ನೌಕರರ ಸಂಘ ಚುನಾವಣೆ : ನೌಕರರಿಗೆ ಮತದಾನಕ್ಕೆ ೦೨ ಗಂಟೆ ಕಾಲಾವಕಾಶ

  ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ನಿಮಿತ್ಯ ಜು. ೨೨ ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಮತದಾನ ಮಾಡುವ ಕರ್ತವ್ಯ ನಿರತ ನೌಕರ ಬಾಂಧವರಿಗೆ ಮತದಾನ ಮಾಡಲು ೦೨ ಗಂಟೆಗಳ ಕಾಲಾವಕಾಶವನ್ನು ಒದಗಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಚುನಾವಣಾಧಿಕಾರಿ ಎನ್.ವೈ. ಕಾಡಗಿ ಅವರು ತಿಳಿಸಿದ್ದಾರೆ.
  ಮತದಾನ ಪ್ರಕ್ರಿಯೆ ಜು. ೨೨ ರಂದು ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೦೪ ಗಂಟೆಯವರೆಗೆ ಅವಕಾಶ ಇದ್ದು, ಕರ್ತವ್ಯ ನಿರತ ನೌಕರರು ತಮ್ಮ ಮತದಾನದ ಹಕ್ಕು ಚಲಾಯಿಸಲು, ತಮ್ಮ ಕರ್ತವ್ಯದ ಅವಧಿಯಲ್ಲಿ ೦೨ ಗಂಟೆಗಳ ಕಾಲಾವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿ ಎನ್.ವೈ. ಕಾಡಗಿ   ತಿಳಿಸಿದ್ದಾರೆ.

Related posts

Leave a Comment