ಸರಕಾರದ ಗಣತಿಯಲ್ಲಿ ಸಮಾಜದ ಜನತೆ ಹಡಪದ ಎಂದು ನೊಂದಾಯಿಸಿ: ಮಹೇಶ ಮಾದಿನೂರು

ಕೊಪ್ಪಳ,ಎ.೦೯: ಬರುವ ಎಪ್ರೀಲ್ ೧೧ ರಿಂದ ೩೦ ರವರೆಗೆ ಈಡೀ ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (ಜಾತಿ ಗಣತಿ)ಯನ್ನು ಸರಕಾರ ನಡೆಸುತ್ತಿದ್ದು  ಸಮಾಜ ಬಾಂಧವರು ಸಮೀಕ್ಷೆಯಲ್ಲಿ ಹಡಪದ ಸಮಾಜದ ಬಂಧುಗಳು ಜಾತಿ ಕಾಲಂನಲ್ಲಿ ‘ಹಡಪದ’ ಎಂದು ಕುಲಕಸುಬು ಕಾಲಂನಲ್ಲಿ ‘ಕ್ಷೌರಿಕ’ ಎಂದು ನೊಂದಾಯಿಸುವಂತೆ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಭಾಗ್ಯನಗರದ ಅಧ್ಯಕ್ಷ ಮಹೇಶ ಮಾದಿನೂರು ಹೇಳಿದ್ದಾರೆ. 
ಅವರು ಮಂಗಳವಾರ ಸಮಾಜದ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಮಾಜದ ಬಾಂಧವರು ಯಾವುದೇ ಗೊಂದಲಕ್ಕೀಡಾಗದೇ ಸ್ಪಷ್ಟವಾಗಿ ಅನುಮೋಧಿಸುವುದರ ಮೂಲಕ ಸಮಾಜದ ಜನತೆ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಸಂಘದ ಕಾರ್ಯದರ್ಶಿ ಉಮೇಶ ಮುಧೋಳ  ತಿಳಿಸಿದ್ದಾರೆ.

Leave a Reply