ಅನ್ನದಾತ ಚಲನಚಿತ್ರಕ್ಕೆ ಗವಿಮಠದಲ್ಲಿ ಮುಹೂರ್ತ.

ಕೊಪ್ಪಳ, ಅ. ೧೫. ಕೊಪ್ಪಳದ ಗವಿಮಠದಲ್ಲಿಂದು ಬೆಂಗಳೂರಿನ ದೇವಿ ಭವಾನಿ ಆರ್ಟ್ಸ್ ನಿರ್ಮಾಣದ ಅನ್ನದಾತ ಚಿತ್ರದ ಮುಹೂರ್ತ ನಡೆಯಿತು. ನಿರ್ದೇಶಕ ಎನ್. ಮಧುಸೂಧನ ಹಾಗೂ ಸಾಹಿತಿ ಈಶ್ವರ ಹತ್ತಿ ಜಂಟಿಯಾಗಿ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಹಾಗೂ ಚುಸಾಪ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಂಡಗಿ ಉಪಸ್ತಿತರಿದ್ದು ಚಿತ್ರ ತಂಡಕ್ಕೆ ಶುಭ ಕೋರಿದರು. ಛಾಯಾಗ್ರಾಹಕ ಭಾಸ್ಕರ್ ವಿ. ರಡ್ಡಿ ಈಶ್ವರ ಹತ್ತಿಯವರಿಂದ ಸ್ವಾಮೀಜಿಯ ಪಾತ್ರದಲ್ಲಿ ಗ್ರಾಮದ ಸುದ್ದಿಯನ್ನು ಸೆರೆಹಿಡಿಯುವ ಮೂಲಕ ಚಿತ್ರೀಕರಣ ಆರಂಭಗೊಂಡಿತು. ಇಡೀ ದಿನ ಇಂದು ಗವಿಮಠ ಹಾಗೂ ಮಠದ ಆವರಣದಲ್ಲಿ ಚಿತ್ರೀಕರಣ ಮಾಡಲಾಯಿತು. ಚಿತ್ರದಲ್ಲಿ ರೈತನ ಸಾಮಾನ್ಯ ಬದುಕು, ಬವಣೆ, ನೋವಿನ ಚಿತ್ರಣವಿರಲಿದೆ ಎಂದು ನಿರ್ದೇಶಕ ಮಧುಸೂಧನ ಹೇಳಿದರು. ರಾಜು ಹೊಸಕೋಟೆ, ಗಂಗಾಧರ ಹೊದ್ಲೂರ, ಕುಮಾರ ಭಾಗವತ್ ಮುಖ್ಯ ಭೂಮಿಕೆಯ ಚಿತ್ರದಲ್ಲಿ ಕೊಪ್ಪಳದ ಈಶ್ವರ ಹತ್ತಿ, ವಿಜಯಲಕ್ಷ್ಮೀ ಕೊಟಗಿ, ಮಲ್ಲಿಕಾರ್ಜುನಗೌಡ ಪಾಟೀಲ, ಬಿ. ಎ. ಆಡೂರ, ಪ್ರಾಣೇಶ ಪೂಜಾರ, ಸುರೇಶ ಕಂಬಳಿ ಮುಂತಾದವರು ಅಭಿನಯಿಸುತ್ತಿದ್ದಾರೆ.
ನಿರ್ದೇಶಕರ ಮೊದಲ ಚಿತ್ರವನ್ನು ಕೊಪ್ಪಳದ ಸುತ್ತಮುತ್ತ ಚಿತ್ರೀಕರಿಸಿಕೊಳ್ಳುತ್ತಿರುವದಕ್ಕೆ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿಶೇಷ ಸಹಕಾರ ನೀಡುವದಾಗಿ ಈ ಸಂದರ್ಭದಲ್ಲಿ ಕಾರ್ಯದರ್ಶಿ ಮಂಜುನಾಥ ಗೊಂಡಬಾಳ ತಿಳಿಸಿದರು. ಕೊಪ್ಪಳದ ಯತ್ನಟ್ಟಿಯಲ್ಲಿ ಪ್ರಮುಖ ಚಿತ್ರೀಕರಣ ನಡೆಯಲಿದೆ.
Please follow and like us:
error