ಬಿಎಸ್‌ಆರ್ ಕಾಂಗ್ರೆಸ್ ಬೃಹತ್ ಸಮಾವೇಶ

 ಕೊಪ್ಪಳಕ್ಕೆ ಶ್ರೀ ರಾಮುಲು ಮತ್ತು ಅಬು ತಾಲೀಬ್ ಭೇಟಿ: ಅಭಿಮಾನಿಗಳಿಂದ ಸೈಯದ್‌ಗೆ ಸನ್ಮಾನ 
ಹಾಗೂ ಅಬ್ದುಲ್‌ಕಲಾಂ ಕಾಲೇಜ್ ಕಟ್ಟಡಕ್ಕೆ ಅಡಿಗಲ್ಲು 
ಕೊಪ್ಪಳ,ಜ.೦೮:   ದಿ. ೯ ರಂದು ನಗರದ ಸಾರ್ವಜನಿಕ ಮೈದಾನದಲ್ಲಿ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ಬೆಳಿಗ್ಗೆ ೧೧ ಗಂಟೆಗೆ ಜರುಗಲಿದೆ.
 ಸಮಾರಂಭದ ದಿವ್ಯ ಸಾನಿಧ್ಯವನ್ನು ಸ್ಥಳಿಯ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿ, ಗದಗ ಪುಟ್ಟರಾಜ ಗವಾಯಿಗಳ ಪುಣ್ಯಾಶ್ರಮದ ಪರಮಪೂಜ್ಯ ಕಲ್ಲಯ್ಯಸ್ವಾಮಿ ಹಾಗೂ ಇಟಗಿ ವಿರೇಶ್ವರ ಮಠದ ಶಿವಶರಣ ಗದ್ದಗೆಪಜ್ಜ ವಹಿಸಲಿದ್ದಾರೆ.
 ಸಮಾರಂಭದಲ್ಲಿ ಬಿಎಸ್‌ಆರ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಸ್ವಾಭಿಮಾನಿ ಶ್ರೀರಾಮುಲು ಹಾಗೂ ಬಿಎಸ್‌ಆರ್ ಪಾರ್ಲಮೆಂಟರಿ ಬೋರ್ಡನ ಚೆರ್‍ಮೇನ್‌ರಾದ ಕಲಕತ್ತಾದ ಮೌಲಾನಾ ಅಬು ತಾಲೀಬ್ ರೆಹಮಾನೀಯಾ ಸೇರಿದಂತೆ ಸಂಸದರಾದ ಸಣ್ಣ ಪಕೀರಪ್ಪ,  ಜೆ. ಶಾಂತಾ, ಮಾಜಿ ಸಂಸದರಾದ ಕೆ. ವಿರುಪಾಕ್ಷಪ್ಪ, ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ಬಿ. ಸುರೇಶಬಾಬು, ಮಹಿಳಾ ರಾಜ್ಯಾಧ್ಯಕ್ಷೆ ಹಾಗೂ ಚಲನಚಿತ್ರ ನಟಿ ರಕ್ಷಿತಾಪ್ರೇಮ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾದ ಅಂಬಿಕಾ ಜಾಲಗಾರ, ಪಕ್ಷದ ರಾಜ್ಯ ವಕ್ತಾರ ವೈ.ಎನ್. ಗೌಡರ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳು ರಾಜ್ಯ ಡಾ. ಮಹಿಪಾಲ್, ಎಂಎಲ್‌ಸಿ ಮೃತುಂಜಯ್ಯ ಜಿನಗಾ, ಜಿಲ್ಲಾ ಸಂಚಾಲಕ ಟಿ. ರತ್ನಾಕರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಕ್ಷ್ಮೀಪ್ರೀಯಾ ಮುಖಂಡರಾದ ಪ್ರಭುಗೌಡ ಪಾಟೀಲ್ ಅಲ್ಲದೇ ನವೀನ ಕುಮಾರ ಗುಳಗಣ್ಣವರು, ರಾಜಶೇಖರ ಗೋನಾಳ ಕುಷ್ಟಗಿ ಪಾಲ್ಗೊಳ್ಳಲಿದ್ದಾರೆ. 
ಸೈಯದ್ ಪೌಂಡೇಷನ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಕೆ.ಎಂ. ಸಯ್ಯದ್ ರವರು ಕೊಪ್ಪಳದಲ್ಲಿ ನೂತನವಾಗಿ ಪ್ರಾರಂಭಿಸಲಿರುವ ಅಬ್ದುಲ್ ಕಲಾಂ ಕಾಲೇಜ್ ಕಟ್ಟಡದ ಅಡಿಗಲ್ಲು ಮತ್ತು ಉಚಿತವಾಗಿ ಜನತೆಗೆ ಕುಡಿಯುವ ನೀರು ಪೂರೈಕೆಗಾಗಿ ಗ್ರಾಮಕ್ಕೊಂದು ಕೊಳವೆಭಾವಿ ತೆರೆಯುವ ಕಾರ್ಯಕ್ರಮಕ್ಕೆ ಚಾಲನೆ ಸ್ವಾಭಿಮಾನಿ ಶ್ರೀರಾಮುಲು ಚಾಲನೆ ನೀಡಲಿದ್ದಾರೆ ಅಲ್ಲದೇ ಇತ್ತಿಚಿಗಷ್ಟೆ ಇಂದಿರಾಗಾಂಧಿ ಪ್ರಿಯದರ್ಶಿನಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಕೆ. ಎಂ. ಸೈಯದ್ ರವರಿಗೆ ಅವರ ಅಭಿಮಾನಿ ಬಳಗದ ವತಿಯಿಂದ ಬೃಹತ್ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ 
 ಬೆಳಿಗ್ಗೆ ೧೦.೩೦ ಗಂಟೆಗೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ, ಅಧ್ಯಕ್ಷರಾದ ಬಿ.ಶ್ರೀರಾಮುಲು ರವರು ನಗರಕ್ಕೆ ಆಗಮಿಸಲಿದ್ದು ಅವರನ್ನು ಆದರದಿಂದ ಸ್ವಾಗತಿಸುವ ಮೂಲಕ ಗವಿಮಠಕ್ಕೆ ತೇರಳಿ ಶ್ರೀಗಳ ಆಶೀರ್ವಾದ ಪಡೆಯಲಾಗುವುದು. ನಂತರ ಬಸವೇಶ್ವರ ವೃತ್ತ (ಗಂಜ್ ಸರ್ಕಲ್)ದಿಂದ ಬೈಕ್ ರ್‍ಯಾಲಿ ಪ್ರಾರಂಭಿಸಿ ಹೆದ್ದಾರಿ ೬೩ ರ ಮೂಲಕ ಅಶೋಕ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಭಾಗ್ಯನಗರಕ್ಕೆ ತೇರಳಿ ಅಲ್ಲಿ ಉಚಿತ ಕೊಳವೆ ಬಾವಿ(ಬೋರ್‌ವೆಲ್)ಗೆ ಚಾಲನೆ ನೀಡುವುದು. ಅಲ್ಲಿಂದ ನಗರದ ಅಮೀನ್‌ಪುರ್ ಕ್ರಾಸ್,  ಟಿಪ್ಪುಸುಲ್ತಾನ್ ಸರ್ಕಲ್, ದಿವಟರ್ ಸರ್ಕಲ್‌ನಿಂದ ದುರ್ಗಮ್ಮ ದೇವಸ್ಥಾನಕ್ಕೆ ತೇರಳಿ ಪೂಜೆ ಸಲ್ಲಿಸಲಾಗುವುದು. ಅಲ್ಲಿಂದ ಆಜಾದ್ ಸರ್ಕಲ್, ಕಿತ್ತೂರ ಚೆನ್ನಮ್ಮ ಸರ್ಕಲ್, ಪಲ್ಟಾನ್‌ಗಲ್ಲಿ ಬಳಿಯ ಪೀರ್‌ಪಾಷಾ ಖಾದ್ರಿ ದರ್ಗಾಕ್ಕೆ ಪೂಜೆ ಸಲ್ಲಿಸಿ ನಂತರ ಗಡಿಯಾರ ಕಂಬಕ್ಕೆ ತೇರಳಿ ಅಲ್ಲಿಗೆ ಬೈಕ್ ರ್‍ಯಾಲಿ ಅಂತ್ಯಗೊಳಿಸಲಾಗುವುದು. ಅಲ್ಲಿಂದ ಕುಂಬ, ಕಳಶ, ಡೊಳ್ಳು, ಬಾಜಭಜಂತ್ರಿಗಳ ಮೂಲಕ ಭವ್ಯ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯೂ ಜವಾಹರ್ ರೋಡ್ ಮೂಲಕ ಅಶೋಕ ವೃತ್ತದ ಮುಖಾಂತರ ಸಾರ್ವಜನಿಕ ಮೈದಾನದ ಸಮಾವೇಶದ ವೇದಿಕೆ ಕರೆತರಲಾಗುವುದು. ಸುಮಾರ ೨ ಗಂಟೆಗೆ ಬಹಿರಂಗ ಸಮಾವೇಶ ನಡೆಸಲಾಗುವುದು ಎಂದು ಮಾಧ್ಯಮ ವಕ್ತಾರ ಎಸ್.ಜಿ. ಕಟ್ಟಿಮನಿ  ತಿಳಿಸಿದ್ದಾರೆ.
Please follow and like us:
error