ಅನಕ್ಷರಸ್ಥರಿಗೆ ಅಕ್ಷರ ಕಲಿಸಿ, ಈ ನೆಲದ ಋಣ ತೀರಿಸಿ – ಕೃಷ್ಣ ಡಿ.ಉದಪುಡಿ.


ಕೊಪ್ಪಳ, ಸೆ.೦೮ (ಕರ್ನಾಟಕ ವಾರ್ತೆ) ನಮ್ಮ ನೆರೆ,ಹೊರೆಯ ಮನೆಯಲ್ಲಿಯ ಅನಕ್ಷರಸ್ಥ ಬಾಂಧವರನ್ನು ಅಕ್ಷರಸ್ಥರನ್ನಾಗಿ ಮಾಡುವ ಹೊಣೆಗಾರಿಕೆ  ಯುವಕ, ಯುವತಿಯರ, ಲೋಕ ಶಿಕ್ಷಣ ಕೇಂದ್ರದ ಪ್ರೇರಕರ ಹಾಗೂ ಶಿಕ್ಷಣ ಆಸಕ್ತರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಅಕ್ಷರವನ್ನು ಕಲಿಸಿ, ಈ ನೆಲದ ಋಣವನ್ನು ತೀರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಹೇಳಿದರು.
     ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ನಗರದ ತಾಲೂಕಾ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾಕ್ಷರತಾ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣವನ್ನು ಅವಲೋಕಿಸಿದಾಗ ನಾವು ಬಹಳಷ್ಟು ಹಿಂದಿರುವುದು ಗಮನಕ್ಕೆ ಬರುತ್ತದೆ. ಗ್ರಾಮೀಣ ಪ್ರದೇಶದಲಿ, ವಿಶೇಷವಾಗಿ ಮಹಿಳೆಯರೇ ಹೆಚ್ಚು ಅನಕ್ಷರಸ್ಥರಿರುವುದರಿಂದ ಇವರಿಗೆ ಓದು, ಬರಹ, ಲೆಕ್ಕಾಚಾರ ಬರುವಂತೆ ಮಾಡುವುದು ಸ್ವಯಂ ಸೇವಕರ, ಪ್ರೇರಕರ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಪ್ರೇರಕರು ಸ್ವಯಂ ಸೇವೆಯಿಂದ ಕೆಲಸ ನಿರ್ವಹಿಸಿ, ಅಕ್ಷರಸ್ಥ ಸಮಾಜವನ್ನು ನಿರ್ಮಿಸಬೇಕು ಎಂದು ಅವರು ಕರೆ ನೀಡಿದರು.
     ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಸಾಕ್ಷರತೆಯ ಮಹತ್ವವನ್ನು ತಿಳಿಸುವ ಜಾಗೃತಿ ಕಾರ್ಯಕ್ರಮ ಆಗಬೇಕಾಗಿದೆ. ಅಂದಾಗ ಕಲಿಕಾರ್ಥಿಗಳು ಕಲಿಕಾ ಕೇಂದ್ರಕ್ಕೆ ಬರಲು ಸಾಧ್ಯವಾಗುತ್ತದೆ.  ಅನಕ್ಷರಸ್ಥರಿಗೆ ವಿವಿಧ ಇಲಾಖೆಗಳ ಮಾಹಿತಿಯನ್ನು ನೀಡುವುದು ಕೂಡಾ ಅವಶ್ಯವಾಗಿದ್ದು,  ಅವರನ್ನು ಪ್ರೇರೆಪಿಸುವ ಕೆಲಸ ಪ್ರೇರಕರ ಮೇಲಿದೆ. ಸಂಬಂಧಪಟ್ಟ ಎಲ್ಲಾ ಹಂತದ ಅಧಿಕಾರಿಗಳು ಲೋಕ ಶಿಕ್ಷಣ ಕೇಂದ್ರಗಳಿಗೆ ಭೇಟಿ ನೀಡಿ, ಸ್ಥಳದಲ್ಲಿಯೇ ಕಲಿಕೆಯನ್ನು ಪರಿಶೀಲಿಸಿ, ಸ್ವಯಂ ಸೇವಕರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು. ೧೫ ವರ್ಷ ಮೇಲ್ಪಟ್ಟ ಎಲ್ಲಾ ಅನಕ್ಷರಸ್ಥರಿ
     ಬಳಿಕ ಸ್ಥಳದಲ್ಲಿ ಉಪಸ್ಥಿತರಿದ್ದ ಪ್ರೇರಕರ ಸಮಸ್ಯೆಗಳಾದ ಲೋಕ ಶಿಕ್ಷಣ ಕೇಂದ್ರಗಳಿಗೆ ಕಟ್ಟಡ ವ್ಯವಸ್ಥೆ, ಗೌರವಧನ ಪಾವತಿ, ರಾತ್ರಿ ಕಲಿಕಾ ಕೇಂದ್ರದ ಬೆಳಕಿನ ವ್ಯವಸ್ಥೆ ಇತ್ಯಾದಿ ಸಮಸ್ಯೆಗಳನ್ನು ಆಲಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಕ್ಷಣವೇ ಎಲ್ಲಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ, ಮುಖ್ಯೋಪಾಧ್ಯಾಯರ, ಪ್ರೇರಕರ ಜಿಲ್ಲಾ ಮಟ್ಟದಲ್ಲಿ ಸಭೆಯನ್ನು ಕರೆದು, ಚರ್ಚಿಸಿ ಕ್ರಮ ಕೈಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ, ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಶೇ. ೧೦೦ ರಷ್ಟಾಗಲು ಎಲ್ಲರೂ ಸಹಕರಿಸಿ, ಯಶಸ್ವಿಗೊಳಿಸಿ, ಸಾಕ್ಷರ ಜಿಲ್ಲೆಯನ್ನಾಗಿ ಮಾಡಲು ಪ್ರಮಾಣ ವಚನ ಬೋಧಿಸಿದರು.   
     ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಬಿ.ವಾಯ್.ದಾಸರ, ಸೋಮಶೇಖರ ತುಪ್ಪದ, ಸಂಗಪ್ಪ ಕೊಪ್ಪದ, ಶ್ರೀನಿವಾಸಮೂರ್ತಿ ಹೊಸಮನಿ ಸೇರಿದಂತೆ ಪ್ರೇರಕರು ಉಪಸ್ಥಿತರಿದ್ದರು. ರೇವಪ್ಪ ಬಾರಕೇರ ಮತ್ತು ಹೆಚ್.ಎಸ್.ಹೊನ್ನುಂಚಿ ಸಾಕ್ಷರ ಗೀತೆ ಹಾಡಿದರು. ತಾಯಮ್ಮ ವಂದಿಸಿದರು.

ಗೆ ಕಲಿಸುವುದು ಬಹುದೊಡ್ಡ ಗೌರವಯುತವಾದ ಕೆಲಸವಾಗಿದೆ. ಆ ಪವಿತ್ರವಾದ ಕೆಲಸವನ್ನು ಪ್ರೇರಕರು, ಸ್ವಯಂ ಸೇವಕರು ಪ್ರಾಮಾಣಿಕ ಪ್ರಯತ್ನದಿಂದ ನಿರ್ವಹಿಸಿ ಎಂದು ಅವರು ತಿಳಿಸಿದರು.

Please follow and like us:
error