ಗ್ರಾಮ ಒಕ್ಕೂಟದ ಮೂಲಕ ಮಹಿಳೆಯರ ಸಬಲೀಕರಣ- ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕ ವೆಂಕಟೇಶ ಅಭಿಮತ.

ಕೊಪ್ಪಳ-14- ಗ್ರಾಮ ಮಟ್ಟದ ಒಕ್ಕೂಟದ ಮೂಲಕ ಮಹಿಳೆಯರ ಸಬಲೀಕರಣ ಮಾಡುವ ಉದ್ದೇಶದಿಂದ ಸರ್ಕಾರವು ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿದ್ದು, ಮಹಿಳೆಯರು ತಮ್ಮ ಬಡತನವನ್ನು ಹೋಗಲಾಡಿಸಲು  ಸ್ವ ಸಹಾಯ ಸಂಘಗಳ ಮೂಲಕ ಸಂಘಟಿತರಾಗಿ, ಸಂಜೀವಿನಿ ಯೋಜನೆಯ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಬಡ ಮಹಿಳೆಯರು ಆರ್ಥಿಕವಾಗಿ ಸಧೃಢರಾಗಿ ಬದುಕು ರೂಪಿಸಿಕೊಳ್ಳಬೇಕೆಂದು ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕ ವೆಂಕಟೇಶರವರು ತಿಳಿಸಿದರು.
ತಾಲೂಕಿನ  ಹಟ್ಟಿ ಗ್ರಾಮದಲ್ಲಿ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ತಾಲೂಕ ಪಂಚಾಯತ ಕೊಪ್ಪಳ ಗ್ರಾಮ ಪಂಚಾಯತ ಹಟ್ಟಿ ಸಂಯೋಗದಲ್ಲಿ ದಿನಾಂಕ:೧೩-೧೨-೨೦೧೫ ರಂದು ಹಮ್ಮಿಕೊಂಡಿದ್ದ ಶ್ರೀಕನಕಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಮಹಿಳಾ ಒಕ್ಕೂಟ ಕಛೇರಿ ಉದ್ಘಾಟಿಸಿ ಮಾತನಾಡಿದ ಅವರು, ಸ್ವಸಹಾಯ ಸಂಘದ ಮಹಿಳೆಯರು ಒಕ್ಕೂಟದ ವೇದಿಕೆಯ ಮೂಲಕ ಒಗ್ಗಟ್ಟಿನಿಂದ ಶಕ್ತಿಯಾಗಿ ಹೊರಹೊಮ್ಮಿ, ಬಡತನದ, ನಿವಾರಣೆಗಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಕಾರ್ಯಪ್ರವೃತ್ತರಾಗಬೇಕು, ಪ್ರಸ್ತುತವಾಗಿ ಜಿಲ್ಲೆಯಲ್ಲಿ ಎನ್.ಆರ್.ಇ.ಜಿ.-ಎನ್.ಆರ್.ಎಲ್.ಎಮ್.ಸಂಯೋಗದೊಂದಿಗೆ ತೀವ್ರ ಸಹಭಾಗಿತ್ವ ಯೋಜನೆ ತಯಾರಿಕೆ (ಐ.ಪಿ.ಪಿ.ಇ.೨) ಜನರ ಒಗ್ಗೂಡಿಸುವಿಕೆ ಯೋಜನೆಯ ಕುಟುಂಬಗಳ ಮೂಲ ಮಾಹಿತಿ ಸಮೀಕ್ಷೆ ನಡೆಸುತ್ತಿದ್ದು ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಕೇಂದ್ರ ಸರ್ಕಾರದ ಐದು ಯೋಜನೆಗಳ ಮೂಲ ಮಾಹಿತಿ ಸಂಗ್ರಹಿಸಿ ಮುಂದಿನ ಆರ್ಥಿಕ ವರ್ಷದ  ಕ್ರಿಯಾಯೋಜನೆ ತಯಾರಿಸಲು ಈ ಸಮೀಕ್ಷೆ ಅತ್ಯಂತ ಪರಿಣಾಮಕಾರಿಯಾಗಿದ್ದು ಜನರ ಭಾಗವಹಿಸುವಿಕೆಯೊಂದಿಗೆ ಕುಟುಂಬದ ಮೂಲ ಮಾಹಿತಿ ನೀಡಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಮುಂದಾಗಬೇಕೆಂದು ಕರೆ ನೀಡಿದರು.
 ಈ ಸಂದರ್ಭದಲ್ಲಿ ಸಂಜೀವಿನಿ ಯೊಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜಕುಮಾರ ಕಾತರಕಿ ಮಾತನಾಡಿ ಪಂಚಸೂತ್ರ ಪಾಲನೆ ಮಾಡಿದ ಎ, ಬಿ ಶ್ರೇಣಿ ಪಡೆದ ಸ್ವಸಹಾಯ
 ಈ ಸಂದರ್ಭದಲ್ಲಿ ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಕರಾದ ಮಲ್ಲಿಕಾರ್ಜುನ ಪಿ.ಎಸ್, ಬಸವರಾಜ ಪಾಟೀಲ, ಗ್ರಾ. ಪಂ. ಉಪಾಧ್ಯಕ್ಷರು, ಸರ್ವಸದಸ್ಯರು ಹಾಗು ಒಕ್ಕೂಟದ ಪದಾಧಿಕಾರಿಗಳು ಹಾಗೂ ಬ್ಯಾಂಕ ಪ್ರತಿನಿಧಿ ನಾಗರಾಜ ಉಪಸ್ಥಿತರಿದ್ದರು. ನಾಲ್ಕು ಗ್ರಾಮಗಳಿಂದ ಸ್ವಸಹಾಯ ಸಂಘದ ಮಹಿಳೆಯರು ಸ್ವಇಚ್ಚೆಯಿಂದ ಸಂಭ್ರಮದಿಂದ ಭಾಗವಹಿಸಿದ್ದರು ಈ ಕಾರ್ಯಕ್ರಮವನ್ನು ಸಂಜೀವಿನಿ ಯೋಜನೆಯ ತಾಲೂಕ ವಲಯ ಮೇಲ್ವಿಚಾರಕ ಪ್ರಸನ್ನಕುಮಾರ ಮಧುಗಿರಿ ಸ್ವಾಗತಿಸಿ ನಿರೂಪಿಸಿದರು. ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಬಸವರೆಡ್ಡಿ ವಂದಿಸಿದರು. 

ಸಂಘಗಳನ್ನು ಸೇರಿಸಿ ವಾರ್ಡ ಒಕ್ಕೂಟಗಳನ್ನು ರಚನೆ ಮಾಡಲಾಗಿದೆ, ಶ್ರೀಕನಕಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತಿ ಮಹಿಳಾ ಒಕ್ಕೂಟದ ಮೂಲಕ ಸಂಜೀವಿನಿ ಯೋಜನೆಯ ಸೌಲಭ್ಯಗಳಾದ ಸುತ್ತುನಿಧಿ, ಸಮುದಾಯ ಬಂಡವಾಳ ನಿಧಿ, ಬಡ್ಡಿ ಸಹಾಯಧನ ಹಾಗೂ ಸಾಮರ್ಥ್ಯ ಬಲವರ್ಧನೆ ತರಬೇತಿ ಪಡೆದು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಅಭಿವೃದ್ದಿ ಹೊಂದಬೇಕೆಂದು ತಿಳಿಸಿದರು.

Please follow and like us:
error