fbpx

ಮಕ್ಕಳಲ್ಲಿರುವ ಪ್ರತಿಭೆ ಹೊರಹಾಕುವ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು- ಡಾ|| ಸಂಗನಬಪ್ಪ

ಕೊಪ್ಪಳ: ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಕೇವಲ ಪಾಠ ಮಾಡದೆ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಹೊರಹಾಕುವ ಕಾರ್ಯವನ್ನು ಮಾಡಬೇಕು. ಎಂದು ಅಳವಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ  ಡಾ|| ಸಂಗನಬಪ್ಪ ಹೇಳಿದರು. ಅವರು ತಾಲೂಕಿನ ಅಳವಂಡಿ ಗ್ರಾಮದ ಸ್ಪಂದನ ಪ್ರಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ ಮಕ್ಕಳ ಕಲಾಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ  ಮುಖ್ಯಅತಿಥಿಸ್ಥಾನ ವಹಿಸಿ ಮಾತನಾಡುತ್ತಾ ಪ್ರತಿಯೊಂದು ಮಗುವಿನಲ್ಲಿ ವಿಶೇಷ ಶಕ್ತಿ ಇರುತ್ತದೆ, ಶಿಕ್ಷಕರು ಆ ಶಕ್ತಿಯನ್ನು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಿದರೆ ಆ ಮಗುವಿನ ಪ್ರತಿಭೆ ಬೆಳಗುವದರಲ್ಲಿ ಯಾವ ಸಂದೆಹ ಇಲ್ಲಾ ಎಂದರು. ಪಾಲಕರು ಮಕ್ಕಳ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕು.ಅವರಿಗೆ ಸರಿಯಾದ ಸಮಯದಲ್ಲಿ ಚುಚ್ಚುಮದ್ದು ಹಾಗೂ ಲಸಿಕೆಗಳನ್ನು ಹಾಕಿಸಬೇಕು. ಸ್ವಚ್ಚತೆಗೆ ಹೆಚ್ಚು ಗಮನಹರಿಸಬೇಕು ಎಂದು ಹೆಳಿದರು.
           ಸ್ಪಂದನ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಎ.ಕೆ.ಮುಲ್ಲಾನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಾಲಕರು ಮಕ್ಕಳು ಅಭ್ಯಾಸ ಮಾಡಲು ಉತ್ತಮವಾದ ಪರಿಸರ ಇರುವಂತೆ ನೊಡಿಕೊಳ್ಳಬೇಕು. ಮಕ್ಕಳ ಮುಂದೆ ಅಸಭ್ಯೆವಾಗಿ ವರ್ತಿಸಬಾರದು ಮತ್ತು ಅವರ ಎದುರಿಗೆ ಕೆಟ್ಟ ದುಶ್ಚಟಗಳನ್ನು ಮಾಡಬಾರದು. ಅವಗಳನ್ನ ಮಕ್ಕಳು ಅನುಕರಣೆ ಮಾಡುತ್ತವೆ. ಒಂದು ಶಿಕ್ಷಣ ಕೇಂದ್ರ ಬೆಳಯಬೇಕಾದರೆ ಪಾಲಕರ ಹಾಗೂ ಗ್ರಾಮದ ಎಲ್ಲ ಜನರ ಸಹಕಾರ ಬೆಕಾಗುತ್ತದೆ ಎಂದು ಹೆಳಿದರು.
         ಗ್ರಾಮಪಂಚಾಯತ ಅಧ್ಯಕ್ಷರಾದ ರಮೇಶ ಕರಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಶಾಲೆಯು ನಮ್ಮ ಗ್ರಾಮೀಣ ಭಾಗದ ಮಕ್ಕಳಿಗೆ ಅತಿ ಅವಶ್ಯ ಇರುವ ಶಿಕ್ಷಣ ಕೊಡುತ್ತಿರುವದು ತುಂಬಾ  ಶ್ಲಾಗಿನಿಯ ಎಂದು ಹೇಳಿದರು. ಅತಿಥಿಗಳಾಗಿ ಆಗಮಿಸಿದ ನ್ಯಾಯವಾದಿಗಳಾದ ಗುರುಬಸವರಾಜ ಮಾತನಾಡಿ  ತಂದೆತಾಯಿಗಳು ಶಿಕ್ಷಣದಲ್ಲಿರುವ ಕೇಲವು ವಿಶೇಷ ಮಾಹಿತಿಗಳನ್ನು ತಿಳಿದುಕೊಳ್ಳಬೇಕು  ಹಾಗೂ ಕಾನೂನ ಬಗ್ಗೆ ಅರಿತಕೊಳ್ಳಬೇಕು ಎಂದರು. ವೇದಿಕೆ ಮೇಲೆ ತಾಲೂಕ ಪಂಚಾಯತ ಉಪಾಧ್ಯಕ್ಷರಾದ ಮುದ್ದಮ್ಮ ಕರಡಿ, ಸಿಆರ್‌ಪಿ ಬಸವರಾಜ ಜೀರ, ಶರಣಪ್ಪ ಮೇಟಿ, ಪ್ರತಿಭಾ ಮೇಟಿ, ರೂಬಿಯಾ ಮುಲ್ಲಾನವರ, ಪದ್ಮಾ ಅಳವಂಡಿ  ಉಪಸ್ಥಿತರಿದ್ದರು. ಪಾಲಕರಿಗೆ ಹಾಗೂ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು. ಮಕ್ಕಳ ವಚನ ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾಂಭವಾಯಿತು. ಶಿಕ್ಷಕಿ ಚನ್ನಮ್ಮ ಮಾದಪ್ಪ ಸ್ವಾಗತ ಮಾಡಿದರು.ಪರಸಪ್ಪ ಕಟ್ಟಿಮನಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು ಶಿಕ್ಷಕಿ ವಿಶಾಲಾಕ್ಷಿ ಕಲ್ಲಳ್ಳಿ ನಿರೂಪಣೆ ಮಾಡಿದರೆ ಕೊನೆಯದಾಗಿ ವಿಜಯಲಕ್ಷ್ಮಿ ವಿಭೂತಿ ಅಭಿನಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Please follow and like us:
error

Leave a Reply

error: Content is protected !!