ಮಾಧ್ಯಮಗಳ ಅರಿವು ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಸಹಕಾರಿ

 ಮಾಧ್ಯಮಗಳ ಬಗ್ಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಅರಿವು ಹೊಂದುವುದು ಮಕ್ಕಳ ಮನೋವಿಕಾಸ ಮತ್ತು ಬೌದ್ಧಿಕ ವಿಕಾಸಕ್ಕೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಅಭಿಪ್ರಾಯಪಟ್ಟರು.
  ವಾರ್ತಾ ಇಲಾಖೆಯು ಜಿಲ್ಲೆಯ ಪರಿಶಿಷ್ಟ ಪಂಗಡದ ಪ್ರೌಢಶಾಲಾ ವಿ

ದ್ಯಾರ್ಥಿಗಳಿಗೆ ಏರ್ಪಡಿಸಿದ ಮೂರು ದಿನಗಳ ಶೈಕ್ಷಣಿಕ ಮಾಧ್ಯಮ ದರ್ಶನ ಪ್ರವಾಸಕ್ಕೆ ಜಿಲ್ಲಾಡಳಿತ ಭವನ ಆವರಣದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

  ಮಾಧ್ಯಮಗಳು ಸಮಾಜದಲ್ಲಿನ ಲೋಪದೋಷಗಳನ್ನು ಬಿಂಬಿಸುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವುದರಿಂದ, ಮಾಧ್ಯಮಗಳ ಸಾಮಾಜಿಕ ಹೊಣೆಗಾರಿಕೆಯ ಬಗ್ಗೆ ವಿದ್ಯಾರ್ಥಿಗಳು ಅರಿವು ಹೊಂದುವುದು ಅಗತ್ಯವಾಗಿದೆ.  ಅಲ್ಲದೆ, ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ನಾಣ್ಣುಡಿಯಂತೆ, ಐತಿಹಾಸಿಕ ಮತ್ತು ಪ್ರವಾಸಿ ತಾಣಗಳ ಪರಿಚಯ ಮಾಡಿಸುವುದರಿಂದ ಮಕ್ಕಳಲ್ಲಿನ ಜ್ಞಾನ ಜಾಗೃತಿಗೊಳ್ಳಲಿದೆ.  ಬಡ ಮಕ್ಕಳಿಗೆ, ಅದರಲ್ಲೂ ಪರಿಶಿಷ್ಟ ಪಂಗಡದ ಮಕ್ಕಳಿಗೆ ವಿವಿಧ ಪತ್ರಿಕೆಗಳ ಕಾರ್ಯಾಲಯಗಳು, ಆಕಾಶವಾಣಿ ಮುಂತಾದ ಮಾಧ್ಯಮ ಕ್ಷೇತ್ರದ ಕಾರ್ಯಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು  ವಾರ್ತಾ ಇಲಾಖೆ ಹಮ್ಮಿಕೊಂಡಿರುವ ಶೈಕ್ಷಣಿಕ ಮಾಧ್ಯಮ ದರ್ಶನ ಪ್ರವಾಸ ಕಾರ್ಯಕ್ರಮ ಶ್ಲಾಘನೀಯವಾಗಿದೆ.  ಶೈಕ್ಷಣಿಕ ಮಾಧ್ಯಮ ದರ್ಶನ ಪ್ರವಾಸ ಯಶಸ್ವಿಗೊಳ್ಳಲಿ ಎಂದು  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಹೇಳಿದರು.
  ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ., ವಸತಿ ನಿಲಯಗಳ ಮೇಲ್ವಿಚಾರಕಾರದ  ಭಗವಂತಪ್ಪ, ವಿಜಯಲಕ್ಷ್ಮಿ ಬೆಲ್ಲದ, ಲಕ್ಷ್ಮಿ ಸುಣಗಾರ್, ವಾರ್ತಾ ಇಲಾಖೆಯ ಸಿಬ್ಬಂದಿಗಳಾದ ಅವಿನಾಶ್ ಅವರು ಉಪಸ್ಥಿತರಿದ್ದರು.

Leave a Reply