fbpx

ವೆಂಕಟಗಿರಿ ಕಂದಾಯವೃತ್ತದಲ್ಲಿ ಅಕ್ರಮ ಗಣಿಗಾರಿಕೆ ಲೂಟಿಕೋರರ ಬಂಧನಕ್ಕೆ ಒತ್ತಾಯ ಭಾರಧ್ವಾಜ್.

ಉಡಮಕಲ್ ಗ್ರಾಮದ ಹತ್ತಿರ ಮಲ್ಲಾಪುರ ಸರ್ವೆ ನಂ. ೨೬ ರಲ್ಲಿ ಅಕ್ರಮವಾಗಿ ಬಳಸುತ್ತಿರುವ ಸ್ಪೋಟಕದಿಂದ ಯಲ್ಲಪ್ಪ ಎಂಬ ಕಾರ್ಮಿಕ ಮೃತಪಟ್ಟಿದ್ದಾನೆ. ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಗಣಿಗಳ್ಳರನ್ನು ಬಂಧಿಸದೇ ಕೆಲವು ಅಮಾಯಕರನ್ನು ಮೊದಲನೇ ಅಪರಾಧಿಗಳನ್ನಾಗಿಸಿ ಗಣಿಲೂಟಿಕೋರ ಸಿಹೆಚ್.ವಿ.ವಿ.ವಿ.ಪ್ರಸಾದರನ್ನು ಅಪರಾಧಿ ಪಟ್ಟಿಯಲ್ಲಿ ಕೊನೆಯದಾಗಿ ಸೇರಿಸಿರುವುದು ಸರ್ಕಾರವು ಗಣಿಗಳ್ಳರಿಗೆ ರಕ್ಷಣೆ ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಸಿಪಿಐಎಂಎಲ್ ಲಿಬರೇಷನ್ ರಾಜ್ಯ ಕಾರ್ಯದರ್ಶಿ ಭಾರಧ್ವಾಜ್ ತಿಳಿಸಿದ್ದಾರೆ. ವೆಂಕಟಗಿರಿ ಸುತ್ತಮುತ್ತ ಕಳೆದ ೫ ವರ್ಷಗಳಿಂದ ಅಪಾರ ಪ್ರಮಾಣದಲ್ಲಿ ಕೊಟ್ಯಾಂತರ ರೂಪಾಯಿ ಬೆಲೆಬಾಳುವ ಖನಿಜಗಳನ್ನು ಲೂಟಿ ಮಾಡುತ್ತಿದ್ದಾರೆ. ಈ ಲೂಟಿಯಲ್ಲಿ ರಸ್ತೆ ಗುತ್ತಿಗೆ ನಿರ್ವಹಿಸುತ್ತಿರುವ ಜಿ.ಕೆ.ಸಿ.ಕನ್ಸಟ್ರಕ್ಷನ್ ಕಂಪನಿ ಜೊತೆಗೆ ಸ್ಥಳೀಯ ಗಣಿಲೂಟಿಕೋರರು ಕೈಮಿಲಾಯಿಸಿ ನೂರಾರು ಕೋಟಿ ಬೆಲೆಬಾಳುವ ಗುಡ್ಡಗಳನ್ನು ಲೂಟಿ ಮಾಡಿದ್ದಾರೆ. ತಹಸೀಲ್ದಾರರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪರಿಸರ ಇಲಾಖೆ ಮತ್ತು ಪೊಲೀಸರಿಗೆ ಗಣಿ ಲೂಟಿಕೋರರ ಎಲ್ಲಾ ಮಾಹಿತಿ ಗೊತ್ತಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಇದರಿಂದಾಗಿ ನಿನ್ನೆ ಸ್ಪೋಟಕದಲ್ಲಿ ಮೃತಪಟ್ಟ ಯಲ್ಲಪ್ಪನ ಕುಟುಂಬ ಬೀದಿಪಾಲಾಗಿದೆ. ಯಲ್ಲಪ್ಪನ ಕುಟುಂಬಕ್ಕೆ ರೂ. ೧೦ ಲಕ್ಷ ಪರಿಹಾರ ಅಕ್ರಮ ಗಣಿಮಾಲೀಕರಾದ ಸಿಹೆಚ್.ವಿ.ವಿ.ವಿ.ಪ್ರಸಾದ್ ಇವರಿಂದ ಕೊಡಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರಾದ ತಂಗಡಿಗಿಯವರು ಜಿಲ್ಲೆಯಲ್ಲಿ ಖನಿಜಗಳ ಲೂಟಿ ಮಾಡುತ್ತಿರುವ ಗಣಿಗಳ್ಳರ ವಿರುದ್ಧ ಕ್ರಮ ಜರುಗಿಸಬೇಕು. ಬಹಳಷ್ಟು ಜನ ಗಣಿಗಳ್ಳರು, ತಂಗಡಿಗಿ ಹಿಂಬಾಲಕರಾಗಿದ್ದಾರೆಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಜಿಲ್ಲಾಡಳಿತ ಕೂಡಲೇ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಳಿಗೆ ಕಡಿವಾಣ ಹಾಕಿ ಮರಳು, ಮರಮ್ ಮತ್ತು ಕಲ್ಲುಕ್ವಾರಿಗಳನ್ನು ನಿಲ್ಲಿಸಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ ಪ್ರಭಾವಿಗಳನ್ನು ಕೂಡಲೇ ಬಂಧಿಸಿ, ಜಿಲ್ಲೆಯ ಪರಿಸರ ಮತ್ತು ಖನಿಜಗಳನ್ನು ಕಾಪಾಡಬೇಕೆಂದು ಸಿಪಿಐಎಂಎಲ್ ಪಕ್ಷ ಒತ್ತಾಯಿಸುತ್ತದೆ.

Please follow and like us:
error

Leave a Reply

error: Content is protected !!