ಕಡತ ವಿಲೇವಾರಿ ಮಾಸಾಚರಣೆಗೆ ಸೂಚನೆ

  ಜಿಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ನವೆಂಬರ್ ೩೦ ರವರೆಗೆ ಕಡತ ವಿಲೇವಾರಿ ಮಾಸಾಚರಣೆ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಸೂಚನೆ ನೀಡಿದ್ದಾರೆ.
  ಎಲ್ಲ ಇಲಾಖೆಗಳ ಜಿಲ್ಲಾ, ತಾಲೂಕು, ವಿಭಾಗ ಮಟ್ಟದ ಕಚೇರಿಗಳ ಮುಖ್ಯಸ್ಥರು ನವೆಂಬರ್ ೩೦ ರವರೆಗೆ ಕಡತ ವಿಲೇವಾರಿ ಮಾಸಾಚರಣೆಯನ್ನು ಹಮ್ಮಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.  ಈ ಸೂಚನೆಯನ್ನು ಎಲ್ಲ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು.  ಅಲ್ಲದೆ ಕಡತ ವಿಲೇವಾರಿ ಕುರಿತ ಮಾಹಿತಿಯನ್ನು ಈ ಮಾಸಾಚರಣೆ ಸಂದರ್ಭದಲ್ಲಿ ಪ್ರತಿ ಸೋಮವಾರ
ಈ ಸುತ್ತೋಲೆಯ ಸೂಚನೆಗಳನ್ನು ಪಾಲಿಸಲು ಹಾಗೂ ವಾರದ ಪ್ರಗತಿ ವರದಿಯನ್ನು ನಿಗದಿತ ನಮೂನೆಯಲ್ಲಿ ಪ್ರತಿ ಸೋಮವಾರದಂದು ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಕಛೇರಿಗೆ ಇ-ಮೇಲ್ ಮೂಲಕ ಹಾಗೂ ಹಾರ್ಡ್ ಕಾಪಿ ಮುಖಾಂತರ ಸಲ್ಲಿಸಬೇಕು ಎಂದು ಡಾ. ಸುರೇಶ್ ಇಟ್ನಾಳ್ ಸೂಚನೆ ನೀಡಿದ್ದಾರೆ

Leave a Reply