ಭಾರತ ರತ್ನ ಪುರಸ್ಕೃತ ಶ್ರೀ ಅಟಲ್ ಬಿಹಾರಿ ವಾಜಪೇಯಿರವರ ೯೧ನೇ ಜನ್ಮದಿನಾಚರಣೆಯ.

ಕೊಪ್ಪಳ-25- ದೇಶಕಂಡ ರಾಷ್ಟ್ರೀಯ ನಾಯಕ ಅಜಾತಶತ್ರು ಭಾರತ ರತ್ನ ಪುರಸ್ಕೃತ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ ೯೧ನೇ ಜನ್ಮದಿನಾಚರಣೆಯ ನಿಮಿತ್ಯ ಅಟಲ್ ಬಿಹಾರ ವಾಜಪೇಯಿ ಯವರ ಅಭಿಮಾನಿ ಬಳಗದಿಂದ ಬಾಲಕರ ಬಾಲ ಮಂದಿರದಲ್ಲಿ ಬಟ್ಟೆ ವಿತರಣೆ ಮಾಡುವ ಮೂಲಕ ಮತ್ತು ಸಿಹಿ ಹಂಚುವುದರ ಮೂಲಕ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಮಾನ್ಯ ಸಂಸದರ ಪುತ್ರರಾಗಿರುವ  ಗವಿಸಿದ್ದಪ್ಪ ಕರಡಿ ಬಾಗವಹಿಸಿ ಅಟಲ್ ಬಿಹಾರ ವಾಜಪೆಯವರು  ಒಬ್ಬ ದೇಶದ ಅಪ್ರತಿಮ ನಾಯಕ ದೇಶದಲ್ಲಿ ಸುಮಾರು ೧೫ ಸಾವಿರ ಚತಿಷ್ಕೊನ ರಸ್ತೆಯನ್ನು ನಿರ್ಮಾಣ ಮಾಡಿದ ಮೊದಲ ಪ್ರಧಾನಿ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯ ಮೂಲಕ ಪ್ರತಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಮಾಡಲು ಮುಂದಾದ ಬುದ್ದಿವಂತ ರಾಜಕಾರಣಿ ಹಾಗೂ ಭಾರತದಿಂದ ಪಾಕಿಸ್ತಾನಕ್ಕೆ ಬಸ್ ಸಂಚಾರಿ ಆರಂಬಿಸಿದ ಮೊದಲ ವ್ಯಕ್ತಿ ಅವರಂತೆ ಈ ಶಾಲೆಯ ಮಕ್ಕಳು ಅಟಲ್ ಬಿಹಾರಿ ವಾಜಪೇಯಿಯವರ ಆದರ್ಶ ಗುಣಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆಕೊಟ್ಟರು.

Related posts

Leave a Comment