ಗವಿಸಿದ್ಧ ಎನ್. ಬಳ್ಳಾರಿ ೯ ನೇ ಪುಣ್ಯಸ್ಮರಣೆ

 ಪುಸ್ತಕ ಬಿಡುಗಡೆ, ಕವಿಗೋಷ್ಠಿ ಮತ್ತು ನಾಟಕ ಪ್ರದರ್ಶನ
ಕೊಪ್ಪಳ : ಗವಿಸಿದ್ಧ ಎನ್. ಬಳ್ಳಾರಿ ವೇದಿಕೆಯ ವತಿಯಿಂದ ಕವಿ ಗವಿಸಿದ್ಧ ಬಳ್ಳಾರಿಯವರ ೯ ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಇದೇ ದಿ. ೨೧-೦೩-೨೦೧೩, ಗುರುವಾರದಂದು ಡಾ.ಜ.ಚ.ನಿ ಜನ್ಮಶತಾಬ್ದಿ ಭವನದಲ್ಲಿ (ಡಾ. ಆರ್.ಎಂ. ಪಾಟೀಲರ ಮನೆ ಮೇಲೆ) ಸಂಜೆ ೬.೦೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಡಾ. ಪ್ರಕಾಶ ಬಳ್ಳಾರಿಯವರ ‘ಕುದರಿಮೋತಿ ಮೊಹರಂ ಆಚರಣೆ ಮತ್ತು ಅಲೆಮಾರಿ ಜನಾಂಗಗಳು : ಒಂದು ಅಧ್ಯಯನ’ ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ರಹಮತ್ ತರೀಕೆರೆ ಬಿಡುಗಡೆ ಮಾಡಿ, ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಣ್ಣ ನಿಂಗೋಜಿ ವಹಿಸಲಿದ್ದು, ವಿಶೇಷ ಆಮಂತ್ರಿತರಾಗಿ ಶಾಸಕರಾದ ಸಂಗಣ್ಣ ಕರಡಿ, ಜಿ.ಪಂ. ಅಧ್ಯಕ್ಷ ರಾಘವೇಂದ್ರ ಹಿಟ್ನಾಳ, ಬುಡ್ಗಜಂಗಮ ಕ್ಷೇಮಾಭಿವೃದ್ಧಿ ಸಂಘ (ರಿ), ಬಳ್ಳಾರಿಯ ಜಿಲ್ಲಾಧ್ಯಕ್ಷ ಸಣ್ಣ ಮಾರೆಪ್ಪ, ಸಿ. ಚಂದ್ರಶೇಖರ ಯೋಜನಾಧಿಕಾರಿಗಳು ನಿರ್ಮಿತಿ ಕೇಂದ್ರ, ಹುಬ್ಬಳ್ಳಿ-ಧಾರವಾಡ, ಪ್ರಥಮ ದರ್ಜೆ ಗುತ್ತಿಗೆದಾರರಾದ ಬಸವರಾಜ ಪುರದ, ಜೆ.ಡಿ.ಎಸ್. ಮುಖಂಡ ಸುರೇಶ ಭೂಮರೆಡ್ಡಿ, ಬಿ.ಎಸ್.ಆರ್. ಮುಖಂಡ ಕೆ.ಎಂ. ಸಯ್ಯದ್, ರಾಜಶೇಖರ ಆಡೂರ ಮತ್ತು ಕುದರಿಮೋತಿಯ ಖಾಜಾ ಮೈನುದ್ಧೀನ್ ಮಕಾನ್‌ದಾರ್ ಆಗಮಿಸಲಿದ್ದಾರೆ.
ನಂತರ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸ.ಸ. ಮಾಳವಾಡ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಎ.ಎಂ. ಮದರಿ ವಹಿಸಿಕೊಳ್ಳಲಿದ್ದಾರೆ. ೩೦ ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಲಿದ್ದಾರೆ. ಇದಾದ ನಂತರ ರಾತ್ರಿ ೮ ಗಂಟೆಗೆ ‘ಕೂಗ ಕೇಳುವವರಿಲ್ಲ’ ನಾಟಕ ಪ್ರದರ್ಶನವಿರುತ್ತದೆ. ನಾಜಿರಾ ಬಬ್ಬರ್ ಅವರ ಹಿಂದಿ ಮೂಲ ನಾಟಕ ‘ದಯಾಶಂಕರಕಿ ಡೈರಿ’ಯನ್ನು, ಸೂರ್ಯಕಾಂತ ಗುಣಕಿಮಠ ಅವರು ಕನ್ನಡಕ್ಕೆ ‘ಕೂಗ ಕೇಳುವವರಿಲ್ಲ’ ಹೆಸರಿನಲ್ಲಿ ತಂದಿದ್ದಾರೆ. ದಕ್ಷಿಣೀ ಕಲಾ ತಂಡ, ಬೆಂಗಳೂರು ಇವರು ನಾಟಕ ಪ್ರಸ್ತುತ ಪಡಿಸುವರು. ಎಂ.ಸಿ. ಆನಂದ ನಿರ್ದೇಶನದ ಈ ನಾಟಕದಲ್ಲಿ ಸೂರ್ಯಕಾಂತ ಗುಣಕಿಮಠ ಇವರೂ ಅಭಿನಯಿಸುತ್ತಿದ್ದಾರೆ. ನಾಟಕವನ್ನು ಉಚಿತವಾಗಿ ಪ್ರಯೋಗಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಸಕ್ತರೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಗವಿಸಿದ್ಧ ಎನ್. ಬಳ್ಳಾರಿ ವೇದಿಕೆಯ ಸಂಚಾಲಕರಾದ ಎಚ್.ಎಸ್. ಪಾಟೀಲ, ಅಲ್ಲಮಪ್ರಭು ಪಾಟೀಲ ಮತ್ತು ಡಾ. ಪ್ರಕಾಶ ಬಳ್ಳಾರಿ ಕೋರಿದ್ದಾರೆ.
Please follow and like us:
error