ಭಾಗ್ಯನಗರದ ಮುಸ್ಲಿಂ ಪಂಚ ಕಮೀಟಿಯವರ ಸೇವೆ ಶ್ಲಾಘನೀಯ – ರಾಘವೇಂದ್ರ ಹಿಟ್ನಾಳ

ಕೊಪ್ಪಳ : ಖತ್ನಾ ಮಾಡಿಸುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಅಲ್ಪಸಂಖ್ಯಾತ ಸಮುದಾಯದವರು ಶಿಕ್ಷಣಕ್ಕೂ ಮಹತ್ವ ಕೊಡಬೇಕು.  ಭಾಗ್ಯನಗರದ ಮುಸ್ಲಿಂ ಪಂಚ ಕಮೀಟಿಯವರಿಂದ  ಸತತವಾಗಿ ಹಮ್ಮಿಕೊಳ್ಳಲಾಗುತ್ತಿರುವ ಉಚಿತ ಖತ್ನಾ ಶಿಬಿರಗಳು ಶ್ಲಾಘನೀಯ.  ಇಬ್ರಾಹಿಂಸಾಬ್ ಬಿಸರಳ್ಳಿಯವರ ನೇತೃತ್ವದಲ್ಲಿ ಭಾಗ್ಯನಗರದಲ್ಲಿ ಸಾಮಾಜಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದು ಅಭಿನಂದನೀಯ.  ಇದೇ ರೀತಿ ಬಡ ಜನರಿಗೆ ನೆರವಾಗಲು ಉಚಿತ ಸಾಮೂಹಿಕ ನಿಖಾಃ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳಲಿ  ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಭಾಗ್ಯನಗರದ ಮುಸ್ಲಿಂ ಪಂಚ ಕಮೀಟಿ ಜಾಮೀಯಾ ಮಸ್ಜೀದ್ ಆವರಣದಲ್ಲಿ ಹಮ್ಮಿಕೊಂಡಿದ್ದ ೫ನೇ ಉಚಿತ ಖತ್ನಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿಯೇ ಮೊದಲ ಬಾರಿಗೆ ೨೫೦ ಅಲ್ಪಸಂಖ್ಯಾತರಿಗೆ ಭೂಮಿ ಕೊಡಲಾಗುತ್ತಿದೆ. ಅಲ್ಲದೇ ಅಲ್ಪಸಂಖ್ಯಾತರ ಮಾದರಿ ಶಾಲೆಯನ್ನ ತರಲಾಗವುದು. ನಮ್ಮವರೇ ನೀಡಲು ನಿಂತಿರುವಾಗ ಪಂಕ್ತಿಯ ಕೊನೆಯಲ್ಲಿದ್ದರೂ ಊಟ ಸಿಗುತ್ತೆ ಅನ್ನುವ ಭರವಸೆ ಇದೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು  ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡು ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ ,ಶಾದಿಮಹಲ್ ಕಟ್ಟಿಸಬೇಕು ಎನ್ನುವ ಬೇಡಿಕೆಯನ್ನು ಖಂಡಿತ ಈಡೇರಿಸುತ್ತೇನೆ ಮುಂದಿನ ದಿನಗಳಲ್ಲಿ ಸಾಮೂಹಿಕ ಉಚಿತ ನಿಖಾಃ ಕಾರ‍್ಯಕ್ರಮ ಹಮ್ಮಿಕೊಂಡರೆ ನಮ್ಮ ಸಹಾಯ,ಸಹಕಾರ ಖಂಡಿತ ಇರುತ್ತೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ  ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಸೀಪ್ ಅಲಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಉದ್ಯಮಿ  ಹಾಗು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ಹಿರಿಯ ಪತ್ರಕರ್ತ,ಸಾಹಿತಿ ವಿಠ್ಠಪ್ಪ ಗೋರಂಟ್ಲಿ, ಡಾ. ಹಸನ್ ಅಲಿ ಕೊಪ್ಪಳ, ಪೀರಾಹುಸೇನ್ ಹೊಸಳ್ಳಿ, ನಗರಸಭಾ ಮಾಜಿ ಉಪಾಧ್ಯಕ್ಷ ಅಮ್ಜದ್ ಪಟೇಲ್  ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ಜುಲ್ಲುಸಾಬ ಖಾದ್ರಿ, ಉದ್ಯಮಿ  ಹಾಗು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀನಿವಾಸ ಗುಪ್ತಾ, ಹಾಜಿ ಇಸ್ಮಾಯಿಲ್ ಖಾನ್, ಶ್ರೀಮತಿ ಜೈನಾಬಿ ಡಾ.ಮಾಬುಸಾಬ ಬಿಸರಳ್ಳಿಯವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.  ವೇದಿಕೆಯ ಮೇಲೆ  ಭಾಗ್ಯನಗರ ಗ್ರಾ.ಪಂ. ಅಧ್ಯಕ್ಷ ಹೊನ್ನೂರಸಾಬ ಬೈರಾಪೂರ,  ಭಾಗ್ಯನಗರ ಪಂಚಕಮೀಟಿಯ  ಉಪಾಧ್ಯಕ್ಷರಾದ ಮೌಲಾಹುಸೇನ ಹಣಗಿ, ಖಾಜಾಸಾಬ ಖಾಲಿಮಿರ್ಚಿ, ಗುತ್ತಿಗೆದಾರರಾದ ಕೃಷ್ಣ ಇಟ್ಟಂಗಿ, ಚನ್ನಪ್ಪ ತಟ್ಟಿ , ಬಾಷುಸಾಬ ದಲಾಯತ್, ಖಾಜಾ ಪಟೇಲ್, ಹಾಜಿ ಕುತ್ಬುದ್ದಿನಸಾಬ,ರಶೀದಸಾಬ ಮಿಠಾಯಿ, ರಾಜಾಸಾಬ ಬಿಸರಳ್ಳಿ, ಡಾ.ಉಪೇಂದ್ರ ಉಪಸ್ಥಿತರಿದ್ದರು.  ಕಾರ‍್ಯಕ್ರಮದ ಅಧ್ಯಕ್ಷತೆಯನ್ನು  ಭಾಗ್ಯನಗರ ಜಾಮಿಯಾ ಮಸ್ಜಿದ್ ಪಂಚ ಕಮೀಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ ಬಿಸರಳ್ಳಿ ವಹಿಸಿದ್ದರು.  ಕುರಾನ್ ಪಠಣವನ್ನು ಪೇಶ್ ಇಮಾಮ ಸಲೀಂಸಾಬ ಮಾಡಿದರು. ಸ್ವಾಗತ ಮತ್ತು ನಿರೂಪಣೆಯನ್ನು ಪಕ್ರುದ್ದಿನಸಾಬ ನೂರಬಾಷಾ ನಿರ್ವಹಿಸಿದರು. ಮುಸ್ತಪಾ ದಲಾಯತ್ ವಂದನಾರ್ಪಣೆ ಮಾಡಿದರು. ಕಾರ‍್ಯಕ್ರಮದಲ್ಲಿ ಕಮೀಟಿಯ ಪದಾಧಿಕಾರಿಗಳು,ಸದಸ್ಯರು, ಗ್ರಾಮದ ಹಾಗೂ ಬೇರೆ ಗ್ರಾಮಗಳಿಂದ ಬಂದಿದ್ದ ಮುಸ್ಲಿಂ ಸಮಾಜ ಬಾಂಧವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ೧೦೦ಕ್ಕೂ ಹೆಚ್ಚು ಮಕ್ಕಳಿಗೆ ಖತ್ನಾ ಮಾಡಲಾಯಿತು. 

Related posts

Leave a Comment