You are here
Home > Koppal News > ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕಾರ್ಮಿಕ ಸಮುದಾಯ ಭವನ ಕಟ್ಟಡಕ್ಕೆ ಆಗ್ರಹ

ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕಾರ್ಮಿಕ ಸಮುದಾಯ ಭವನ ಕಟ್ಟಡಕ್ಕೆ ಆಗ್ರಹ

ಕೊಪ್ಪಳ : ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ದಿ: ೨೦-೧೧-೨೦೧೪ ರಂದು ಕಾರ್ಮಿಕ ಸಚಿವರಾದ ಪರಮೇಶ್ವರ ನಾಯ್ಕ ಅವರಿಗೆ ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಕಾರ್ಮಿಕ ಸಮುದಾಯ ಭವನ ಕಟ್ಟಡ ನಿರ್ಮಿಸಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು. 
ಕಳೆದ ವರ್ಷ ಕಾರ್ಮಿಕ ಕಲ್ಯಾಣ ನಿಧಿಯಲ್ಲಿ ೨೦೦೦ ಕೋಟಿಗಿಂತಲೂ ಹೆಚ್ಚು ಜಮಾ ಇರುವ ಹಣದಲ್ಲಿ ಪ್ರತಿ ಜಿಲ್ಲೆಗೂ ಕಾರ್ಮಿಕ ಸಮುದಾಯ ಭವನ ನಿರ್ಮಿಸುವುದಾಗಿ ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ೨೦೦೦೦ ಕಟ್ಟಡ ಕಾರ್ಮಿಕರು ಸೇರಿದಂತೆ ಒಟ್ಟು ಅಂದಾಜು ೫೦ ಸಾವಿರಕ್ಕೂ ಹೆಚ್ಚು  ಕಾರ್ಮಿಕರಿದ್ದು, ಅವರ ಮಕ್ಕಳ ಮದುವೆ ಕಲ್ಯಾಣ ಕಾರ್ಯ, ಸಭೆ ಸಮಾರಂಭಗಳಿಗೆ ಅನುಕೂಲ ಮಾಡಿಕೊಡಲು ಕಾರ್ಮಿಕ ಸಮುದಾಯ ಭವನದ ಅಗತ್ಯತೆ ಇದೆ. ಆದ್ದರಿಂದ ತಾವು ಹೇಳಿದಂತೆ ಕಾಮಿಕ ಕಲ್ಯಾಣ ನಿಧಿಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಒಂದು ದೊಡ್ಡ ಕಾರ್ಮಿಕ ಭವನ ಕಟ್ಟಲು ಆಗ್ರಹಿಸಲಾಯಿತು. 
ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಭಾರದ್ವಾಜ್, ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಶೀಲವಂತರ, ಡಿ.ಹೆಚ್. ಪೂಜಾರ, ಏಸಪ್ಪ, ಮುಖಬುಲ್ ರಾಯಚೂರ ಮುಂತಾದವರು ಸಚಿವರನ್ನು ಕಂಡು ಮನವಿ ಸಲ್ಲಿಸಿ ಆಗ್ರಹಿಸಿದರು. ಅದಕ್ಕೆ ಸಚಿವರು ಜಾಗೆ ನೀಡಿದರೆ ತಕ್ಷಣ ಕಟ್ಟಡ ಮಂಜೂರು ಮಾಡುವ ಭರವಸೆ ನೀಡಿದರು. 

Leave a Reply

Top