ಕುಕನೂರಿನ ಅನ್ನದಾನೇಶ್ವರ ಸಂಸ್ಥಾನಮಠದಿಂದ ರಕ್ತದಾನ ಶಿಬಿರ

ಕೊಪ್ಪಳ : ಮುಂಡರಗಿ ಅಜ್ಜನ ( ವೆಂಕಟಾಪೂರ) ಪುಣ್ಯಸ್ಮರಣೋತ್ಸವ ಮತ್ತು ಅಕ್ಕಮಹಾದೇವಿಯ ಜಯಂತಿಯ ಅಂಗವಾಗಿ ಕುಕನೂರಿನ ಕುಕನೂರಿನ ಅನ್ನದಾನೇಶ್ವರ ಸಂಸ್ಥಾನಮಠದಿಂದ ರಕ್ತದಾನ ಶಿಬಿರ  ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಾಹಿತಿ ಕೆ.ಬಿ.ಬ್ಯಾಳಿ ಹೇಳಿದರು. ಅವರು ನಗರದ ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.               ಅಂದು  ಬೆಳಿಗ್ಗೆ 7-30ಕ್ಕೆ ಷಟಸ್ಥಲ ದ್ವಜಾರೋಹಣ, 8-30ಕ್ಕೆ ಪಾದಯಾತ್ರ ನಂತರ 10:30ಕ್ಕೆ ರಕ್ತದಾನ ಶಿಬಿರ ಕಾರ್ಯಕ್ರಮ ಜೊತೆಗೆ ಉಚಿತ ಆರೋಗ್ಯ ತಪಾಸಣೆ ಯನ್ನು , ಸಂಜೆ 6-30ಕ್ಕೆ ಗುರುಸ್ಮರಣೆ ಮತ್ತು ಶಿವಾನುಭವದ ಶತಮಾನೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ . ಮಠಗಳು ಕೇವಲ ಧಾರ್ಮಿಕ ವಿಚಾರಗಳನ್ನಷ್ಟೇ  ಹರಡುವ ಕೆಲಸ ಮಾಡಬಾರದು ಅದರ ಜೊತೆಗೆ ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯೊಂದಿಗೆ ಇಂತಹ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎನ್ನುವ ಉದ್ದೇಶದಿಂದ  ಈ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ  ಸಾರ್ವಜನಿಕರು ಹಾಗೂ ಮಠದ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ  ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದರು.

 ಈ ಸಂದರ್ಭದಲ್ಲಿ ಡಾ.ಕೆ.ಜಿ.ಕುಲಕರ್ಣಿ, ಮರಿಯಮ್ಮನಹಳ್ಳಿ ಹಾಗೂ ಕುಕನೂರಿನ ಶಾಖಾ ಮಠದ ಮಹಾದೇವಸ್ವಾಮಿಗಳು ಹಾಗೂ ವಿ.ಜಿ.ಬಳಿಗೇರಿ, ಶ್ರೀನಿವಾಸ ಹ್ಯಾಟಿ, ರುದ್ರಪ್ಪ ಬಂಡಾರಿ ಉಪಸ್ಥಿತರಿದ್ದರು.
Please follow and like us:
error

Related posts

Leave a Comment