ಸರ್ಕಾರಿ ಕಾಲೇಜುಗಳು ಬಡ ವಿದ್ಯಾರ್ಥಿಗಳ ಅಕ್ಷಯ ಪಾತ್ರೆಗಳಾಗಲಿ: ಹಿಟ್ನಾಳ

ಕೊಪ್ಪಳ, ಫೆ.೧೪: ಸರ್ಕಾರಿ ಕಾಲೇಜುಗಳು ಬಡ ವಿದ್ಯಾರ್ಥಿಗಳ ಅಕ್ಷಯ ಪಾತ್ರೆಗಳಾಗಬೇಕು. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಶ್ರೀಮಂತಗೊಳಿಸುವ ಮೂಲಕ ವಿದ್ಯಾಲಯದ ಶ್ರೀಮಂತಿಕೆ ಹೆಚ್ಚಿಸಬೇಕೆಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡಿಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪ್ರಥಮವಾಗಿ ಉಪನ್ಯಾಸಕರಲ್ಲಿ ಧನ್ಯತಾ ಭಾವದಿಂದ ಕಾರ್ಯನಿರ್ವಹಿಸದಲ್ಲಿ ಸರಕಾರಿ ಕಾಲೇಜುಗಳು ಯಾವುದೇ ಪದವಿ ಕಾಲೇಜುಗಳಿಗೂ ಕಡಿಮೆ ಇಲ್ಲ ಎನ್ನುವುದಕ್ಕೆ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯೇ ಸಾಕ್ಷಿಯಾಗಿದೆ ಎಂದರು.
ನಂತರ ಕಾಲೇಜ ಪ್ರಾಚಾರ್ಯ ಡಾ. ವಿ.ಬಿ. ರಡ್ಡೇರ ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚಾಗಿ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಕಾಲೇಜಗಳ ಮೂಲಭೂತ ಸೌಲಭ್ಯ ಹಾಗೂ ಉಪನ್ಯಾಸಕರ ಕೊರತೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪೂರೈಸುವ ಮೂಲಕ ಶ್ರೀಮಂತಗೊಳಿಸಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ, ಬದುಕು ಶ್ರೀಮಂತಗೊಳ್ಳಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ಮುಖ್ಯ ಆತಿಥ್ಯವಹಿಸಿದ್ದ ಕುಕನೂರಿನ ನವೋದಯ ವಿದ್ಯಾಲಯದ ಆಂಗ್ಲ ಉಪನ್ಯಾಸಕ ಎಮ್. ಪ್ರಲ್ಹಾದ ಮಾತನಾಡಿ. ವಿದ್ಯಾರ್ಥಿಗಳು ತಮ್ಮದೇ ಗುರುತನ್ನು ಜೀವನದಲ್ಲಿ ಸಂಪಾದಿಸಿಕೊಳ್ಳಲು, ಮತ್ತು ಶ್ರಮ, ನಿರಂತರ ಪ್ರಯತ್ನಗಳಿಂದ ಗಟ್ಟಿಯಾಗಿ ಬೆಳೆಯಬೇಕು ಇದಕ್ಕೆ ಆತ್ಮಸ್ಥೈರ್ಯ ಬಹಳ ಮುಖ್ಯವೆಂದು ತಿಳಿಸಿದರು.
ಇದೇ ವೇಳೆ ನಿವೃತ್ತಿ ಹೊಂದಿದ ಕನ್ನಡ ಉಪನ್ಯಾಸಕ ಲಿಂಗಣ್ಣ ಮೇಟಿ ಹಾಗೂ ನಿವೃತ್ತಿ ಹೊಂದುತ್ತಿರುವ ರಾಜ್ಯಶಾಸ್ತ್ರ ಉಪನ್ಯಾಸಕ ಎಸ್.ಡಿ. ಹಿರೇಮಠ ರವರನ್ನು ಸೇರಿದಂತೆ ವಿಜ್ಞಾನ ವಿಭಾಗದಲ್ಲಿ ಶೇ.೯೨ ಪ್ರತಿಶತ ಅಂಕ ಪಡೆದ ಗೀತಾ ಪೂಜಾರ, ಶೇ.೮೭.೮೬ ಪಡೆದ ಪಲ್ಲವಿ ನಾಗಲಿಂಗಯ್ಯ ಹಾಗೂ ಪೂರ್ಣಿಮಾ ನಾಗಲಿಂಗಯ್ಯ, ಕಲಾವಿಭಾಗದಲ್ಲಿ ವಿಜಯಲಕ್ಷ್ಮೀ, ನಾಗರತ್ನ, ಶುಶೀಲಮ್ಮ, ವಾಣಿಜ್ಯ ವಿಭಾಗದಲ್ಲಿ ಪೂರ್ಣಿಮಾ, ವಿದ್ಯಾಶ್ರೀಯವರನ್ನು ಕಾಲೇಜ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಕಾಲೇಜಿನ ಉಪನ್ಯಾಸಕರಾದ ಲಿಂಗಣ್ಣ ಮೇಟಿ ವಾರ್ಷಿಕ ವರದಿ ವಾಚನ ಮಾಡಿದರೆ, ಏಫ್.ಎ. ನೂರಭಾಷಾ ಸ್ವಾಗತಿಸಿದರು. ಡಿ.ಎಂ.ಬಡಿಗೇರ ನೀರೂಪಿಸಿದರೆ, ಕೊನೆಯಲ್ಲಿ ಸೋಮನಗೌಡ ಪಾಟೀಲ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Please follow and like us:

Related posts

Leave a Comment