿಳಾಸ ಬರೆದಿರುವ ಎರಡು ಪೋಸ್ಟಕಾರ್ಡ ಕಳಿಸಬೇಕು. ಕವನಗಳನ್ನು ಕಳಿಸುವಾಗ ಪ್ರತಿ ಕವನಕ್ಕೆ (ಒಂದು ಪುಟಕ್ಕೆ) ೩೫೦-೦೦ ಗಳನ್ನು ಕಳಿಸಿದ ಕವನಗಳಿಗೆ ಅನುಗುಣವಾಗಿ ಹಣವನ್ನು ಸಂಪಾದಕರ ಹೆಸರಿಗೆ ಎಮ್.ಓ./ಡಿ.ಡಿ. ಮಾಡಿ ಪಾವತಿಯನ್ನು ಕವನದ ಜೊತೆಗೆ ಕಳುಹಿಸಬೇಕು.
ಪ್ರಸಂಗಾನುಸಾರ ಸೂಚನೆ ಬದಲಿಸುವ, ಕವನಗಳನ್ನು ಪರೀಕ್ಷಿಸಿ ಸ್ವೀಕರಿಸುವ, ತಿರಸ್ಕರಿಸುವ, ಮುದ್ರಣಕ್ಕಾಗಿ ತಿದ್ದುಪಡಿ ಮಾಡುವ ಹಕ್ಕು ಸಂಪಾದಕರಿಗೆ ಇದೆ.
ಪ್ರತ್ಯುತ್ತರಕ್ಕಾಗಿ, ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ವಿಳಾಸ ಬರೆದ ಸ್ಟ್ಯಾಂಪ ಲಗತ್ತಿದ ಲಕೋಟೆಯೊಂದಿಗೆ ಅಥವಾ ಡಬಲ್ ಕಾರ್ಡಿನೊಂದಿಗೆ ಬರೆಯಿರಿ. ವಿಳಾಸ ಬದಲಿಯಾದಲ್ಲಿ ತೀವ್ರವೇ ತಿಳಿಸಬೇಕು. 
ಬಹುಮಾನಗಳ ವಿವರ : ಪ್ರಥಮ ಬಹುಮಾನ : ೨೦೦೦/- ರೂ ಗಳು,
   ದ್ವಿತೀಯ ಬಹುಮಾನ : ೧,೦೦೦/- ರೂ.ಗಳು, 
               ತೃತಿಯ ಬಹುಮಾನ :   ೫೦೦/- ರೂ ಗಳು.
ಕವನಗಳಲ್ಲಿ ಪುರುಷ ವಿಭಾಗ ಮತ್ತು ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುವುದು. ಬಹುಮಾನಿತರ ಹೆಸರು, ಕವನದ ಹೆಸರು, ವಿಳಾಸವನ್ನು ಪೋಟೋದೊಂದಿಗೆ ಇದೇ ಕವನ ಸಂಕಲನದಲ್ಲಿ ಪ್ರಕಟಿಸಲಾಗುವುದು ಹಾಗೂ ಬಹುಮಾನವನ್ನು ಇದೇ ಸಂಕಲನದ ಪುಸ್ತಕಗಳ ರೂಪದಲ್ಲಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ: ೯೪೮೩೩೭೫೫೭೩ಗೆ ಸಂಪರ್ಕಿಸಬಹುದಾಗಿದೆ.
Please follow and like us:
error