ನಾಡಹಬ್ಬ ದಸರಾ ಸಾಂಸ್ಕೃತಿಕ ಪ್ರತಿಭೋತ್ಸವಕ್ಕೆ ಕರೆ.

ದಸರಾ  ಹಬ್ಬ  ನಾಡಿನ  ಸಾಂಸ್ಕೃತಿಕ  ಪರಂಪರೆ  ಬಿಂಬಿಸುವ  ದೊಡ್ಡ  ಹಬ್ಬ .  ಕನ್ನಡಿಗರ  ಮನೆ  ಮನಗಳಲ್ಲಿ  ದಸರಾ  ಸದಾ ಹಸಿರು.
    ಈ  ನಿಟ್ಟಿನಲ್ಲಿ  ನಾಡಹಬ್ಬ  ದಸರಾ ಸಾಂಸ್ಕೃತಿಕ  ಪ್ರತಿಭೋತ್ಸವವನ್ನು,  ಭಾರತರತ್ನ  ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ವತಿಯಿಂದ  ದಿನಾಂಕ  ೧೫ ಮತ್ತು ೧೬ನೇ ಅಕ್ಟೋಬರ್ – ೨೦೧೫ರಲ್ಲಿ,  ಎರಡು  ಪೂರ್ಣ  ದಿನ,  ಬೆಂಗಳೂರು  ನಗರದ  ನಯನ  ರಂಗಮಂದಿರದಲ್ಲಿ  ಹಮ್ಮಿಕೊಂಡಿದೆ.
    ನೃತ್ಯ, ಗಾಯನ, ಸಂಗೀತ,  ಭಜನೆ, ಜಾನಪದ, ಚಲನಚಿತ್ರ  ಹೀಗೆ  ೨೦೦ಕ್ಕೂ  ಹೆಚ್ಚು  ಕಲೆಗಳ  ಪ್ರದರ್ಶನಕ್ಕೆ  ಅವಕಾಶ  ಕಲ್ಪಿಸಲಾಗಿದೆ.
    ೫ ವರ್ಷ  ಮೇಲ್ಪಟ್ಟ  ಕಲಾವಿದರು,  ಮಕ್ಕಳು, ಹಿರಿಯರು,  ವಿದ್ಯಾರ್ಥಿ,  ವಿದ್ಯಾರ್ಥಿನಿಯರು,  ಯಾರಾದರೂ  ಭಾಗವಹಿಸುವ  ಮೂಲಕ,  ವೇದಿಕೆ  ನೀಡುವ  ಗೌರವ  ಪುರಸ್ಕಾರ  ಪಡೆಯಬಹುದು.
    ರಾಷ್ಟ್ರೀಯ  ವಿಭೂಷಣ  ರಾಷ್ಟ್ರ ಪ್ರಶಸ್ತಿ ಮತ್ತು  ಕರ್ನಾಟಕ  ವಿಭೂಷಣ  ರಾಜ್ಯಪ್ರಶಸ್ತಿಗಾಗಿ  ನಡೆಯಲಿರುವ, ನಾಡಹಬ್ಬ  ದಸರಾ  ಸಾಂಸ್ಕೃತಿಕ  ಪ್ರತಿಭೋತ್ಸವ  ವೇದಿಕೆ  ಹಾಗೂ  ವಿಚಾರ  ಸಂಕಿರಣ  ಪ್ರತಿಭೆಗಳ  ಶೋಧನೆಗೆ  ಪೂರಕ.  ಆಸಕ್ತರು  ನಿಗದಿತ  ಅರ್ಜಿ  ಪಡೆದು  ಭಾಗವಹಿಸಬಹುದು.  ಹೆಚ್ಚಿನ ಮಾಹಿತಿಗಾಗಿ  ಸಂಪರ್ಕಿಸಿ :  ರಮೇಶ ಸುರ್ವೆ  ಅಧ್ಯಕ್ಷರು  ಭಾರತರತ್ನ  ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಗ್ ಪ್ರತಿಷ್ಠಾನ  ಟ್ರಸ್ಟ್  (ರಿ.)  ನಂ. ೨೧೫/೨೧೬, ೨ನೇ ಮಹಡಿ, ೧೩ನೇ ಮುಖ್ಯ ರಸ್ತೆ, ೩ನೇ ಹಂತ, ಮಂಜುನಾಥನಗರ, ಬೆಂಗಳೂರು – ೫೬೦೦೧೦. ಮೊಬೈಲ್ : ೯೮೪೫೩೦೭೩೨೭. ವಂದನೆಗಳೊಂದಿಗೆ,
Please follow and like us:
error