ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು.

ಕೊಪ್ಪಳ, ಮಾ.೧೪ (ಕ ವಾ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರಸಕ್ತ ಸಾಲಿನ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ. ೧೮ ಹಾಗೂ ೧೯ ರಂದು ಬೆಳಿಗ್ಗೆ ೯.೩೦ ಕ್ಕೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದೆ.
     ಕಾರ್ಯಕ್ರಮದ ನಿಮಿತ್ತ್ಯ ಮಹಿಳೆಯರಿಗಾಗಿ ಕ್ರೀಡೆ, ಸಾಂಸ್ಕೃತಿಕ, ಅಡುಗೆ ತಯಾರಿಕ ಸ್ಪರ್ಧೆಗಳನ್ನು ಹಾಗೂ ವೇಷ ಭೂಷಣ ಸ್ಪರ್ದೆಗಳನ್ನು ಆಯೋಜಿಸಿದೆ. ಆಸಕ್ತ ಮಹಿಳಾ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು, ಪ್ರಗತಿಪರ ಮಹಿಳಾ ಮಂಡಳಗಳು, ಸ್ತ್ರೀಶಕ್ತಿ ಗುಂಪುಗಳ ಮಹಿಳೆಯರು ಭಾಗವಹಿಸಹುದು.
ಕ್ರೀಡಾ ಸ್ಪರ್ಧೆ : ೧೦೦ ಮಿ.ಓಟ, ಲೆಮನ್ ಸ್ಪೂನ್, ತರಕಾರಿ ಮತ್ತು ಹಣ್ಣುಗಳಲ್ಲಿ ವಿವಿಧ ಆಕೃತಿ ರಚನೆ, ಕಸದಲ್ಲಿ ರಸ, ಬಾಲ್ ಕಂ ಬಾಸ್ಕೆಟ್ ಸ್ಪರ್ಧೆಗಳಿಗೆ ಕ್ರೀಡಾ ಸಮಿತಿ ಮುಖ್ಯಸ್ಥೆ ತ್ರಿಶೂಲ ಸುರೇಂದ್ರ -೯೪೮೦೭೫೬೪೬೪ ಕ್ಕೆ ಸಂಪರ್ಕಿಸಬಹುದು.
ಸಾಂಸ್ಕೃತಿಕ ಸ್ಪರ್ಧೆ : ರಂಗೋಲಿ ಸ್ಪರ್ಧೆ, ಮುಸಿಕಲ್ ಚೆಕ್, ಜನಪದ ನೃತ್ಯ ಸ್ಪರ್ದೆ, ಭಾವಗೀತೆ, ಜನಪದೆ ಗೀತೆ ಸ್ಪರ್ಧೆಗಾಗಿ ಸಾಂಕ್ಕೃತಿಕ ಸಮಿತಿ ಮುಖ್ಯಸ್ಥೆ ಕೋಮಲ ಕುದುರೆವಾಲಕಿ ಮೊ-೯೪೮೦೧೦೬೬೧೭ ಕ್ಕೆ ಸಂಪರ್ಕಿಸಬಹುದು.
ಅಡುಗೆ ಸ್ಪರ್ಧೆ: ಗೋಧಿ ಹಿಟ್ಟಿನಿಂದ ತಯಾರಿಸಿದ ಖಾದ್ಯಗಳನ್ನು ಸಿದ್ದಪಡಿಸಿ ಪ್ರದರ್ಶಿಸುವುದು ಹಾಗೂ ಖಾದ್ಯಕ್ಕೆ ಬಳಸಿದ ಸಾಮಗ್ರಿಗಳ ವಿವರಣೆ ನೀಡುವ ಸ್ಪರ್ಧೆಗಾಗಿ ಅಡುಗೆ ಸ್ಪರ್ಧೆ ಸಮಿತಿ ಮುಖ್ಯಸ್ಥೆ ಶಾಂತಕ್ಕ ಹಿರೇಮಠ ಮೊ-೯೭೪೩೬೯೭೯೫ ಕ್ಕೆ ಸಂಪರ್ಕಿಸಬಹುದು.
     ಆಸಕ್ತರು ಸಂಬಂಧಿಸಿದ ಕ್ರೀಡೆಗಳಲ್ಲಿ ಭಾಗವಹಿಸಲು ಆಯಾ ಕ್ರೀಡಾ ಮುಖ್ಯಸ್ಥರನ್ನು ಸಂಪರ್ಕಿಸಬಹುದಾಗಿದೆ. ಮಾ.೧೯ ರಂದು ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಆಸಕ್ತ ಮಹಿಳೆಯರು ವೇಷ ಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಕನಿರ್ದೇಶಕರು ತಿಳಿಸಿದ್ದಾರೆ.

ಗ್ರಾ.ಪಂ. ಗಳಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣಾ ಕಾರ್ಯಕ್ರಮಗಳ ಕುರಿತು ತರಬೇತಿ.
ಕೊಪ್ಪಳ, ಮಾ.೧೪ ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ, ಎಸ್‌ಡಿಎಂಸಿ ಹಾಗೂ ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ಮತ್ತು ಮಾರಾಟ ತಡೆ ಸಮಿತಿ ಸದಸ್ಯರುಗಳಿಗೆ ಮಾ.೧೪ ರಿಂದ ಮಾ.೩೧ ರವರೆಗೆ ತರಬೇತಿ ಆಯೋಜಿಸುವಂತೆ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಆದೇಶಿಸಿದ್ದಾರೆ.
     ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಸಾಗಾಣಿಕೆ ಮತ್ತು ಮಾರಾಟ, ಬೀದಿಬದಿಯಲ್ಲಿ ವಾಸ ಮಾಡುತ್ತಿರುವ, ಭಿಕ್ಷೆ ಬೇಡುವ, ಶಿಕ್ಷಣದಿಂದ ವಂಚಿತರಾಗಿರುವ, ಕಾಣೆಯಾದ, ಕಾನೂನು ಸಂಘರ್ಷಕ್ಕೆ ಒಳಗಾದ, ಲೈಂಗಿಕ ಶೋಷಣೆ ಹಾಗೂ ದೌರ್ಜನ್ಯಕ್ಕೊಳಗಾದ, ಪೋಷಕರಿಂದ ಪರಿತ್ಯಕ್ತರಾದ, ಹದಿಹರೆಯದ, ಇತರೆ ಎಲ್ಲಾ ಮಕ್ಕಳ ರಕ್ಷಣೆ ನಮ್ಮ ಕರ್ತವ್ಯ, ಪ್ರತಿಯೊಂದು ಮಗುವಿಗೆ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಪ್ರಕಾರ ಬದುಕುವ, ರಕ್ಷಣೆ, ವಿಕಾಸ ಮತ್ತು ಭಾಗವಹಿಸುವ ಹಕ್ಕು ಒದಗಿಸುವುದು ಸರ್ಕಾರದ ಕರ್ತವ್ಯವಾಗಿರುತ್ತದೆ.
   ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಪಂಚಾಯತ್ ರಾಜ್ ಅಧಿನಿಯಮ ೧೯೯೩ ರ ಪರಿಚ್ಚೇದ ೬೧ಎ ಅಡಿಯಲ್ಲಿ ಮಕ್ಕಳ ರಕ್ಷಣಾ ಸಮಿತಿ, ಎಸ್.ಡಿ.ಎಮ್.ಸಿ, ಮಹಿಳೆಯರ ಮತ್ತು ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ತಡೆ ಸಮಿತಿಗಳು ಪಂಚಾಯತ್ ಸಾಮಾನ್ಯ ಸಮಿತಿಯ ಉಪಸಮಿತಿಗಳಾಗಿ ರಚಿಸಲಾಗಿದೆ.
   ಈ ಎಲ್ಲಾ ಸಮಿತಿಗಳು ಸಂವಿಧಾನ ಹಾಗೂ ಶಾಸನಬದ್ಧ ಸಮಿತಿಗಳಾಗಿ ಗ್ರಾಮ ಸ್ವರಾಜ್ಯ ಕಲ್ಪನೆಯಲ್ಲಿ ‘ಮಕ್ಕಳ ಸಂರಕ್ಷಣೆ’ ಕಾರ್ಯನಿರ್ವಹಿಸುವ ಗ್ರಾಮ ಮತ್ತು ಗ್ರಾಮ ಪಂಚಾಯತಿ ಮಟ್ಟದ ಸಮಿತಿಗಳು. ಆದ್ದರಿಂದ ಗ್ರಾಮ ಪಂಚಾಯತ್ ಸದಸ್ಯರು ಹೊಸದಾಗಿ ಆಯ್ಕೆಯಾದಾಗ ಈ ಸಮಿತಿಗಳು ಪುನರ್ರಚನೆಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಸಮಿತಿಗಳ ಸದಸ್ಯರುಗಳಿಗೆ ಅವರ ಕರ್ತವ್ಯಗಳ ಬಗ್ಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ.
     ತರಬೇತಿ ದಿನಾಂಕವನ್ನು ಆಯಾ ಸಮಿತಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಆಯಾ ಇಲಾಖೆಗಳು ಹೊರಡಿಸಿದ ಸುತ್ತೋಲೆಗಳಲ್ಲಿ ಸೂಚಿಸಿರುವ ಸಮಿತಿಯ ಎಲ್ಲಾ ಸದಸ್ಯರನ್ನು ತಬೇತಿಗೆ ಆಹ್ವಾನಿಸುವುದು ಮತ್ತು ಕಾರ್ಯಕ್ರಮವನ್ನು ಆಯೋಜಿಸುವುದು ಆಯಾ ಗ್ರಾಮಪಂಚಾಯತಿಯ ಗ್ರಾ.ಪಂ ಅಭಿವೃಧ್ಧಿ ಅಧಿಕಾರಿಗಳು/ಕಾರ್ಯದರ್ಶಿಗಳ ಜವಾಬ್ದಾರಿಯಾಗಿರುತ್ತದೆ. ಹಾಗೂ ಸಮಿತಿಗಳು ಪುನರ್ ರಚನೆ ಆಗಿಲ್ಲದಿದ್ದಲ್ಲಿ ಇದೇ ತರಬೇತಿಯಲ್ಲಿ ಪುನರ್‌ರಚಿಸಿ ತರಬೇತಿಯನ್ನು ವ್ಯವಸ್ಥಿತವಾಗಿ ಆಯೋಜಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
     ಪ್ರತಿ ತಾಲೂಕಿನಲ್ಲಿ ಗ್ರಾಮ ಪಂಚಾಯತಿ ವಾರು ಮಾ. ೧೪ ರಿಂದ ೩೧ ರವರೆಗೆ ತರಬೇತಿ ಜರುಗಲಿದ್ದು, ದಿನಾಂಕಗಳನ್ನು ಸಹ ನಿಗದಿಪಡಿಸಲಾಗಿದೆ.  ವಿವರ ಇಂತಿದೆ.
     ಯಲಬುರ್ಗಾ ತಾಲೂಕಿನಲ್ಲಿ ಮಾ.೧೪ ರಂದು ಮಂಗಳೂರು, ಕುದರಿಮೋತಿ, ಹಿರೇಬೀಡ್ನಾಳ. ಮಾ.೧೫ ತಳಕಲ್, ಬನ್ನಿಕೊಪ್ಪ, ಬೆಣಕಲ್, .ಮಾ.೧೬ ಮಂಡಲಗಿರಿ, ಯರೇ ಹಂಚಿನಾಳ, ಇಟಗಿ, ಮಾ.೧೭ ರಾಜೂರು, ಸಂಗನಾಳ, ಕಲ್ಲೂರು. ಮಾ.೧೮.ಕರಮುಡಿ, ಮುಧೋಳ, ಹಿರೇಮ್ಯಾಗೇರಿ, ಮಾ.೧೯. ಬಳೂಟಗಿ, ಬಂಡಿ, ವಣಗೇರಿ, ಮಾ.೨೧. ಬಳಗೇರಿ, ಚಿಕ್ಕ ಮ್ಯಾಗೇರಿ, ಗದಗೇರಿ, ಮಾ.೨೨ ಬೇವೂರು, ಮುರಡಿ, ಹಿರೇ ವಂಕಲಕುಂಟಾ, ಮಾ. ೨೪ ತಾಳಕೇರಿ, ಗಾಣದಾಳ, ಮಾಟಲದಿನ್ನಿ, ಮಾ.೨೮, ಬಾನಾಪುರ, ಮಸಬಹಂಚಿನಾಳ,ಶಿರೂರ, ಮಾ.೨೯, ತುಮ್ಮರಗುದ್ದಿ, ವಜ್ರಬಂಡಿ, ಹಿರೇಹರಳೀಹಳ್ಳಿ, ಮಾ.೩೦, ವಟಪರವಿ, ಗುನ್ನಾಳ, ಬೋದುರು ಗ್ರಾಮ ಪಂಚಾಯತಿಯಲ್ಲಿ ತರಬೇತಿ ಆಯೋಜಿಸಲಾಗಿದೆ.
         ಕೊಪ್ಪಳ ತಾಲೂಕಿನಲ್ಲಿ ಮಾ. ೧೪ ರಂದು ಬೆಟಗೇರಿ, ಹಿರೇಸಿಂದೋಗಿ, ಬಿಸರಳ್ಳಿ.  ಮಾ. ೧೫ ರಂದು ಮತ್ತೂರು, ಬೋಚನಹಳ್ಳಿ, ಕಾತರಕಿ-ಗುಡ್ಲಾನೂರ.  ಮಾ. ೧೬ ರಂದು ಹಟ್ಟಿ, ಕವಲೂರು, ಅಳವಂಡಿ.  ಮಾ. ೧೭ ರಂದು ಕೊಳೂರು, ಹಲಗೇರಿ, ಗೊಂಡಬಾಳ.  ಮಾ. ೧೮ ರಂದು ಬಹದ್ದೂರಬಂಡಿ, ಹಾಲವರ್ತಿ, ಬೇವಿನಹಳ್ಳಿ.  ಮಾ. ೧೯ ರಂದು ಕುಣಿಕೇರಿ, ಹಿರೇಬಗನಾಳ, ಹೊಸಳ್ಳಿ.  ಮಾ. ೨೧ ರಂದು ಓಜನಹಳ್ಳಿ, ಕಲಕೇರಿ, ಇರಕಲ್ಲಗಡ.  ಮಾ. ೨೨ ರಂದು ಹುಲಿಗಿ, ಅಗಳಕೇರಾ, ಹಿಟ್ನಾಳ.  ಮಾ. ೨೪ ರಂದು ಶಿರೂರು, ಗಿಣಿಗೇರಾ, ಗುಳದಳ್ಳಿ.  ಮಾ. ೨೮ ರಂದು ಬೂದಗುಂಪಾ, ಕಲ್‌ತಾವರಗೇರಾ, ಇಂದರಗಿ.  ಮಾ. ೨೯ ರಂದು ವನಗಳ್ಳಾರಿ, ಚಿಕ್ಕಬೊಮ್ಮನಾಳ, ಹಾಸಗಲ್.   ಮಾ. ೩೦ ರಂದು ಲೇಬಗೇರಾ, ಮಾದಿನೂರು ಮತ್ತು ಕಿನ್ನಾಳ.
     ಕುಷ್ಟಗಿ ತಾಲೂಕಿನಲ್ಲಿ  ಮಾ. ೧೪ ರಂದು ನಿಲೋಗಲ್, ಹನುಮನಾಳ, ಬಿಳೇಕಲ್, ಮಾ. ೧೫ ರಂದು ತುಗ್ಗಲದೋಣಿ, ಹಿರೇಗೊಣ್ಣಾಗರ, ಜಹಗೀರ-ಗುಡದೂರ.  ಮಾ. ೧೬ ರಂದು ಹಾಬಲಕಟ್ಟಿ, ತುಮರಿಕೊಪ್ಪ, ಯರಗೇರಾ.  ಮಾ. ೧೭ ರಂದು ಹನುಮಸಾಗರ, ಕಬ್ಬರಗಿ, ಕಾಟಾಪುರ.  ಮಾ. ೧೮ ರಂದು ಅಂಟರಠಾಣಾ, ಹೂಲಗೇರಾ, ಚಳಗೇರಾ, ಮಾ. ೧೯ ರಂದು ಬೆನಕನಹಾಳ, ಅಡವಿಭಾವಿ, ತಳುವಗೇರಾ.  ಮಾ. ೨೧ ರಂದು ಕೊರಡಕೇರಾ, ಹಿರೇಬನ್ನಿಗೋಳ.  ಮಾ. ೨೨ ರಂದು ನಂದಿಹಾಳ, ಕಂದಕೂರು.  ಮಾ. ೨೪ ರಂದು ಗುಮಗೇರಾ, ಬಿಜಕಲ್.  ಮಾ. ೨೬ ರಂದು ದೋಟಿಹಾಳ, ಕೇಸೂರು.  ಮಾ. ೨೮ ರಂದು ಕ್ಯಾದಿಗುಪ್ಪಾ, ಮುದೇನೂರು.  ಮಾ. ೨೯ ರಂದು ಜುಮಲಾಪುರ, ಕಿಲ್ಲಾರಹಟ್ಟಿ.  ಮಾ. ೩೦ ರಂದು ತಾವರಗೇರಾ, ಮೆಣೆದಾಳ.  ಮಾ. ೩೧ ರಂದು ಲಿಂಗದಹಳ್ಳಿ ಮತ್ತು ಸಂಗನಾಳ
     ಗಂಗಾವತಿ ತಾಲೂಕಿನಲ್ಲಿ ಮಾ. ೧೪ ರಂದು ಹಿರೇಖೇಡ, ಕರಡೋಣ, ಗೌರಿಪುರ.  ಮಾ. ೧೫ ರಂದು ಆಗೋಲಿ, ಚಿಕ್ಕಮಾದಿನಾಳ, ಮುಸಲಾಪುರ.  ಮಾ. ೧೬ ರಂದು ಚಿಕ್ಕಡಂಕನಕಲ್, ಹೊಸಕೇರಾ, ಹಣವಾಳ.  ಮಾ. ೧೭ ರಂದು ಹೇರೂರು, ಕೇಸರಹಟ್ಟಿ, ಸುಳೇಕಲ್.  ಮಾ. ೧೮ ರಂದು ಬಸಾಪಟ್ಟಣ, ಚಿಕ್ಕಬೆಣಕಲ್, ವಡ್ಡರಹಟ್ಟಿ.  ಮಾ. ೧೯ ರಂದು ಡಣಾಪುರ, ಶ್ರೀರಾಮನಗರ, ಮುಷ್ಟೂರು.  ಮಾ. ೨೧ ರಂದು ಚಿಕ್ಕಜಂತಕಲ್, ಸಂಗಾಪುರ, ಜಂಗಮರಕಲ್ಗುಡಿ.  ಮಾ. ೨೨ ರಂದು ಯರಡೋಣ, ಉಳ್ಕಿಹಾಳ, ಮರ್ಲಾನಹಳ್ಳಿ.  ಮಾ. ೨೪ ರಂದು ಸಾಣಾಪುರ, ಮಲ್ಲಾಪುರ, ಆನೆಗೊಂದಿ.  ಮಾ. ೨೬ ರಂದು ಸಿದ್ದಾಪುರ, ಉಳೇನೂರ, ಬೆನ್ನೂರು.  ಮಾ. ೨೮ ರಂದು ಮೈಲಾಪುರ, ಬೂದಗುಂಪಾ, ಚಳ್ಳೂರು.  ಮಾ. ೨೯ ರಂದು ಬಸರಿಹಾಳ, ಜೀರಾಳ, ಹುಲಿಹೈದರ.  ಮಾ. ೩೦ ರಂದು ಗುಂಡೂರು, ನವಲಿ, ಬರಗೂರು.  ಮಾ. ೩೧ ರಂದು ಮರಳಿ, ವೆಂಕಟಗಿರಿ, ಬೇವಿನಹಾಳ ಗ್ರಾಮ ಪಂಚಾಯತಿಯಲ್ಲಿ ತರಬೇತಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Please follow and like us:
error