You are here
Home > Koppal News > ವಿದ್ಯಾರ್ಥಿಗಳಿಗೆ ಪ್ರಶಸ್ತಿ.

ವಿದ್ಯಾರ್ಥಿಗಳಿಗೆ ಪ್ರಶಸ್ತಿ.

ಕೊಪ್ಪಳ- 20- ನಗರದ ಶ್ರೀಗವಿಸಿದೇಶ್ವರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚಿಗೆ ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ವತಿಯಿಂದ ಮರಿಯಮ್ಮನಹಳ್ಳಿಯಲ್ಲಿ ಜರುಗಿದ ಅಂತರ ಕಾಲೇಜುಗಳ ಪುರುಷ ಮತ್ತು ಮಹಿಳೆಯರ ಗುಡ್ಡಗಾಡು ಓಟದ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಪದವಿ ವಿದ್ಯಾರ್ಥಿಗಳಾದ ಕುಮಾರ ಆನಂದ ತೃತೀಯ ಸ್ಥಾನ, ಕೆ ಹನುಮವ್ವ ನಾಲ್ಕನೇ ಸ್ಥಾನ,  ಕುಮಾರ ರವಿ ದೇಸಾಯಿ ಏಳನೆ ಸ್ಥಾನ ಪಡೆದಿರುತ್ತಾರೆ. ಈ ಕ್ರೀಡಾಪಟುಗಳಿಗೆ ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆಶಿರ್ವದಿಸಿದ್ದಾರೆ. ಶ್ರೀಗವಿವ ಟ್ರಸ್ಟ ಕಾರ್ಯದರ್ಶಿ ಎಸ್ ಮಲ್ಲಿಕಾರ್ಜುನ, ಸದಸ್ಯ ಸಂಜಯಕೊತಬಾಳ, ಪ್ರಾಚಾರ್ಯ ಮನೋಹರ ದಾದ್ಮಿ ಹಾಗೂ ದೈಹಿಕ ನಿರ್ದೇಶಕ ಈಶಪ್ಪ ದೊಡ್ಮನಿ ಹಾಗೂ  ಶಿಕ್ಷಕ, ಶಿಕ್ಷಕೇತರ ಬಳಗ ಹರ್ಷವ್ಯಕ್ತಪಡಿಸಿದ್ದಾರೆ.

Leave a Reply

Top