ಭಗವದ್ಗೀತೆ ಅಭಿಯಾನ: ಸ್ವರ್ಣವಲ್ಲಿ ಸ್ವಾಮೀಜಿ ಹೇಳಿಕೆಗೆ ಎಸ್.ಎಫ್.ಐ ಖಂಡನೆ

 ಪ್ರಾಥಮಿಕ ಶಿಕ್ಷಣದಲ್ಲಿ ಭಗವದ್ಗೀತೆಯನ್ನು ಪಠ್ಯವನ್ನಾಗಿಸುವವರೆಗೂ ಭಗವದ್ಗೀತೆ ಅಭಿಯಾನವನ್ನು ನಡೆಸುವುದಾಗಿ ಹೇಳಿರುವ ಸ್ವರ್ಣವಲ್ಲಿ ಶ್ರೀ ಗಳ ಹೇಳಿಕೆಯನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕೊಪ್ಪಳ ಜಿಲ್ಲಾ ಸಮಿತಿಯು ಖಂಡಿಸುತ್ತದೆ.  ಸ್ವರ್ಣವಲ್ಲಿ ಸರಸ್ವತಿ ಸ್ವಾಮೀಜಿಯವರ ನಡೆ ಕೋಮು ಸೌಹಾರ್ಧತೆಗೆ ದಕ್ಕೆ ತರುವುದರ ಜೊತೆಯಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ದವಾಗಿದೆ. ೨೦೧೧ ರಲ್ಲಿ ಇವರ ಅಭಿಯಾನವನ್ನು ವಿರೋಧಿಸಿ ಎಸ್.ಎಫ್.ಐ ವ್ಯಾಪಕ ಪ್ರತಿಭಟನೆ ನಡೆಸಿದ ಭಾಗವಾಗಿ ನಿಲ್ಲಿಸಲಾಯಿತು.
ಶಾಲೆಗಳಲ್ಲಿ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.  ಸ್ವಾತಂತ್ರ್ಯ ಬಂದು ಆರುವರೆ ದಶಕ ಕಳೆದರು ಶಿಕ್ಷಣದ ಸುಧಾರಣೆ ಇನ್ನು ಸಾದ್ಯವಾಗಿಲ್ಲ. ಗುಣ ಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗದೆ ಅನೇಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಕಲಿಕೆಯ ಸುಧಾರಣಗೆ ಅಗತ್ಯವಾಗಿ ಬೇಕಾಗಿರುವ ಶಿಕ್ಷಕರು, ಕೊಠಡಿ ಮೂಲಸೌಲಭ್ಯಗಳ ಬಗ್ಗೆ ಮಾತನಾಡುವ ಬದಲು ಶಿಕ್ಷಣದ ಸುಧಾರಣಗೆ ಭಗವದ್ಗೀತೆ ಅಗತ್ಯ ಎನ್ನುವ ಸ್ವರ್ಣವಲ್ಲಿಯವರ ಕುತಂತ್ರವನ್ನು ಎಲ್ಲರೂ ಅರಿಯಬೇಕಿದೆ. ಸಂವಿಧಾನದ ಕಲಂ ೨೮ ರ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಪ್ರಚಾರ ಅಥವಾ ಬೋಧನೆಯನ್ನು ನಿಷೇದಿಸಲಾಗಿದೆ. ಮಕ್ಕಳ ಹಕ್ಕು ಕಾಯ್ದೆ ೨೦೦೯ ರ ಕಲಂ-೫(ಇ)  ಧಾರ್ಮಿಕ ತಾರತಮ್ಯವಿಲ್ಲz ಶಿಕ್ಷಣ ಪಡೆಯಬೇಕಾಗಿರುವುದು ಎಲ್ಲರ ಹಕ್ಕಾಗಿದೆ ಎಂದು ಹೇಳಲಾಗಿದೆ. ಹೀಗಿರುವಾಗ ಜಾತಿ ಧರ್ಮದಗಳ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಲು ಮುಂದಾಗಿರುವ ಸ್ವರ್ಣವಲ್ಲಿ ಮಠದ ಗಂಗಾಧರೇಶ್ವರ ಸ್ವಾಮಿಯರು ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲು ಮುಂದಾಗಿದ್ದಾರೆ. ವಿದ್ಯಾರ್ಥಿಗಳಲ್ಲಿರುವ ಐಕ್ಯತೆ ಮಾನವೀಯತೆಗೆ ಕಲ್ಲು ಹಾಕಲು ಮುಂದಾಗಿರುವ ಸ್ವಾಮಿಜೀಯವರ ಕ್ರಮ ನಿಜಕ್ಕೂ ಖಂಡನಾರ್ಹ.
ಮನುಷ್ಯ ವಿರೋಧಿ, ಕ್ರೌರ್ಯವನ್ನು ಬೋಧಿಸುವ ಬಗವದ್ಗೀತೆಯನ್ನು ಶತಮಾನಗಳಿಂದ ಶರಣರು, ದಾಸರು, ಶೈವರು ಸೇರಿದಂತೆ ಬಹುಸಂಖ್ಯಾತರು ವಿರೋಧಿಸುತ್ತಾ ಬಂದಿದ್ದಾರೆ. ಆದರೆ ನಮ್ಮ ಸ್ವರ್ಣವಲ್ಲಿ ಸ್ವಾಮಿಜಿಗಳಂತಹ ಕುತಂತ್ರ ಮತು ಭಗವದ್ಗೀತೆಗೆ ರಾಷ್ರೀಯ ಗ್ರಂಥದ ಸ್ಥಾನ ಮಾನ ನೀಡಬೇಕೆನ್ನುವ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ರಂತವರು ಭಗವದ್ಗೀತೆಯ ಬ್ರಮೆಯಿಂದ ಹೊರಬರದೆ ಸಮಾಜದ ಸ್ವಾಸ್ಥವನ್ನು ಹಾಳು ಮಾಡುತ್ತಿದ್ದಾರೆ. ಅಷ್ಟೆ ಅಲ್ಲದೆ ಸಮಾಜದಲ್ಲಿ ವಿಷಮತೆ ಮತ್ತು ಅವೈಜ್ಞಾನಿಕತೆಯನ್ನು ಬಿತ್ತಲು ಮುಂದಾಗಿದ್ದಾರೆ. ಹಾಗಾಗಿ ಸರಕಾರ ಯಾವುದೇ ಕಾರಣಕ್ಕೂ ಸ್ವಾಮಿಜಿಯವರ ಪ್ರಸ್ತಾಪವನ್ನು ಒಪ್ಪಬಾರದು ಎಂದು ಆಗ್ರಹಿಸುತ್ತದೆ. ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟವನ್ನು ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು  ಸರಕಾರಕ್ಕೆ  ಎಸ್.ಎಫ್.ಐ ನೀಡಿದೆ.

Related posts

Leave a Comment