ವಕ್ಫ್ ಸ್ವತ್ತುಗಳ ನೋಂದಣಿಗೆ ಸೂಚನೆ

  ಜಿಲ್ಲೆಯಲ್ಲಿ ಇದುವರೆಗೂ ನೋಂದಣಿಯಾಗದೇ ಇರುವ ವಕ್ಫ್ ಸ್ವತ್ತುಗಳನ್ನು ಕೂಡಲೆ ಸಂಬಂಧಪಟ್ಟವರು ವಕ್ಫ್ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನೂರ ಅಹ್ಮದ್ ಹಣಜಗೇರಿ ತಿಳಿಸಿದ್ದಾರೆ.
  ಜಿಲ್ಲೆಯಲ್ಲಿ ಇದುವರೆಗೂ ನೋಂದಾಯಿಸದೇ ಇರುವ ವಕ್ಫ್ ಸ್ವತ್ತುಗಳಾದ ಮಸ್ಜೀದ, ದರ್ಗಾ, ಆಸೊರಖಾನ, ಮುಸ್ಲಿಂ ಖಬರಸ್ತಾನ, ಈದ್ಗಾ, ಮುಸ್ಲಿಂ ಶಾದಿ ಮಹಲ್, ಮಹೆಬೂಬ ಸುಭಾನಿ ಛಿಲ್ಲಾ ಹಾಗೂ ಮುಂತಾದವುಗಳು ಇರುವುದು ಕಂಡುಬಂದಿದ್ದು, ಕೂಡಲೆ ಅಂತಹವುಗಳನ್ನು  ವಕ್ಫ್ ಮಂಡಳಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
ವಕ್ಫ್ ಕಾಯ್ದೆ ೧೯೯೫  ಕಲಂ ೪೩ ರ ಅನ್ವಯವಾಗುವ ಮುಸ್ಲೀಂಮ್ಸ್ ಧಾರ್ಮಿಕ ವಿವಿಧ ಸಂಸ್ಥೆಗಳ ವಕ್ಫ್ ಸ್ವತ್ತುಗಳನ್ನು ವಕ್ಫ್ ಕಾಯ್ದೆ ೧೯೯೫ ಕಲಂ ೩೬ ರಂತೆ ವಕ್ಫ್ ಮಂಡಳಿಯಲ್ಲಿ ನೊಂದಾಯಿಸಿಕೊಳ್ಳುವ ಮೂಲಕ ಮಂಡಳಿಗೆ ಸೇರಿದ ಸದರಿ ಸಂಸ್ಥೆಗಳ ಕಾರ್ಯನಿರ್ವಹಣೆ ಹಾಗೂ ಅಭಿವೃದ್ದಿಗೊಳಿಸಲು ಮತ್ತು ಸ್ವತ್ತುಗಳ ಸೂಕ್ತ ರಕ್ಷಣೆಗೋಸ್ಕರ ಸಲುವಾಗಿ ವಕ್ಫ್ ಮಂಡಳಿಯಲ್ಲಿ ನೊಂದಣಿಯಾಗದೇ ಇರುವ ವಕ್ಫ್ ಸ್ವತ್ತುಗಳ ಸಂಬಂದ ಪಟ್ಟ ಕಮೀಟಿಗಳು/ಮುತವಲ್ಲಿಗಳ ಜವಾಬ್ದಾರಿಯಾಗಿರುತ್ತದೆ.
ಈ ಕಮೀಟಿಗಳಿಗೆ/ಮುತವಲ್ಲಿಗಳು ಯಾವುದೇ ತಮ್ಮ ಆಸ್ತಿಗಳನ್ನು ವಕ್ಫ್ ಮಂಡಳಿಯಲ್ಲಿ ನೊಂದಾಯಿಸಲು ನಿರ್ಲಕ್ಷಿಸಿದರೆ ಕಲಂ ೬೧ (೨) ವಕ್ಫ್ ಕಾಯ್ದೆ ೧೯೯೫, ರಂತೆ ಶಿಕ್ಷಾರ್ಹ ಅಪರಾಧವಾಗಿದ್ದು ಸಂಬಂಧಪಟ್ಟವರ ವಿರುದ್ದ ವಕ್ಫ್ ಕಾಯ್ದೆ ೧೯೯೫ ರ ಕಾನೂನಿನ ಪ್ರಕಾರ ಮುಂದಿನ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದರ ಮೂಲಕ ರಾಜ್ಯ ವಕ್ಫ್ ಮಂಡಳಿ ಬೆಂಗಳೂರು ಇವರಿಗೆ ವರದಿ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ವಕ್ಫ್ ಸ್ವತ್ತುಗಳ ವಕ್ಫ್ ಆಸ್ತಿಯನ್ನು ವಕ್ಫ್ ಮಂಡಳಿಯಲ್ಲಿ ನೊಂದಾಯಿಸಲು ಕಲಂ ೩೬ ರಂತೆ ವಕ್ಫ್ ಕಾಯ್ದೆ ೧೯೯೫ ರ ಪ್ರಕಾರ ಮಾಡುವುದರಿಂದ ಸದರಿ ವಕ್ಫ್ ಆಸ್ತಿಯ ಅಭಿವೃದ್ದಿಯ ಕುಂಠಿತವನ್ನು ತಪ್ಪಿಸಲು ಮತ್ತು ಒತ್ತುವರಿಯಾಗಿದ್ದಲ್ಲಿ ಅಂತಹವುಗಳನ್ನು ತೆರವುಗೊಳಿಲಾಗುವುದು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನೂರ ಅಹ್ಮದ್ ಹಣಜಗೇರಿ ಅವರು ತಿಳಿಸಿದ್ದಾರೆ.
Please follow and like us:
error