ಸ್ಥಾನ ನೀಡಿ, ಇಲ್ಲವೇ ಪರಿಣಾಮ ಎದುರಿಸಿ: ಹೈಕಮಾಂಡ್‌ಗೆ ಬಿಎಸ್‌ವೈ ಎಚ್ಚರಿಕೆ

  ರಾತ್ರಿ ತರಾತುರಿಯಲ್ಲಿ ದಿಲ್ಲಿಗೆ ದೌಡಾಯಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಸರಕಾರ ಅಥವಾ ಪಕ್ಷದೊಳಗೆ ತನಗೆ ಕೂಡಲೇ ಸ್ಥಾನ ನೀಡದಿದ್ದರೆ ತನ್ನ ರಾಜಕೀಯ ಹಾದಿಯನ್ನು ತಾನೇ ರೂಪಿಸುವುದಾಗಿ ಪಕ್ಷದ ಹೈಕಮಾಂಡ್‌ಗೆ ಸಂದೇಶ ನೀಡಿದ್ದಾರೆ.
ಮುಖ್ಯಮಂತ್ರಿ ಅಥವಾ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಯಡಿಯೂರಪ್ಪ,ತಮ್ಮ ಬೆಂಬಲಿಗ ಸಚಿವ,ಶಾಸಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ತಂತ್ರಗಾರಿಕೆ ನಡೆಸುತ್ತಲೇ ಬಂದಿದ್ದು,ನಿನ್ನೆ ಅವರು ದಿಲ್ಲಿಗೆ ದೌಡಾಯಿಸಿದ್ದು,ಅಲ್ಲಿ ವರಿಷ್ಠರನ್ನು ಭೇಟಿಯಾಗಿ ಸ್ಥಾನಮಾನ ಕೊಡಿ,ಇಲ್ಲದಿದ್ದರೆ ಮುಂದೆ ತಾನು ಬೇರೆ ಹಾದಿ ಹಿಡಿಯಬೇಕಾದೀತು ಎಂಬ ಎಚ್ಚರಿಕೆಯನ್ನು ವರಿಷ್ಠರಿಗೆ ತಿಳಿಸಿದ್ದಾರೆನ್ನಲಾಗಿದೆ.
ಆದರೆ ಯಡಿಯೂರಪ್ಪ ಮಾತ್ರ ತಾನು ದಿಲ್ಲಿಗೆ ಹೋಗಿದ್ದು ವೈಯಕ್ತಿಕ ಕಾರಣಕ್ಕಾಗಿ,ಯಾವುದೇ ರಾಜಕೀಯದ ಕುರಿತು ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಸಕ್ತ ರಾಜಕೀಯದಲ್ಲಿ ಮತ್ತಷ್ಟು ಸಮಯ ಕಾಯಲು ತನಗೆ ಸಾಧ್ಯವಿಲ್ಲ.ಸೂಕ್ತ ಸಮಯದಲ್ಲಿ ಸ್ಥಾನಮಾನ ನೀಡುವುದಾಗಿ ಹೇಳುತ್ತಿರುವ ಹೈಕಮಾಂಡ್‌ಗೆ ಸೂಕ್ತ ಸಮಯ ಎಂದರೆ ಯಾವುದು ಎಂದು ಅವರು ಪ್ರಶ್ನಿಸಿದ್ದಾರೆ.
ನಿನ್ನೆ ರಾತ್ರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಜೊತೆ ಮಾತನಾಡಿದ ಯಡಿಯೂರಪ್ಪ, ಸ್ಥಾನಮಾನಕ್ಕಾಗಿ ಒತ್ತಾಯವೇರಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.
ಹೈಕಮಾಂಡ್ ಬಳಿ ಹೋದ ಸಂದರ್ಭದಲ್ಲಿ ಸೂಕ್ತ ಸಮಯದಲ್ಲಿ ಸ್ಥಾನ ನೀಡಲಾಗುವುದು ಎಂದು ಹೇಳಿ ಸಮಾಧಾನಪಡಿಸಿತ್ತು.ಈಗ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು,ಚುನಾವಣೆ ಮುಗಿದ ಬಳಿಕ ನೋಡೋಣ ಎಂದು ಹೇಳಿದ್ದರೂ,ಯಡಿಯೂರಪ್ಪ ಮಾತ್ರ ಸಮಾಧಾನಗೊಂಡಿಲ್ಲ,ಅಧಿಕಾರಕ್ಕಾಗಿ ಕಟ್ಟೆಚ್ಚರವನ್ನು ನೀಡಿ ಹಿಂದಿರುಗಿರುವುದು ಪಕ್ಷದೊಳಗೆ ಮತ್ತಷ್ಟು ತಲ್ಲಣವನ್ನುಂಟು ಮಾಡಿದೆ.
ಭ್ರಷ್ಟಾಚಾರಕ್ಕಾಗಿ ತನ್ನ ತಲೆದಂಡ ಪಡೆಯಲಾಗಿದೆ.ಆದರೆ ಕೇಂದ್ರ ಸಚಿವ ಚಿದಂಬರಂ,ದಿಲ್ಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್,ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಇನ್ನೂ ತಮ್ಮ ಸ್ಥಾನದಲ್ಲಿಯೇ ಮುಂದು ವರಿಯುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ತನ್ನನ್ನು ಬಲಿ ತೆಗೆದು ಕೊಂಡಿರುವುದು ಯಾವ ನ್ಯಾಯ ಎಂದು ವರಿಷ್ಠರ ಮುಂದೆ ಪ್ರಶ್ನಿಸಿದ್ದಾರೆನ್ನಲಾಗಿದೆ.
ನಿನ್ನೆ ರಾತ್ರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಜೊತೆ ಮಾತನಾಡಿದ ಯಡಿಯೂರಪ್ಪ, ಸ್ಥಾನಮಾನಕ್ಕಾಗಿ ಒತ್ತಾಯವೇರಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿವೆ.ಹೈಕಮಾಂಡ್ ಬಳಿ ಹೋದ ಸಂದರ್ಭದಲ್ಲಿ ಸೂಕ್ತ ಸಮಯದಲ್ಲಿ ಸ್ಥಾನ ನೀಡಲಾಗುವುದು ಎಂದು ಹೇಳಿ ಸಮಾಧಾನಪಡಿಸಿತ್ತು. ಈಗ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಚುನಾವಣೆ ಮುಗಿದ ಬಳಿಕ ನೋಡೋಣ ಎಂದು ಹೇಳಿದ್ದರೂ,ಯಡಿಯೂರಪ್ಪ ಮಾತ್ರ ಸಮಾಧಾನಗೊಂಡಿಲ್ಲ, ಅಧಿಕಾರಕ್ಕಾಗಿ ಕಟ್ಟೆಚ್ಚರವನ್ನು ನೀಡಿ ಹಿಂದಿರುಗಿರುವುದು ಪಕ್ಷದೊಳಗೆ ಮತ್ತಷ್ಟು ತಲ್ಲಣವನ್ನುಂಟು ಮಾಡಿದೆ.
ಭ್ರಷ್ಟಾಚಾರಕ್ಕಾಗಿ ತನ್ನ ತಲೆದಂಡ ಪಡೆಯಲಾಗಿದೆ. ಆದರೆ ಕೇಂದ್ರ ಸಚಿವ ಚಿದಂಬರಂ, ದಿಲ್ಲಿಯ ಮುಖ್ಯಮಂತ್ರಿ ಶೀಲಾ ದೀಕ್ಷಿತ್,ತಮಿಳುನಾಡಿನ ಸಿಎಂ ಜಯಲಲಿತಾ ಇನ್ನೂ ತಮ್ಮ ಸ್ಥಾನದಲ್ಲಿಯೇ ಮುಂದುವರಿಯುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ತನ್ನನ್ನು ಬಲಿ ತೆಗೆದುಕೊಂಡಿರುವುದು ಯಾವ ನ್ಯಾಯ ಎಂದು ವರಿಷ್ಠರ ಮುಂದೆ ಪ್ರಶ್ನಿಸಿದ್ದಾರೆನ್ನಲಾಗಿದೆ. ಪಕ್ಷ ಹಾಗೂ ಸರಕಾರದೊಳಗೆ ತಮ್ಮ ಬೆಂಬಲಿಗರು ತೀವ್ರ ಮುಜುಗರ ಎದುರಿಸುತ್ತಿದ್ದು,ಕೂಡಲೇ ತನಗೆ ಸ್ಥಾನ ನೀಡಿ ಇಲ್ಲದಿದ್ದರೆ ಮುಂದೆ ತಾನು ಅನ್ಯ ದಾರಿಯನ್ನು ಕಂಡುಕೊಳ್ಳಬೇಕಾದೀತು ಎಂದು ಎಚ್ಚರಿಕೆಯನ್ನು ಕೂಡಾ ನೀಡಿದ್ದಾರೆಂದು ಹೇಳಲಾಗಿದೆ.
ಆದರೆ ದಿಲ್ಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ,ಸ್ಥಾನಕ್ಕಾಗಿ ತಾನು ಯಾವುದೇ ರೀತಿಯ ಒತ್ತಡ ತಂತ್ರ ಮಾಡಿಲ್ಲ.ಅದನ್ನು ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ.ಅವರೇ ಸೂಕ್ತ ಸಮಯದಲ್ಲಿ ಅದನ್ನು ನೀಡಲಿದ್ದಾರೆ ಎಂದಿದ್ದಾರೆ.
ತಮಗೆ ಸೂಕ್ತ ಸ್ಥಾನಮಾನ ನೀಡುವ ಕುರಿತು ಪಕ್ಷದ ವರಿಷ್ಠರೇ ನಿರ್ಧರಿಸುತ್ತಾರೆ.ದಿಲ್ಲಿಗೆ ಹೋದ ವೇಳೆ ಯಾವುದೇ ನಾಯಕರನ್ನು ಭೇಟಿಯಾಗಲು ಸಮಯವಿರಲಿಲ್ಲ.ಅಲ್ಲದೆ ಅವರೆಲ್ಲರೂ ಬೇರೆ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯಯಲ್ಲಿ ಬ್ಯುಸಿಯಾಗಿದ್ದಾರೆ.ಪತ್ರಿಕೆಯಲ್ಲಿ ತಾನು ಸಹಿ ಸಂಗ್ರಹಿಸುತ್ತಿದ್ದೇನೆ ಎಂಬ ವರದಿಗಳು ಬಂದಿದೆ.ಅದರಲ್ಲಿ ಸತ್ಯಾಂಶವಿಲ್ಲ ಎಂದರು. ಯಡಿಯೂರಪ್ಪ ಮತ್ತೆ ಅಧಿಕಾರಿಗಳಿಸಬೇಕೆಂದಿದ್ದರೆ ಅದನ್ನು ಕೊಡುವುದು ರಾಷ್ಟ್ರೀಯ ನಾಯಕತ್ವ. ಅದಕ್ಕೆ ಸಹಿಯಾಗಲಿ.
ಒತ್ತಡವೇರುವುದಾಗಲಿ ಮಾಡಿಲ್ಲ.ತಾನು ದಿಲ್ಲಿಗೆ ತೆರಳಿದ್ದು,ತನ್ನ ವೈಯಕ್ತಿಕ ಕಾರಣಕ್ಕಾಗಿ.ಅಲ್ಲಿ ಪಕ್ಷದ ಹಿರಿಯ ಮುಖಂಡ, ವಕೀಲ ರಾಮ್‌ಜೇಠ್ಮಲಾನಿಯನ್ನು ಭೇಟಿಯಾಗಲು ಹೋಗಿದ್ದೆ. ಆದರೆ ಮಾಧ್ಯಮಗಳಲ್ಲಿ ರಾಜಕೀಯದ ಕುರಿತು ವರದಿಯಾಗಿರುವುದು ಸತ್ಯಕ್ಕೆ ದೂರವಾದದ್ದು,ತನ್ನ ಪರವಾಗಿ ಯಾವುದೇ ಸಹಿ ಸಂಗ್ರಹವಾಗಿಲ್ಲ ಎಂದರು.
ಇನ್ನು ಸಹಿಸಲಾರೆ: ವರಿಷ್ಠರಿಗೆ ಯಡಿಯೂರಪ್ಪ ಗುಡುಗು
ನವದೆಹಲಿ:ನನಗೆ ದಕ್ಕಬೇಕಾದ ಸ್ಥಾನಮಾನಗಳನ್ನು ಆದಷ್ಟು ಬೇಗ ನೀಡಿ.ಇಲ್ಲದಿದ್ದರೆ ನಮ್ಮ ದಾರಿ ನಮಗೆ,ನಿಮ್ಮ ದಾರಿ ನಿಮಗೆ ಎಂಬರ್ಥ ಬರುವಂತೆ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಶುಕ್ರವಾರ ತಡರಾತ್ರಿ ಭೇಟಿ ಮಾಡಿ ಸುಮಾರು ಅರ್ಧ ತಾಸು ಚರ್ಚಿಸಿದ ಯಡಿಯೂರಪ್ಪ ಅವರು,ರಾಜ್ಯದಲ್ಲಿ ತಮಗೆ ಹಾಗೂ ತಮ್ಮ ಬೆಂಬಲಿಗರಿಗೆ ಮುಖ್ಯಮಂತ್ರಿಗಳಿಂದ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಂದ ಆಗುತ್ತಿರುವ ಮುಜುಗರದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.ಇನ್ನೂ ಎಷ್ಟು ದಿನದವರೆಗೆ ಈ ರೀತಿ ಮುಜುಗರವನ್ನು ಸಹಿಸಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.
ಬೇಗ ನಿರ್ಧಾರ ಕೈಗೊಳ್ಳಿ:ಉಪ ಲೋಕಾಯುಕ್ತರ ನೇಮಕ,ವರ್ಗಾವಣೆ ಸೇರಿದಂತೆ ಆಡಳಿತಾತ್ಮಕ ವಿಷಯದಲ್ಲಿ ತಮ್ಮನ್ನು ನಿರ್ಲಕ್ಷಿಸುತ್ತಿರುವ ಬಗ್ಗೆಯೂ ತೀವ್ರ ಅಸಮಾಧಾನ, ಅತೃಪ್ತಿ ತೋಡಿಕೊಂಡಿರುವ ಯಡಿಯೂರಪ್ಪ,‘ಈ ಬಗ್ಗೆ ಒಂದು ಅಂತಿಮ ನಿರ್ಧಾರ ಹೇಳಿ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿಯಾದರೂ ನಿರ್ಧಾರ ಕೈಗೊಳ್ಳಿ.ಇಲ್ಲ ನನ್ನ ಹಿತೈಷಿಯಾಗಿಯಾದರೂ ನಿರ್ಧಾರ ಕೈಗೊಳ್ಳಿ.ಆದರೆ,ಬೇಗ ನಿರ್ಧಾರ ಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ’ಎಂದು ತಿಳಿದು ಬಂದಿದೆ.
ಶುಕ್ರವಾರ ರಾತ್ರಿ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರನ್ನು ಭೇಟಿ ಮಾಡಿದ ನಂತರ ಯಡಿಯೂರಪ್ಪ ತಡ ರಾತ್ರಿ ನಿತಿನ್ ಗಡ್ಕರಿ ನಿವಾಸಕ್ಕೆ ತೆರಳಿದ್ದರು.ಅಲ್ಲಿ ಗಡ್ಕರಿ ಅವರೊಂದಿಗೆ ಚರ್ಚಿಸಿದರು.ಈ ಭೇಟಿಯ ವೇಳೆ ಯಡಿಯೂರಪ್ಪ ಅವರು‘ನಾನು ಯಾವ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧ’ಎಂಬ ಅಂಶವನ್ನು ಸ್ಪಷ್ಟಪಡಿಸಿದ್ದಾರೆ.ಅಷ್ಟೆ ಅಲ್ಲ,ಪಕ್ಷದಲ್ಲಿ ನಡೆದ ಹಿಂದಿನ(ಕಲ್ಯಾಣ್ ಸಿಂಗ್,ಉಮಾಭಾರತಿ ಪಕ್ಷ ತೊರೆದು ಸೋಲುಂಡ)ಘಟನೆಗಳನ್ನು ನನಗೆ ಹೋಲಿಸಿ ಅರ್ಥೈಸುವುದು ಬೇಡ’ ಎಂದೂ ಅವರು ಹೇಳಿದ್ದಾರೆನ್ನಲಾಗಿದೆ.
ವರಿಷ್ಠರ ಆದೇಶದಂತೆ ನಾನು ತಾಳ್ಮೆ ವಹಿಸಿದ್ದೇನೆ.ಆದರೆ,ದಿನೇ ದಿನೇ ನಾನು ಮತ್ತು ನನ್ನ ಬೆಂಬಲಿಗರು ಮುಜುಗರ ಪಡುವಂತಹ ಘಟನೆಗಳು ನಡೆಯುತ್ತಲೇ ಇವೆ.ನನ್ನ ಬೆಂಬಲಿಗರನ್ನೂ ನಾನು ಸಮಾಧಾನ ಪಡಿಸಬೇಕಿದೆ.ಅದಕ್ಕಾಗಿ ತ್ವರಿತ ನಿರ್ಧಾರ ಕೈಗೊಳ್ಳಿ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ.
ಇನ್ನೂ ಸ್ವಲ್ಪ ಕಾಯಿರಿ:ಗಡ್ಕರಿ ಅವರು ಯಡಿಯೂರಪ್ಪ ಅವರ ದೂರು ದುಮ್ಮಾನ ಆಲಿಸಿ, ಉತ್ತರ ಪ್ರದೇಶ ಚುನಾವಣೆ ಮುಗಿಯುವವರೆಗೆ ಕಾಯಿರಿ,ಅಲ್ಲಿವರೆಗೆ ನಾವು ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಸಮಾಧಾನ ಪಡಿಸಿದ್ದಾರೆ.ನಿಮ್ಮನ್ನು ಪಕ್ಷ ನಿರ್ಲಕ್ಷಿಸಿದೆ ಎಂದು ನೀವು ಭಾವಿಸಬೇಕಿಲ್ಲ.
ನಿಮಗೆ ದಕ್ಕಬೇಕಾದ ಸ್ಥಾನಮಾನಗಳು ದಕ್ಕುತ್ತವೆ.ಆದರೆ,ನಿಂತ ನಿಲುವಲ್ಲೇ ಎಲ್ಲವೂ ಬೇಕೆಂದರೆ ಸಾಧ್ಯವಾಗದು.ಚುನಾವಣೆ ಮುಗಿಯುವವರೆಗೆ ಕಾಯುವುದು ಅನಿವಾರ್ಯ ಎಂದೂ ಸ್ಪಷ್ಟಪಡಿಸಿದರು.ಆದರೆ,ಸ್ಥಾನಮಾನಗಳ ವಿಷಯ ಪ್ರಸ್ತಾಪಿಸಿದರೂ ಅದು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯೋ ಅಥವಾ ಮುಖ್ಯಮಂತ್ರಿ ಹುದ್ದೆಯೋ,ಬೇರೆ ಏನೋ ಎಂಬುದನ್ನೇನೂ ಸ್ಪಷ್ಟಪಡಿಸಿಲ್ಲ. ಇಂತಹ ಸ್ಥಾನವನ್ನೇ ನೀಡುತ್ತೇವೆಂಬ ಸ್ಪಷ್ಟ ಭರವಸೆಯನ್ನೇನೂ ನೀಡಿಲ್ಲ ಎಂದು ತಿಳಿದು ಬಂದಿದೆ.
ಪಕ್ಷದ ವರಿಷ್ಠರಿಗೆ ಉತ್ತರ ಪ್ರದೇಶ ಚುನಾವಣೆ ನಿರ್ಣಾಯಕ ಆಗಿರುವುದರಿಂದ ತಕ್ಷಣಕ್ಕೆ ಯಡಿಯೂರಪ್ಪ ಅವರ ಬೇಡಿಕೆಯನ್ನು ಸಾರಾಸಗಟು ತಿರಸ್ಕರಿಸುವ ಅಥವಾ ಪುರಸ್ಕರಿಸುವ ಸ್ಥಿತಿಯಲ್ಲಿ ಇಲ್ಲ.ಹೀಗಾಗಿ ಸಮಾಧಾನ ಪಡಿಸುವ ಪ್ರಯತ್ನವನ್ನು ಮಾತ್ರ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Please follow and like us:
error