ಲೇಖಕಿ ಹತ್ಯೆಗೆ ಸಾಹಿತಿಗಳ ಖಂಡನೆ

ಭಾರತೀಯ ಮೂಲದ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಅವರನ್ನು ಅಫ್ಘಾನಿಸ್ತಾನದಲ್ಲಿ ತಾಲೀಬಾನ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿರುವ ಕೃತ್ಯವನ್ನು ಗಂಗಾವತಿ ಪ್ರಗತಿಪರ ಬರಹಗಾರರ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಇತ್ತೀಚಿನ ದಿನಗಳಲ್ಲಿ ಮೂಲಭೂತವಾದವನ್ನು ಎತ್ತಿ ಹಿಡಿದಿರುವ ತಾಲೀಬಾನಿ ಉಗ್ರರ ಕೃತದಿಂದ  ಅನೇಕ ಅಮಾಯಕರು ಜೀವ ಬಲಿದಾನವಾಗಿದ್ದು, ಆ ನಿಟ್ಟಿನಲ್ಲಿ ಈಗ ಭಾರತೀಯ ಮೂಲದ ಪ್ರಸಿದ್ಧ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಅಲ್ಲಿಯ ಉಗ್ರರು ಪಕ್ತಿಕಾ ಪ್ರಾಂತದಲ್ಲಿ ಹ್ಯಯವಾಗಿ ಹತ್ಯೆಗೈದಿರುವುದು ಮಾನವ ವಿರೋಧಿ ಕೃತ್ಯವಾಗಿದೆ ಎಂದು ಒಕ್ಕೂದ ಸಂಚಾಲಕ ಹಾಗೂ ಸಾಹಿತಿ ಅಲ್ಲಾಗಿರಿರಾಜ್ ಕನಕಗಿರಿ ಮತ್ತು ಪ್ರಗತಿಪರ ಬರಹಗಾರರಾದ ಪೀರ್‌ಬಾಷಾ, ಜಾಜಿ ದೇವೇಂದ್ರಪ್ಪ, ರಮೇಶ ಗಬ್ಬೂರು, ಶರಣಪ್ಪ ತಳ್ಳಿ ಲೇಖಕಿ ಹತ್ಯೆಯನ್ನು ಖಂಡಿಸಿದ್ದಾರೆ. 

Leave a Reply