You are here
Home > Koppal News > ಬಿಳ್ಕೋಡುಗೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ

ಬಿಳ್ಕೋಡುಗೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ

ಕೊಪ್ಪಳ : ನಗರದ ಪ್ರತಿಷ್ಠಿತ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದಿಂದ ಪದವಿ ವಿದ್ಯಾರ್ಥಿಗಳಿಗೆ ಬಿಳ್ಕೂಡುಗೆ ಕಾರ್ಯಕ್ರಮ ಹಾಗೂ ಡಾ.ಆರ್.ಎಂ.ಪಾಟೀಲರಿಂದ ಹರ್ಡೆಕರ್ ಮಂಜಪ್ಪನವರ ಕುರಿತು ದತ್ತಿ ಉಪನ್ಯಾಸ ದಿನಾಂಕ ೧೬.೦೪.೨೦೧೦ರಂದು ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಏಕಕಾಲದಲ್ಲಿ ನಡೆಯಿತು. ಮುಖ್ಯ ಉಪನ್ಯಾಸಕರಾಗಿ ವಿಜಾಪೂರದ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಬಿ. ಎಂ. ಹಿರೇಮಠ ಸಮಾರಂಭವನ್ನು ಕುರಿತು ಹರ್ಡೇಕರ್ ಮಂಜಪ್ಪನವರು ಕರ್ನಾಟಕದ ಗಾಂಧಿಯೆಂದು ಕರೆಸಿಕೊಂಡಂತವರು. ಇವರು ಶಿಕ್ಷಣ ಪ್ರೇಮಿಗಳಾಗಿದ್ದರಿಂದಲೇ ಕರ್ನಾಟಕದಲ್ಲಿ ಇಂದು ಅನೇಕ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿವೆ. ಆಜೀವ ಬ್ಯಹ್ಮಚಾರಿಯಾಗಿ ಅಹಿಂಸೆ, ಸತ್ಯ, ಆದರ್ಶ, ಉತ್ತಮ ಮೌಲ್ಯಗಳನ್ನು ರೂಡಿಸಿಕೊಂಡಿದ್ದರು. ಅವರ ವಿಚಾರಗಳು ಇಂದಿಗೂ ಕೂಡಾ ಪ್ರಸ್ತುತವಾಗಿವೆ ಎಂದರು. ಬಿಳ್ಕೋಡುಗೆ ಸಮರಾಂಭದ ಕುರಿತು ವಿದ್ಯಾರ್ಥಿಗಳಿಗೆ ದುಡಿಮೆ ಕಾಯಕ ಉತ್ತಮ ಮೌಲ್ಯಗಳನ್ನ ರೂಡಿಸಿಕೊಳ್ಳಲು ವಿದ್ಯಾಥಿಗಳಿಗೆ ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಅಲ್ಲಮಪ್ರಭು ಬೆಟ್ಟದೂರ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ವಿದ್ಯಾರ್ಥಿ ಒಕ್ಕೂಟದ ಮುಖ್ಯಸ್ಥರಾದ ಡಾ. ಜೆ. ಎಸ್. ಪಾಟೀಲ ಉಪಸ್ಥತರಿದ್ದರು. ಈ ಕಾರ್ಯಕ್ರಮದಲ್ಲಿ ಇತ್ತಿಚೆಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯಿಂದ ಪಿ.ಹೆಚ್‌ಡಿ ಪಡೆದ ಹಿಂದಿ ವಿಭಾಗದ ಪ್ರಧ್ಯಾಪಕ ದಯಾನಂದ ಸಾಳಂಕಿ, ಕನ್ನಡ ಉಪನ್ಯಾಸಕರಾದ ಪ್ರಕಾಶ ಬಳ್ಳಾರಿ, ಮಾರ್ಕಂಡೇಶ ಹಂದ್ರಾಳ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಸ್ವಾಗತವನ್ನು ಪ್ರೋ.ಬಸವರಾಜ ಪೂಜಾರ, ಅತಿಥಿ ಪರಿಚಯವನ್ನ ಪ್ರೊ. ಎಂ.ಎಂ.ಕಂಬಾಳಿಮಠ ನಿರೂಪಣೆಯನ್ನ ಪ್ರೊ. ಎಸ್. ಬಿ. ಹಿರೆಮಠ ನೆರವೇರಿಸಿದರು.

Leave a Reply

Top