ನ್ಯಾಯಾದೀಶರಿಗೆ ಬಿಳ್ಕೊಡುಗೆ ಸಮಾರಂಭ

ಕೊಪ್ಪಳ: ಜಿಲ್ಲಾ ವಕೀಲರ ಸಂಘ ಕೊಪ್ಪಳ ವತಿಯಿಂದ ದಿ  ೨೮ ರಂದು ಸಂಘದಲ್ಲಿ ನಿವೃತ್ತಗೊಳ್ಳಲ್ಲಿರುವ ಮಾನ್ಯ ಡಿ.ಎಸ್. ಶಿಂಧೆ ಜಿಲ್ಲಾ ಹಾಗೂ ಪ್ರಧಾನ ಸತ್ರ ನ್ಯಾಯಾದೀಶರಿಗೆ ಬಿಳ್ಕೊಡುಗೆ ಸಮಾರಂಭವನ್ನು ವಕೀಲರ ಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ. ವಿ. ಕಣವಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಯಾದ ತುಳಸಿ ಎಂ. ಮದ್ದಿನೇನಿ. ಹಾಗೂ ನ್ಯಾಯಾಧೀಶರಾದ ಕೆ. ಶಿವರಾಮ, ಶ್ರೀಮತಿ ಕಾವೇರಿ, ಮಹೇಶ ಬಾಬು, ಶಿರವಾಳಕರ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಶ್ರೀಮತಿ ಸಂಧ್ಯಾ ಬಿ. ಮಾದಿನೂರ, ಸಂಘದ ಉಪಾಧ್ಯಕ್ಷರು ಎಸ್.ಎನ್. ಮುತಗಿ, ಪ್ರಧಾನ ಕಾರ್ಯದರ್ಶಿಯಾದ ಆರ್. ವಿ. ಮಠದ, ವೇದಿಕೆ ಮೆಲೆ ಉಪಸ್ಥಿತರಿದ್ದರು. ಮತ್ತು ಸಂಘದ ಹಿರಿಯ ವಕೀಲರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 
Please follow and like us:
error