ಆಧಾರ ಕಾಡ್ ಸಂಖ್ಯೆ ಸಲ್ಲಿಸಲು ಸೂಚನೆ.

ಕೊಪ್ಪಳ – ಸಾಮಾಜಿಕ ಭದ್ರತೆ ಯೋಜನೆ ಅಡಿ ವಿವಿಧ ಮಾಶಾಸನಗಳನ್ನು ಪಡೆಯುತ್ತಿರುವ ಫಲಾನುಭವಿಗಳು ತಮ್ಮ ಮಾಶಾಸನಗಳಿಗೆ ಆಧಾರ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯವಾಗಿದೆ.
     ಈಗಾಗಲೆ ಆಧಾರ ಕಾರ್ಡ್ ಸಂಖ್ಯೆಯನ್ನು ಸಲ್ಲಿಸಿದ ಫಲಾನುಭವಿಗಳನ್ನು ಹೊರತುಪಡಿಸಿ, ಇದುವರೆಗೂ ಸಲ್ಲಿಸದೇ ಇರುವ ನಗರಸಭೆ ವ್ಯಾಪ್ತಿಯ ಫಲಾನುಭವಿಗಳು, ಕೂಡಲೇ ತಮ್ಮ ಆಧಾರ ಸಂಖ್ಯೆಯನ್ನು ತಮ್ಮ ವಾರ್ಡಿನ ಬಿಲ್ ಕಲೆಕ್ಟರ್ ಅವರಿಗೆ  ಹಾಗೂ ಗ್ರಾಮ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳು ಆಯಾ ಗ್ರಾಮ ಲೆಕ್ಕಾಧಿಕಾರಿ ಅಥವಾ ಗ್ರಾಮ ಸಹಾಯಕರಿಗೆ ನೀಡುವಂತೆ ಕೊಪ್ಪಳ ಗ್ರೇಡ್-೨ ತಹಶೀಲ್ದಾರ ಯು. ನಾಗರಾಜ ತಿಳಿಸಿದ್ದಾರೆ.

Leave a Reply