ಕೊಪ್ಪಳಕ್ಕೆ ವಿಶೇಷ ಪ್ಯಾಕೇಜ್ : ನಗರಾಭಿವೃದ್ದಿಗೆ ೫೦ ಕೋಟಿ

ಕೊಪ್ಪಳ : ಚುನಾವಣೆಯಲ್ಲಿ ಗೆದ್ದ ಬಳಿಕ ಕೊಪ್ಪಳ ಕ್ಷೇತ್ರಕ್ಕೆ ದೊಡ್ಡ ಬಳುವಳಿ ನೀಡಲು ಬಿಜೆಪಿ ಸರಕಾರ ಮುಂದಾಗಿದೆ. ಡಂಬ್ರಳ್ಳಿಯಲ್ಲಿ ೨೯ರಂದು  ನಡೆಯುವ ಕಾರ್‍ಯಕ್ರಮದಲ್ಲಿ ಹೆಚ್ಚಿನ ಅನುದಾನವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.ಮಾಹಿತಿಯಂತೆ ಕೊಪ್ಪಳ ನಗರಾಭಿವೃದ್ದಿಗೆ ೫೦ ಕೋಟಿ ಹಾಗೂ ಸಂಚಾರಿ ಪೋಲೀಸ್ ಠಾಣೆ ಮಂಜೂರಿ ಮಾಡಲಾಗಿದ್ದು ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಡಂಬ್ರಳ್ಳಿಯ  ಕಾರ್‍ಯಕ್ರಮದಲ್ಲಿ ಘೋಷಣೆಯಾಗುವ ಸಂಭವವಿದೆ.  ಕರಡಿ ಸಂಗಣ್ಣನವರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಕ್ಷೇತ್ರದ ಮತದಾರರಿಗೂ ಕೃತಜ್ಞತೆಗಳನ್ನು ಸಲ್ಲಿಸಲು ಮುಖ್ಯಮಂಣಮಂತ್ರಿ  ಮುಂದಾಗಿದ್ದಾರೆ. ಜಿಲ್ಲೆಯಾದ್ಯಂತ ನಿರ್‍ಮಾಣವಾಗಿರುವ ಆಸರೆ ಮನೆಗಳ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯ ಮತ್ತು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ.
Please follow and like us:
error

Related posts

Leave a Comment