ಸಲೀಂ ಪಾಷಾ ಸಾಲಗುಂದಿ ನಿಧನ :

ಕೊಪ್ಪಳ,ಮಾ,೧೫: ನಗರದ ದಿಡ್ಡಿಕೇರಿ ಓಣಿಯ ನಿವಾಸಿ ಸೂಪರ್ ಟೈಲರ್ ಎಂದೇ ಖ್ಯಾತಿ ಹೊಂದಿದ ಸಲೀಂಪಾಷಾ ಸಾಲಗುಂದಿ(೫೪) ರವರು ಶನಿವಾರ ಬೆಳಿಗ್ಗೆ ನಿಧನಹೊಂದಿದರು ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊನೆಗೆ ಅಂತಮ ಉಸಿರೆಳೆದರು.
    ಮೃತರು ಹಜರತ್ ಪೀರ್‌ಪಾಷಾ ಖಾದ್ರಿ ದರ್ಗಾದ ಖಾದಿಮ್(ಸೇವಕ) ಮಹಮ್ಮದ್ ಆದಿಲ್ ಪಾಷಾ ಖಾದ್ರಿ ತಸ್ಕಿನಿ ಸಾಲಗುಂದಿ ರವರ ಅಣ್ಣ ನವರಾಗಿದ್ದರು, ಹಿರಿಯ ಪತ್ರಕರ್ತ ಎಂ.ಸಾದಿಕ್‌ಅಲಿ ಅವರ ಸಹೋದರ ಸಂಭಂದಿ ಅಣ್ಣ (ಚಿಕ್ಕಪ್ಪನ ಮಗ)ಯಾಗಿರುತ್ತಾರೆ. 
  ಮೃತ ಸಲೀಂಪಾಷಾ ಸಾಲಗುಂದಿರವರು ತನ್ನ ಹಿಂದೆ ಹೆಂಡತಿ, ಈರ್ವ ಗಂಡುಮಕ್ಕಳು ಮತ್ತು ಈರ್ವ ಹೆಣ್ಣುಮಕ್ಕಳು, ಓರ್ವ ಮೊಮ್ಮಗಳು  ಇಬ್ಬರು ಅಳಿಯಂದರು ಮತ್ತು ಓರ್ವ ಅಕ್ಕ ಮೂರುಜನ ತಂಗಿಯಂದಿರು ಹಾಗೂ ಮೂರುಜನ ತಮ್ಮಂದಿರನ್ನು ಸೇರಿದಂತೆ ಸಹೋದರ ಸಂಭಂದಿ ಅಕ್ಕತಂಗಿಯಂದಿರು, ತಮ್ಮಂದಿರು ಅಲ್ಲದೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
  ಮೃತರ ಅಂತ್ಯಕ್ರೀಯೆ ಶನಿವಾರ ಸಂಜೆ ವೇಳೆಗೆ ನಗರದಹುಲಿಕೇರಿ ರಸ್ತೆ ಸಿರಸಪ್ಪಯ್ಯನ ಮಠದ ಬಳಿಇರುವ ಬಾಚನಕಲ್ ಸ್ಮಶಾನ(ಖಬ್ರಸ್ತಾನ)ದಲ್ಲಿ ಅಪಾರ ಜನಸ್ತೋಮದ ಮಧ್ಯ ಜರುಗಿತು. ಮೃತರ ಅಂತ್ಯಕ್ರೀಯೆದಲ್ಲಿ ಸಾಲಗುಂದಿ ಕುಟುಂಬದವರು ಸೇರಿದಂತೆ ಅವರ ಬಂಧು ಬಳಗದವರು ಪಾಲ್ಗೊಂಡಿದ್ದರು.
    ತೀವ್ರ ಸಂತಾಪ: ಸಲೀಂ ಪಾಷಾ ಸಾಲಗುಂದಿ ರವರು ನಿಧನ ಹೊಂದಿರುವುದಕ್ಕೆ  ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ, ಅಂಜುಮನ್ ಕಮೀಟಿ, ಟಿಪ್ಪು ಸುಲ್ತಾನ್ ಕಮಿಟಿ, ಹಜರತ್ ಪೀರ ಪಾಷಾ ಖಾದ್ರಿ ದರ್ಗಾ ಕಮಿಟಿ ಪದಾಧಿಕಾರಿಗಳು ಸೇರಿದಂತೆ ಕಾರ್ಯನಿರತ ತ್ರಕರ್ತರ ಸಂಘ, ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತ ಪಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಅವರ ಕುಟುಂಬ ವರ್ಗದವರಿಗೆ ದುಖಃ ಸಹಿಸುವ ಶಕ್ತಿ ಆ ಅಲ್ಲಾಹನು  ದಯಪಾಲಿಸಲೆಂದು ಪ್ರಾರ್ಥಿಸಿದ್ದಾರೆ. 

Related posts

Leave a Comment