ಬಿಸಿಲು ಲೆಕ್ಕಿಸದೇ ಭಕ್ತಿರಸದಲ್ಲಿ ತೇಲಾಡಿದ ಭಕ್ತರು

 ಶ್ರೀ ಮ.ನಿ.ಪ್ರ.ಜ.ಲಿಂ.ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ೧೧ ಪುಣ್ಯಸ್ಮರಣೋತ್ಸವ
 ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿಂದು ಮಂಗಳವಾರ  ಶ್ರೀ ಮ.ನಿ.ಪ್ರ.ಜ.ಲಿಂ.ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ೧೧ ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಚಟುವಟಿಕೆಗಳು ಜರುಗಿದವು. ಬೆಳಿಗ್ಗೆ ಲಿಂ.ಶಿವಶಾಂತವೀರ ಶಿವಯೋಗಿಗಳ ಗದ್ದೂಗೆಗೆ ಅಭಿಷೇಕ ಮಾಡುವದರ ಮೂಲಕ ವಿವಿಧ ಕಾರ್ಯಕ್ರಮಗಳು ಶ್ರೀಗವಿಮಠದಲ್ಲಿ ಚಾಲನೆಯಾದವು. ಬೆಳಿಗ್ಗೆ  ೬.೦೦ ಗಂಟೆಗೆ ಶ್ರೀಮ.ನಿ.ಪ್ರ.ಜ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಅಪಾರ ಭಕ್ತಾಧಿಗಳ ಸಮ್ಮುಖದಲ್ಲಿ ಶ್ರೀಮಳೆಮಲ್ಲೇಶ್ವರ ದೇವಸ್ಥಾದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ ನಡೆಯಿತು. ಪೂಜ್ಯ ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು,  ಹೂವಿನಹಡಗಲಿಯ ಶ್ರೀಮ.ನಿ.ಪ್ರ.ಜ. ಹಿರಿಶಾಂತವೀರ ಮಹಾಸ್ವಾಮಿಗಳು, ಶ್ರೀ.ಷ.ಬ್ರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ.ಷ.ಬ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಅಣದೂರು, ಚನ್ನಮಲ್ಲ ದೇವರು ಕುಕನರು ಭಾಗವಹಿಸಿದ್ದರು. ಪಾದಯಾತ್ರೆಯು ಮಳೆಮಲ್ಲೇಶ್ವರ ದೇವಸ್ಥಾನದಿಂದ, ಬನ್ನಿಕಟ್ಟಿ, ಹೊಸಬಸ್ ನಿಲ್ದಾಣ, ಅಶೋಕಸರ್ಕಲ್, ಜವಾಹರ ರಸ್ತೆ, ಗಡಿಯಾರಕಂಭ, ಶಾರದಾ ಚಿತ್ರಮಂದಿರ ಮಾರ್ಗವಾಗಿ ಗವಿಮಠ ತಲುಪಿತು. ಓಂ.ಶಿವಶಾಂತವೀರಾಯ ನಮ: ಎಂಬ ಭಕ್ತವಾಣಿ  ಹಾಗೂ ಶ್ರೀಶಿವಶಾಂತವೀರ ಶರಣರು ಹಾಡುತ್ತಿದ್ದ ಭಕ್ತಿಯ ಹಾಡುಗಳು, ತತ್ವಪದದ ಹಾಡುಗಳು, ಅನುಭಾವದ ಹಾಡುಗಳು ಭಕ್ತರ ಮನಸೂರೆಗೊಂಡವು.

Related posts

Leave a Comment