ಮಹಿಳೆಯರಿಗೆ ಕಂಪ್ಯೂಟರ ತರಬೇತಿ : ಅರ್ಜಿ ಆಹ್ವಾನ

 ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ ಹಾಗೂ ಕಿಯೋನಿಕ್ಸ್ ಸಂಸ್ಥೆ ಬೆಂಗಳೂರು ಇವರ ವತಿಯಿಂದ ಜಿಲ್ಲೆಯ ಪ್ರತಿ ತಾಲೂಕಿಗೆ ೨೦ ಗುರಿಗಳಿದ್ದು, ೩ ತಿಂಗಳ ವಿವಿಧ ಕಂಪ್ಯೂಟರ್ ತರಬೇತಿಗಳಿಗಾಗಿ ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 
  ಕಂಪ್ಯೂಟರ್ ತರಬೇತಿಗಳಾದ ಅಕೌಂಟಿಂಗ್ ಮತ್ತು ಕಂಪ್ಯೂಟರ‍್ಸ್, ಡೆಸ್ಕ್‌ಟಾಪ್ ಪಬ್ಲಿಶಿಂಗ್ ಹಾಗೂ ಕನ್ನಡ ನುಡಿ, ವೆಬ್ ಡಿಜೈನಿಂಗ್ ತರಬೇತಿ ನೀಡಲಾಗಲಿದ್ದು, ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಅಭ್ಯರ್ಥಿಗಳಿಗೆ ಯಾವುದೇ ಶಿಷ್ಯವೇತನವಾಗಲಿ, ಪ್ರಯಾಣ ಭತ್ಯೆಯಾಗಲಿ ನೀಡಲಾಗುವುದಿಲ್ಲ. ೧೮ ರಿಂದ ೩೫ ವರ್ಷದವರಾಗಿರಬೇಕು, ಪಿಯುಸಿ ನಂತರದ ೩ ವರ್ಷದ ಡಿಪ್ಲೋಮಾಗಳ ಮತ್ತು ಅದಕ್ಕೂ ಮೇಲ್ಪಟ್ಟು ಉತ್ತೀರ್ಣ/ಅನುತ್ತೀರ್ಣರಾದವರಾಗಿರಬೇಕು, ವಾರ್ಷಿಕ ಆದಾಯ ರೂ.೪೦,೦೦೦/- ಮೀರಿರಬಾರದು. ಅರ್ಜಿ ಸಲ್ಲಿಸಲು ಸೆ.೧೨ ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ  

Related posts

Leave a Comment