ಉತ್ತಮ ಸಂಸ್ಕಾರದ ಅಗತ್ಯವಿದೆ -ಸಿಂಧೂತಾಯಿ ಕಾಡಾದಿ

೪೧ ನೇ ಬೆಳಕಿನೆಡೆಗೆ,    
ಕೊಪ್ಪಳ : ಸಂಸ್ಥಾನ ಶ್ರೀಗವಿಮಠದಲ್ಲಿ ಇತ್ತೀಚಿಗೆ ಅಮವಾಸ್ಯೆಯ ದಿನದಂದು ೪೧ ನೆ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ ಜರುಗಿತು. ಮುಖ್ಯ ಅತಿಥಿಗಳಾಗಿ ಸೊಲ್ಲಾಪುರದ ಸಿಂಧೂತಾಯಿ ಕಾಡಾದಿ  ಮಾತನಾಡಿ ಮಾನವನ ಜೀವನ ಸರ್ವ ಶ್ರೇಷ್ಠ. ಈ ಜೀವನಕ್ಕೆ ಉತ್ತಮ ಸಂಸ್ಕಾರದ ಅಗತ್ಯತೆ ಇದೆ. ಅಂತಹ ಸಂಸ್ಕಾರವನ್ನು ಶರಣರ ಸಂದೇಶಗಳ ಮೂಲಕ  ನಾವೆಲ್ಲಾ ಪಡೆದುಕೊಳ್ಳಬೇಕಾಗಿದೆ. ಶರಣರ ಸಾಹಿತ್ಯದಲ್ಲಿ  ಹಿರಿದಾದ  ಮೌಲ್ಯಗಳಿವೆ. 
 ಈ ಬೆಳಕಿನೆಡೆಗೆ  ಕಾರ್ಯಕ್ರಮದ ಮೂಲಕ ಜನರಲ್ಲಿ ಸಂಸ್ಕಾರ ಮೂಡಿಸುತ್ತರುವ ಶ್ರೀಗವಿಮಠದ ಸೇವೆ ಶ್ಲಾಘನೀಯ ಎಂದರು.  ಶರಣರ ಸಾಹಿತ್ಯದಲ್ಲಿ ಅತ್ಯಮುಲ್ಯವಾದ  ಮೌಲ್ಯಗಳಿವೆ. ನೇತೃತ್ವವನ್ನು  ಶಂಭುಲಿಂಗದೇವರು ಯತ್ನಟ್ಟಿ ವಹಿಸಿ ಭಕ್ತರನ್ನುದ್ಧೇಶಿಸಿ ಮಾತನಾಡಿದರು.  ಇದೇ ವೇದಿಕೆಯಲ್ಲಿ ಕುಮಾರಿ ಪ್ರಗತಿ ಎ.ಪಿ ಇವರಿಂದ ಸ್ಯಾಕ್ಸೋಪೋನ್ ಸಂಗೀತ ಕಾರ್ಯಕ್ರಮ ಜರುಗಿತು.  ಭಕ್ತಿಸೇವೆಯನ್ನು ದಿ.ವೀರಪ್ಪ ಕೊಪ್ಪಳ ಇವರ ಸ್ಮರಣಾರ್ಥ ಅವರ ಶ್ರೀಮತಿ ಹಾಗೂ ಮಕ್ಕಳು ವಹಿಸಿದ್ದರು.  
Please follow and like us:

Related posts

Leave a Comment