You are here
Home > Koppal News > ದಿ.೨೩ ರಿಂದ ರಾಜ್ಯಮಟ್ಟದ ಗ್ರಾಮೀಣ(ಪೈಕಾ)ಕ್ರೀಡಾಕೂಟ

ದಿ.೨೩ ರಿಂದ ರಾಜ್ಯಮಟ್ಟದ ಗ್ರಾಮೀಣ(ಪೈಕಾ)ಕ್ರೀಡಾಕೂಟ

ಕೊಪ್ಪಳ : ೨೦೧೧-೧೨ನೇ ರಾಜ್ಯಮಟ್ಟದ ಪಂಚಾಯತ್ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್ (ಪೈಕಾ) ಗ್ರಾಮೀಣ ಕ್ರೀಡಾಕೂಟ ದಿನಾಂಕ ೨೩ ರಿಂದ ೨೫-೧೧-೨೦೧೧ ರವರೆಗೆ ಬಾಲಕ ಮತ್ತು ಬಾಲಕೀಯರಿಗೆ ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಗುಂಪು -೧ರ ಅಥ್ಲೆಟಿಕ್ಸ್, ವ್ಹಾಲಿಬಾಲ್, ಬಾಸ್ಕೆಟ್ ಬಾಲ್ ಸ್ಪರ್ಧೆಯ ಕ್ರೀಡೆಗೆ ಪಾಲ್ಗೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಈಗಾಗಲೇ ಜಿಲ್ಲಾಮಟ್ಟದಲ್ಲಿ ವಿಜೇತರಾದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳ ಹೆಸರುಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ದಿನಾಂಕ ೨೩-೧೧-೨೦೧೧ ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ  ಬೆಳಿಗ್ಗೆ ೧೧.೦೦ ಗಂಟೆಯೊಳಗಾಗಿ ಕ್ರೀಡಾಪಟುಗಳು ತಮ್ಮ ಹೆಸರನ್ನು ವಯೋಮಿತಿ ಧೃಢೀಕರಣ ಹಾಗೂ ಗುರುತಿನಚೀಟಿಯೊಂದಿಗೆ ನೊಂದಾಯಿಸಲು ಸೂಚಿಸಲಾಗಿದೆ. 
ಗುಂಪು -೨ರ ಕ್ರೀಡಾಕೂಟ : ರಾಜ್ಯಮಟ್ಟದ ಪೈಕಾ ಕ್ರೀಡಾಕೂಟ ಗುಂಪು -೨ರ ಸ್ಪರ್ಧೆಗಳಾದ ಖೋಖೋ, ಕಬ್ಬಡ್ಡಿ ಮತ್ತು ಭಾರ ಎತ್ತುವ ಸ್ಪರ್ಧೆಗಳನ್ನು ಬಾಲಕ, ಬಾಲಕೀಯರಿಗೆ ಬೆಳಗಾವಿಯ ಕ್ಲಬ್ ರೋಡ್‌ನ ಸಿ.ಪಿ.ಎಡ್ ಕಾಲೇಜ್ ಮೈದಾನದಲ್ಲಿ ದಿ.೨೬ ರಿಂದ ೨೮-೧೧-೨೦೧೧ ರವರೆಗೆ ನಡೆಸಲಾಗುವುದು. ಈಗಾಗಲೇ ಜಿಲ್ಲಾಮಟ್ಟದಲ್ಲಿ ವಿಜೇತರಾದ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳ ಹೆಸರುಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ದಿನಾಂಕ ೨೬-೧೧-೨೦೧೧ ಸಿ.ಪಿ.ಎಡ್ ಕಾಲೇಜ್ ಮೈದಾನದಲ್ಲಿ ಮಧ್ಯಾಹ್ನ ೧೨.೦೦ ಗಂಟೆಯೊಳಗಾಗಿ ಕ್ರೀಡಾಪಟುಗಳು ತಮ್ಮ ಹೆಸರನ್ನು ವಯೋಮಿತಿ ಧೃಢೀಕರಣ ಹಾಗೂ ಗುರುತಿನಚೀಟಿಯೊಂದಿಗೆ ನೊಂದಾಯಿಸಲು ಸೂಚಿಸಲಾಗಿದೆ . 
ಗುಂಪು -೩ರ ಕ್ರೀಡಾಕೂಟ : ರಾಜ್ಯಮಟ್ಟದ ಗ್ರಾಮೀಣ (ಪೈಕಾ) ಕ್ರೀಡಾಕೂಟ ಗುಂಪು ೩ರನ್ನು  ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ದಿನಾಂಕ ೨೬ ರಿಂದ ೨೮-೧೧-೨೦೧೧ ರವರೆಗೆ ಜರುಗಲಿವೆ. ಈ ಕ್ರೀಡಾಕೂಟದಲ್ಲಿ ಹ್ಯಾಂಡ್‌ಬಾಲ್, ಫುಟ್ಬಾಲ್, ಟೇಬಲ್ ಟೆನ್ನಿಸ್ ಹಾಗೂ ಶೆಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಡೆಯಲಿದ್ದು, ಜಿಲ್ಲೆಯಿಂದ ಆಯ್ಕೆಯಾದ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ. ಈ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ ೨೬-೧೧-೨೦೧೧ ರ ಬೆಳಿಗ್ಗೆ ೧೦ ಗಂಟೆಯೊಳಗಾಗಿ ವಯೋಮಿತಿ ಧೃಢೀಕರಣ ಹಾಗೂ ಗುರುತಿನ ಚೀಟಿಯೊಂದಿಗೆ ತಮ್ಮ ಹೆಸರನ್ನು ನೊಂದಾಯಿಸಲು ಸೂಚಿಸಲಾಗಿದೆ.  ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆಯನ್ನು ಕ್ರೀಡಾಕೂಟದ ಸ್ಥಳದಲ್ಲಿಯೇ ನೀಡಲಾಗುವುದು ಮತ್ತು ದಿನಭತ್ಯೆಯನ್ನು ಈ ೩ ಕ್ರೀಡಾಕೂಟದ ಸಂಘಟಿಕರಲ್ಲಿ ಸಂದಾಯ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ ೯೩೪೨೩೮೭೯೩೫ ಸಿ.ಎ.ಪಾಟೀಲ್, ವ್ಹಾಲಿಬಾಲ್ ತರಬೇತುದಾರರು, ಹಾಗೂ ೯೪೮೬೩೩೧೪೬ ಎ.ಯತಿರಾಜು ಖೋಖೋ ತರಬೇತಿದಾರರು, ಕರ್ನಾಟಕ ಕ್ರೀಡಾ ಪ್ರಾಧಿಕಾರ ಅಥವಾ ಕಛೇರಿ ದೂರವಾಣಿ ಸಂಖ್ಯೆ ೦೮೫೩೯-೨೦೧೪೦೦ಗೆ ಸಂಪರ್ಕಿಸುವಂತೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಎನ್.ಘಾಡಿ ಪ್ರಕಟಣೆಯಲ್ಲಿ ಕೋರಿದ್ದಾರೆ. 

Leave a Reply

Top