fbpx

ಖತ್ನಾ ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಮಹತ್ವ ಪಡೆದಿದೆ : ಸಯ್ಯದ್

ಕೊಪ್ಪಳ,ಏ.೨೬: ಮುಸ್ಲಿಂ ಸಮಾಜದಲ್ಲಿ ಖತ್ನಾ (ಮುಂಜಿ) ಕಾರ್ಯಕ್ಕೆ ಅತ್ಯಂತ ಅವಶ್ಯಕ ಎಂದು ಹೇಳಲಾಗಿದ್ದು ಅದರನ್ವಯ ಮುಸ್ಲಿಂಮರು ಇದಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರತಿಯೊಬ್ಬರು ಖತ್ನಾ ಮಾಡಿಸಿಕೊಳ್ಳುತ್ತಾರೆ, ಖತ್ನಾ ಧಾರ್ಮಿಕವಾಗಿ ಹಾಗೂ ವೈಜ್ಞಾನಿಕವಾಗಿ ಬಹಳ ಮಹತ್ವ ಪಡೆದಿದೆ ಎಂದು ಸಯ್ಯದ್ ಫೌಂಡೇಶನ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು.
ಅವರು ತಾಲೂಕಿನ ಹುಲಿಗಿ ಗ್ರಾಮದಲ್ಲಿ ಶನಿವಾರ ಸಾಲಾರಜಂಗ ಮಸೀದಿ ಕಮೀಟಿ ಹಾಗೂ ನವಜಾನ್ ಕಮೀಟಿವತಿಯಿಂದ ಏರ್ಪಡಿಸಿದ ಉಚಿತ ಸಾಮೂಹಿಕ ಖತ್ನಾ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ, ಇಸ್ಲಾಂ ಧರ್ಮದಲ್ಲಿ ಖತ್ನಾ ಸುನ್ನತೆ ಇಬ್ರಾಹಿಮ್ ಎಂದು ಹೇಳಲಾಗಿದೆ. ಪೈಗಂಬರ್ ಇಬ್ರಾಹಿಂ ಅಲೈಸಲಾಮ್ (ರ) ರವರು ಇದನ್ನು ಮಾಡಿದ್ದರು ಹಾಗೂ ಇಸ್ಲಾಂ ಧರ್ಮದ ಅನುಯಾಯಿಗಳಿಗೆ ಇದನ್ನು ಕಡ್ಡಾಯವಾಗಿ ಮಾಡಲು ಹೇಳಿದ್ದರು. ಹೀಗಾಗಿ ಖತ್ನಾ ಧಾರ್ಮಿಕವಾಗಿ ಮಹತ್ವ ಪಡೆದಿದ್ದು, ಮುಸ್ಲಿಂ ಸಮಾಜ ಬಾಂಧವರು ಇದನ್ನು ಕಡ್ಡಾಯವಾಗಿ ಖತ್ನಾ ಮಾಡುತ್ತ ಬಂದಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಖತ್ನಾ ಧಾರ್ಮಿಕವಾಗಿ ಅಷ್ಟೆ ಅಲ್ಲದೇ ವೈಜ್ಞಾನಿಕವಾಗಿಯೂ ಕೂಡ ಬಹಳಷ್ಟು ಮಹತ್ವ ಪಡೆದಿದೆ. ಖತ್ನಾ ಮಾಡಿಸಿದ್ದರಿಂದ ಮಾರಕ ರೋಗಗಳಿಗೆ ಕಡಿವಾಣ ಹಾಕಿದಂತಾಗುತ್ತದೆ. ವೈದ್ಯರು ಕೂಡ ಇದಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಹೀಗಾಗಿ ಖತ್ನಾ ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಬಹಳಷ್ಟು ಮಹತ್ವ ಪಡೆದಿದ್ದು, ಇಂತಹ ಮಹತ್ವದ ಕಾರ್ಯ ಇಲ್ಲಿನ ಸಾಲಾರಜಂಗ್ ಮಸೀದಿ ಕಮೀಟಿ ಹಾಗೂ ನವಜವಾನ್ ಕಮೀಟಿ ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಸಯ್ಯದ್ ಫೌಂಡೇಶನ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹೇಳಿದರು. 
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಹಾಗೂ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸದಸ್ಯ ಪೀರಾಹುಸೇನ ಹೊಸಳ್ಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಖತ್ನಾದ ಮಹತ್ವದ ಬಗ್ಗೆ ಮತ್ತು ಇದರಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ಬಗ್ಗೆ ವಿವರಣೆ ನೀಡಿದರು.
ಡಾ. ಹಸನ್ ಅಲಿ ನಿಂಗಾಪುರರವರು ಈ ಸಾಮೂಹಿಕ ಉಚಿತ ಖತ್ನಾ ಶಿಬಿರದಲ್ಲಿ ಸುಮಾರು ೬೦ ಮಕ್ಕಳಿಗೆ ಖತ್ನಾ ನೆರವೇರಿಸಿದರು. ಈಗಾಗಲೇ ಸದರಿಯವರು ಕೊಪ್ಪಳ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಾಗೂ ಹೈದ್ರಬಾದ್ ಕರ್ನಾಟಕದ ಬಹುಭಾಗ ಪ್ರದೇಶಗಳನ್ನು ಸಾಮೂಹಿಕ ಉಚಿತ ಖತ್ನಾ ನಡೆಸಿ ಯಶಸ್ವಿಯಾಗಿದ್ದಾರೆ ಮತ್ತು ಉಚಿತವಾಗಿ ಬಡಮಕ್ಕಳಿಗೆ ಸಮವಸ್ತ್ರ, ಔಷದಿ ಕೂಡ ತಮ್ಮ ತಂದೆಯವರ ಸ್ಮರಣೆಗಾಗಿ ನೀಡುತ್ತ ಬಂದಿರುವುದು ಶ್ಲಾಘನೀಯವಾಗಿದೆ.
ಈ ಸಮಾರಂಭದಲ್ಲಿ ಹಸನುದ್ದೀನ್ ಚೋಟುಮಿಯಾ, ನೂರಸಾಬ, ರಫೀಕ್ ಸಾಬ, ಶಂಶುದ್ದೀನ್ ಸಾಬ ಸೇರಿದಂತೆ ಸಾಲಾರಜಂಗ್ ಮಸೀದಿ ಕಮೀಟಿ ಹಾಗೂ ನವಜವಾನ್ ಕಮೀಟಿಯ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷ ಸೇರಿದಂತೆ ಸರ್ವ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಮೌಲ್ವಿಗಳು ಪಾಲ್ಗೊಂಡಿದ್ದರು. 
ಪಲ್ಟನ್‌ಗಲ್ಲಿಯಲ್ಲಿ ಇಂದು ಸಾಮೂಹಿಕ ಉಚಿತ ಖತ್ನಾ ಶಿಬಿರ 
ಕೊಪ್ಪಳ,ಏ.೨೬: ನಗರದ ಪಂಜುಮ್ ಪಲ್ಟನ್ ಓಣಿಯಲ್ಲಿ ಏ.೨೭ ರ ರವಿವಾರ ಬೆಳಿಗ್ಗೆ ೯ ಗಂಟೆ ಸುಮಾರಿಗೆ ಇಲ್ಲಿನ ಜಂಡಾಕಟ್ಟಾ ಬಳಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಹಜರತ್ ಖಾಜಾ ಗರೀಬ ನವಾಜ್ ಖಿದ್ಮತುಲ್ ಮುಸ್ಲಮಿನ್ ಕಮೀಟಿವತಿಯಿಂದ ಸಾಮೂಹಿಕ ಉಚಿತ ಖತ್ನಾ ಶಿಬಿರ ಜರುಗಲಿದೆ.
ಈ ಸಾಮೂಹಿಕ ಉಚಿತ ಖತ್ನಾ ಶಿಬಿರದಲ್ಲಿ ಸುಮಾರು ೩೦ ಜನ ಬಡಮಕ್ಕಳಿಗೆ ಖತ್ನಾ ನೆರವೇರಿಸಲಾಗುವುದ. ಡಾ. ಹಸನ್ ಅಲಿ ಆರ್.ನಿಂಗಾಪುರರವರು ಈ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ಇದರಲ್ಲಿ ಕಮೀಟಿಯ ಅಧ್ಯಕ್ಷ, ಹಾಜಿ ಅಬ್ದುಲ್ ನಬೀಸಾಬ ಛಟ್ನಿ, ಉಪಾಧ್ಯಕ್ಷ ಹಾಜಿ ಗೌಸ್ ಸಾಬ ಬೇಪಾರಿ ಸೇರಿದಂತೆ ಮುಪ್ತಿ ಮಹಮದ್ ನಜೀರ್ ಅಹ್ಮದ್ ತಸ್ಕೀನಿ ಖಾದ್ರಿ ಕಿಲ್ಲೇದಾರರವರು ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಕಮೀಟಿಯ ಕಾರ್ಯದರ್ಶಿ ಅಬ್ದುಲ್ ರಹೇಮಾನ್ ಟೇಲರ್‌ರವರು ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.
Please follow and like us:
error

Leave a Reply

error: Content is protected !!