You are here
Home > Koppal News > ಮಹಿಳೆಯ ಆತ್ಮ ಬಲ, ವಿಚಾರ ಶಕ್ತಿ ಹೆಚ್ಚಿಸುವ ಇತರೆ ಚಟುವಟಿಕೆಗಳು ಶ್ಲಾಘನೀಯ

ಮಹಿಳೆಯ ಆತ್ಮ ಬಲ, ವಿಚಾರ ಶಕ್ತಿ ಹೆಚ್ಚಿಸುವ ಇತರೆ ಚಟುವಟಿಕೆಗಳು ಶ್ಲಾಘನೀಯ

   -ಸಂಗಣ್ಣ ಕರಡಿ

ಶಕುಂತಲಾ ಉಚಿತ ಹೊಲಿಗೆ ತರಬೇತಿಯಿಂದ ವಿದ್ಯಾರ್ಥೀಗಳಿಗೆ ಅರ್ಹತಾ ಪತ್ರ ವಿತರಣೆ.
ಕೊಪ್ಪಳ ನಗರದ ೨೨ ನೇ ವಾರ್ಡಿನಲ್ಲಿ ಇಂದ್ರಕೀಲ ನಗರದಲ್ಲಿ ಎರಡು ವರ್ಷಗಳಿಂದ ನಡೆಯುತ್ತಿರುವ ಮಹಿಳಾ ಉಚಿತ ಹೊಲಿಗೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಮಹಿಳೆಯರಿಗೆ ಅರ್ಹತಾ ಪತ್ರ ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೈಗಾರಿಕಾ ಇಲಾಖೆಯ ಜಂಟಿ ಸಹಾಯಕ ನಿರ್ದೇಶಕರಾದ ಗಂಗಾದರ ಜಳಕಿ ಆಗಮಿಸಿದ್ದರು, ಅವರು ಮಾತನಾಡಿ ಕೈಗಾರಿಕಾ ಇಲಾಖೆಯಿಂದ ಮಹಿಳೆಯರಿಗೆ ಕಲಿಸುವ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷಸ್ಥಾನ ವಹಿಸಿದ್ದ ಸಂಗಣ್ಣ ಕರಡಿ ಅವರು ಮಾತನಾಡಿ ನಂದಾದೀಪ ಚಾರಿಟೇಬಲ್ ಟ್ರಸ್ಟ ವತಿಯಿಂದ ನಡೆಯುತ್ತಿರುವ ಉಚಿತ ಹೊಲಿಗೆ ತರಬೇತಿ ಕೇಂದ್ರದಲ್ಲಿ ಮಹಿಳೆಯರಿಗೆ ಹೊಲಿಗೆಯನ್ನು ಕಲಿಸುವದರ ಜೊತೆಗೆ ಮಹಿಳೆಯ ಆತ್ಮ ಬಲ, ವಿಚಾರ ಶಕ್ತಿ ಹೆಚ್ಚಿಸುವ ಇತರೆ ಚಟುವಟಿಕೆ ಹಮ್ಮಿಕೊಂಡಿರುವುದು ನಿಜವಾಗಲೂ ಶ್ಲಾಘನೀಯ ಎಂದು ವಿವರಿಸಿದರು. ಮತ್ತು ಇಂತಹ ಪ್ರಾಮಾಣಿಕ ಸಂಸ್ಥೆಗಳಿಗೆ ಸರಕಾರದಿಂದ ಸಹಾಯ ದೊರಕಿಸಿ ಕೊಡುವದಾಗಿ ಭರವಸೆ ನೀಡಿದರು. ಮತ್ತು ಕೇಂದ್ರದ ವ್ಯವಸ್ಥಾಪಕರಾದ ಪ್ರಾಣೆಶ & ಮಹೇಂದ್ರಕರ ಮಾತನಾಡಿ ಕೈ ಕೆಲಸಗಳಿಗೆ ಬಾರಿ ಬೇಡಿಕೆ ಇದೆ ಮತ್ತು ಹೊಲಿಗೆ ಕೆಲಸ ಮಾಡಲು ಮಹಿಳೆಯರಿಗೆ ಸರಳ ಆದ್ದರಿಂದ ಕೆಲಸವನ್ನು ಕಲಿತು ಕುಟುಂಬದ ಆರ್ಥಿಕ ಪ್ರಗತಿಗೆ ಕಾರಣರಾಗಬೇಕು ಮತ್ತು ಹೊಸದಾಗಿ ಹೊಲಿಗೆ ಕಲಿಯಲು ಇಚ್ಚಿಸುವ ಮಹಿಳೆಯರು ಕೇಂದ್ರಕ್ಕೆ ಬಂದು ಹೆಸರನ್ನು ನೊಂದಾಯಿಸಬೇಕು. ಮತ್ತು ಈ ದೂರವಾಣಿಗೆ ಸಂಪರ್ಕಿಸಬಹುದು- ೯೯೦೦೪೩೩೪೧೪ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ಯಾಮಲಾ ವ್ಹಿ.ಡಿ.ಎಲ್.ಎಲ್.ಬಿ. ಹಾಗೂ ಸ್ವರೂಪರಾಣಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ ಬಾಗವಹಿಸಿದ್ದರು. ಮತ್ತು ತರಬೇತಿ ನಿರತ ವಿದ್ಯಾರ್ಥೀಗಳು, ಹಿತೈಸಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ರೇಣುಕಾ ಪಿ. ಮಹೇಂದ್ರಕರ ಆಯೋಜಿಸಿದರು. ಉಮಾ ಅಂಗಡಿ, ಮಂಜುಳಾ ಮಿರಜಕರ, ಅನಿಶಿಕೆ ಶಿಲ್ಪಾ ಮೆವುಂಡಿ ಸ್ವಾಗತ ಉಮಾ ಮೂಲಿಮನಿ ಕಾರ್ಯಕ್ರಮ ನಡೆಸಿದರು ಮತ್ತು ತರಬೇತಿ ಕೇಂದ್ರದ ೬ ತಿಂಗಳ ವರದಿಯನ್ನು ವಸಂತ ಜೋಷಿ ಮಂಡಿಸಿದರು.

Leave a Reply

Top