“ಕನ್ನಡ ಮಾಧ್ಯಮ ಪ್ರಶಸ್ತಿ” ಪ್ರದಾನ ಸಮಾರಂಭ

 ಬೆಂಗಳೂರು,  : ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರು ವಿಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಫೆಬ್ರವರಿ 7 ರಂದು ಬೆÉಳಿಗ್ಗೆ 10-30 ಗಂಟೆಗೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾರಿಗೆ ಸಚಿವ   ರಾಮಲಿಂಗಾರೆಡ್ಡಿ ಅವರು ಭಾಗವಹಿಸಲಿದ್ದಾರೆ.
ಇದೇ ರೀತಿ ಕನ್ನಡ ಮಾಧ್ಯಮ ಪ್ರಶಸ್ತಿಯನ್ನು ರಾಜ್ಯದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಎಸ್.ಎಸ್.ಎಲ್.ಸಿ. ಯ 684 ವಿದ್ಯಾರ್ಥಿಗಳು ಮತ್ತು ಪಿ.ಯು.ಸಿ.ಯ ಅ 565 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1249 ವಿದ್ಯಾರ್ಥಿಗಳನ್ನು ಗೌರವಿಸಿ ಪುರಸ್ಕರಿಸಲಾಗುತ್ತಿದೆ. ಬೆಂಗಳೂರು ವಿಭಾಗದ ಪ್ರತೀ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಂತೆ ಎಸ್.ಎಸ್.ಎಲ್.ಸಿ. ಯ 193 ಹಾಗೂ ಪಿ.ಯು.ಸಿ.ಯ 196 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 357 ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಗುವುದು.
ಈ ಪುರಸ್ಕಾರವು ಪ್ರಥಮ ನಗದುಬಹುಮಾನ 8,000/- ದ್ವಿತೀಯ ಬಹುಮಾನ 7,000/- ತೃತೀಯ ಬಹುಮಾನ 6,000/- ಗಳಲ್ಲದೆ ಸ್ಮರಣಿಕೆ, ಪ್ರಮಾಣ ಪತ್ರ, ಕೈಗಡಿಯಾರ, ಶಾಲಾ ಬ್ಯಾಗು, ಕನ್ನಡ-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು ಹಾಗೂ ಪೆನ್‍ಸೆಟ್‍ನ್ನು ಒಳಗೊಂಡಿರುತ್ತದೆ.
Please follow and like us:
error