You are here
Home > Koppal News > ಕನ್ನಡದಲ್ಲಿ ಔಷಧಗಳ ಕಾಯ್ದೆ, ನಿಯಮ ಪುಸ್ತಕ ಬಿಡುಗಡೆ.

ಕನ್ನಡದಲ್ಲಿ ಔಷಧಗಳ ಕಾಯ್ದೆ, ನಿಯಮ ಪುಸ್ತಕ ಬಿಡುಗಡೆ.

 ಗಂಗಾವತಿ-30- ನಗರದ ಔಷಧೀಯ ಭವನದಲ್ಲಿ ಔಷಧಗಳು ಮತ್ತು ಕಾಂತಿವರ್ಧಕ ಕಾಯಿದೆ-೧೯೪೦ ಮತ್ತು ಔಷಧಗಳು ಮತ್ತು ಕಾಂತಿವರ್ಧಕಗಳ ನಿಯಮಾವಳಿ-೧೯೪೫ ಈ ನಿಯಮದ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ಬಿಡುಗಡೆ ಮಾಡಲಾಯಿತು. ನ್ಯಾಯಾಲಯದ ಕಲಾಪಗಳಿಗೆ ಮತ್ತು ಔಷಧ ವ್ಯಾಪಾರಿಗಳಿಗೆ ಅನುಕೂಲವಾಗಬೇಕೆಂಬ ದೃಷ್ಠಿಯಿಂದ ಕನ್ನಡದ ಜೊತೆಗೆ ಇಂಗ್ಲೀಷ ಭಾಷೆಯಲ್ಲಿ ಸಂಯುಕ್ತವಾಗಿ ಇದನ್ನು ಪ್ರಕಟಿಸಲಾಗಿದೆ. ಈ ಪುಸ್ತಕವನ್ನು ಗಂಗಾವತಿ ಕಲ್ಮಠದ ಶ್ರೀಗಳಾದ ಪ್ರ.ನಿ.ಸ್ವ. ಡಾ. ಕೊಟ್ಟೂರ ಸ್ವಾಮಿಗಳು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಉಪನ್ಯಾಸಕರುಗಳಾದ ಡಾ. ಜಾಜಿ ದೇವೆಂದ್ರಪ್ಪ, ಡಾ. ಶರಣಬಸಪ್ಪ ಕೋಲ್ಕಾರ, ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಮತ್ತು ಶ್ರೀಮತಿ ಸಂಧ್ಯಾ ವಕೀಲರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾಗತ ಮತ್ತು ಪ್ರಸ್ತಾವನೆಯನ್ನು ಅಶೋಕಸ್ವಾಮಿ ಹೇರೂರ ನೆರವೇರಿಸಿದರು. ನಾಗರಾಜಸ್ವಾಮಿ ನಿರೂಪಿಸಿದರು. ದೃಶ್ಯ ಮಾಧ್ಯಮದ ನಿರೂಪಕಿ ವೀಣಾ ಮುದಗಲ್ ಪ್ರಾರ್ಥಿಸಿದರು. ಶ್ರೀಮತಿ ಶೈಲಜಾ ಮುಂತಾದವರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ನಗರದ ಗಣ್ಯರನ್ನು  ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅಶೋಕಸ್ವಾಮಿ ಹೇರೂರ ಅವರ ೫೦ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

Leave a Reply

Top