ಗಿಣಗೇರಿ ಪೌಢ ಶಾಲೆ ವಿದ್ಯಾರ್ಥಿ ಉದ್ದಜಿಗಿತದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ.

ಕೊಪ್ಪಳ- ೨೪- ಉಡುಪಿ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆದ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯವರು ಪೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ರಾಜ್ಯ ಮಟ್ಟದ ಉದ್ದ ಜಿಗಿತ ಸ್ಪರ್ದೆಯಲ್ಲಿ  ಕೊಪ್ಪಳ ತಾಲುಕಿನ ಗಿಣಗೇರಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಮಂಜುನಾಥ ಸಿಂದೋಗಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ೨೫ ಅಡಿ ದೂರ ಜಿಗಿದು ದಾಖಲೆ ಮೇರೆದಿದ್ದಾನೆ. ಗಿಣಗೇರಿಯಂತಹ ಗ್ರಾಮೀಣ ಪ್ರದೇಶದ ಈ ಅಪ್ಪಟ ಪ್ರತಿಭೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವರ ಮೂಲಕ ಕೊಪ್ಪಳ ಜಿಲ್ಲೆಯ ಕೀರ್ತಿ ಪತಾಕೆಯನ್ನು ರಾಷ್ಟಮಟ್ಟದಲ್ಲಿ ಹಾರಿಸಿದ್ದಾನೆ.

Leave a Reply