ಜನೇವರಿ ೧೧ ರಿಂದ ಕೆ.ಪಿ.ಟಿ.ಸಿ.ಎಲ್. ಮತ್ತು ಎಸ್ಕಾಂ ವಿದ್ಯುತ್ ಗತ್ತಿಗೆ ನೌಕರರ ರಾಜ್ಯ ಮಟ್ಟದ ಪ್ರತಿಭಟನೆ.

ಕೊಪ್ಪಳ- 04 – ಕೆ.ಪಿ.ಟಿ.ಸಿ.ಎಲ್. ಮತ್ತು ಎಸ್ಕಾಂ ವಿದ್ಯುತ್ ಗುತ್ತಿಗೆ ನೌಕರರನ್ನು ವಜಾಗೋಳಿಸಬಾರದು ಈ ನೌಕರರನ್ನು  ಖಾಯಂಗೊಳಿಸಲು ವಿಶೇಷ ನೇಮಕಾತಿ ನಿಯಾಮವಳಿಯನ್ನು ರೂಪಿಸಬೇಕೆಂದು ಅಲ್ಲಿಯವರೆಗೂ ನೇರ ಗುತ್ತ್ತಿಗೆಯಡಿ ಮುಂದುವರಿಸಬೇಕು ಇತ್ತಿಚೆಗೆ ಪರಿಸ್ಕೃತವಾದ ವೇತನ ಪಿ.ಎಪ್,  ಇಎಸ್‌ಐ ಹಾಗೂ ಇತರೆ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೋಳಿಸಬೇಕು ಇನ್ನು ಮುಂತಾದ ಬೇಡಿಕೆಗಳನ್ನು ಇಡೇರಿಸಲು ಆಗ್ರಹಿಸಿ ಜನೇವರಿ ೧೧ ರಿಂದ ೧೩, ೨೦೧೬ ರವರೆಗೆ ವಿದ್ಯುತ್‌ವಲಯದ ಗುತ್ತಿಗೆ ನೌಕರರ ಪ್ರತಿಭಟನೆಯನ್ನು ಬೆಂಗಳೂರಿನ ಟೌನ ಹಾಲ್ ಮುಂದೆ ಹಾಗೂ ಜನೇವರಿ ೧೨. ೧೩. ರಂದು ಮಾನ್ಯ ಮುಖ್ಯ ಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು. ರಾಜ್ಯದ ಕೆಪಿಟಿಸಿಯಲ್ ಹಾಗೂ ಎಸ್ಕಾಂ ಗಳಲ್ಲಿರುವ ಎ.ಇ.ಜೆ.ಇ, ಹಾಗೂ ಶಿಫ್ಟ್ ಆಪರೇರ್‍ಸ್ ಮತ್ತು ಶಿಫ್ಟ್ ಹೆಲ್ಪರ್‍ಸಗಳು ಈ ಪ್ರತಿಭಟನೆಯಲ್ಲಿ  ಪಾಲ್ಗೋಳ್ಳುವರು.
Please follow and like us:
error