ಬೀದಿಗೆ ಬಿದ್ದು ಬಿಕ್ಷೆ ಬೇಡುತ್ತಿರುವ ಅತಿಥಿ ಉಪನ್ಯಾಸಕರು.

ಕೊಪ್ಪಳ,ಜ.೨೦ ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಾ ರಾಜಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಅತಿಥಿ ಉಪನ್ಯಾಸಕರಿಗೆ ಅತ್ಯಂತ ಕನಿಷ್ಠ ವೇತನ ನೀಡಿ, ಗರಿಷ್ಠ ಸೇವೆ ಪಡೆದು ಸೇವೆ ಸಲ್ಲಿರುತ್ತಾ ಅವರ ವಯೋಮಿತ ಮೀರುವಂತೆ ಮಾಡಿರುವ ಸರ್ಕಾರ ಅತಿಥಿ ಉಪನ್ಯಾಸಕರತ್ತ ಸಂಪೂರ್ಣ ನಿರ್ಲಕ್ಷೆ ಭಾವನೆ ತಾಳಿದೆ.
ಈಗಾಗಲೇ ೩ರಿಂದ ೫ ವರ್ಷ ಸೇವೆ ಸಲ್ಲಿಸಿ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡಿದ ನಿದರ್ಶನವಿದೆ. ಬೇರೆಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರ ಸೇವಾ ಜೇಷ್ಟತೆ ಆದಾರದ ಮೇಲೆ ನೇಮಕಾತಿ ಮಾಡಲಾಗಿದೆ. ಜೀವನ ನಿರ್ವಹಣೆಯ ಮಟ್ಟದ ಆಧಾರದ ಮೇಲೆ ವೇತನ ನೀಡಲಾಗುತ್ತದೆ. ಪ್ರತಿ ತಿಂಗಳು ಸಂಬಳವು ಕೂಡಾ ಬಿಡುಗಡೆಯಾಗದಿರುವುದರಿಂದ ಕೆಲವು ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡ ನಿದರ್ಶನವಿದೆ.
ಅತಿಥಿ ಉಪನ್ಯಾಸಕರು ತಮ್ಮ ಹುದ್ದಗೆ ಅನುಗುಣವಾಗಿ ಶಾಂತ ರೀತಿಯಿಂದ ಹುದ್ದೆಗೆ ಹಾಗೂ ಗೌರವಕ್ಕೆ ಅನುಗುಣವಾಗಿ ಪ್ರತಿಭಟನೆ, ಹೋರಾಟ, ಸಮಾವೇಶ ಮುಂತಾದವುಗಳನ್ನು ಮಾಡಿದರೂ ಸರ್ಕಾರ ಅತಿಥಿ ಉಪನ್ಯಾಸಕರತ್ತ ಕಣ್ಣೆತ್ತಿಯೂ ನೋಡದ ಪರಿಸ್ಥಿತಿ ಉದ್ಬವಿಸಿದೆ. ಕಾರಣ ಅತಿಥಿ ಉಪನ್ಯಾಸಕರು ತಮ್ಮ ಹಾಗೂ ತಮ್ಮ ಕುಟುಂಬದ ಜೀವನ ನಿರ್ವಹಣೆಗೋಸ್ಕರ ಬೀದಿಗಿಳಿದು ಅತಿಥಿ ಉಪನ್ಯಾಸಕರು ಭಿಕ್ಷೆ ಬೇಡುವ ಪರಿಸ್ಥಿತಿ ಬಂದದೊದಗಿದೆ. 
ಈ ವಿನೂತನ ಪ್ರತಿಭಟನೆಯ ಮೂಲಕ ದಿ. ೨೨ ಜನೇವರಿ ಶುಕ್ರವಾರ ಬೆಳಿಗ್ಗೆ ೧೧ ಗಂಟೆಗೆ ಅಶೋಕ ಸರ್ಕಲ್‌ನಿಂದ ಜಿಲ್ಲಾಡಳಿತ ಭವನದ ವರೆಗೆ ಕೊಪ್ಪಳ ಜಿಲ್ಲಾ ಅತಿಥಿ ಉಪನ್ಯಾಸಕರು  ಬಿದ್ದಿಗೆ ಇಳಿದು ಜಿಲ್ಲಾಡಳಿತದ ಕಚೇರಿವರೆಗೆ ಪ್ರತಿಭಟನಾ ಮೇರವಣಿಗೆ ಮೂಲಕ  ನಿರ್ಲಕ್ಷ ಭಾವನೆ ತಾಳಿರುವ ಸರ್ಕಾರಕ್ಕೆ ಈ ಮೂಲಕ ಎಚ್ಚರಿಸಲಾಗಿದೆ.
ಇದಕ್ಕೂ ಸರ್ಕಾರ ಬಗ್ಗದಿದ್ದಲ್ಲಿ ರಾಜಾದ್ಯಾಂತ ಕಾರ್ಯನಿರ್ವಹಿಸುವತ್ತಿರುವ ಎಲ್ಲಾ ಅತಿಥಿ ಉಪನ್ಯಾಸಕರುಗಳು ಕುಟುಂಬ ಪರಿವಾರ ಸಮೇತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯವರ ಮನೆ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮತ್ತೊಮ್ಮೆ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಸಂಚಾಲಕರು ಹಾಗೂ ಕೊಪ್ಪಳ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ವೀರಣ್ಣ ಎಸ್ ಸಜ್ಜನರ ತಿಳಿಸಿದ್ದಾರೆ.
Please follow and like us:
error