ಬಿ.ಜೆ.ಪಿ ಗೆ ವಿನಾಶ ಕಾಲಕ್ಕೆ ವಿಪರೀತ ಬುದ್ದಿ – ಸುರೇಶ ದಾಸರಡ್ಡಿ

 ಕೊಪ್ಪಳ :- ಹೈದ್ರಾಬಾದ ಕರ್ನಾಟಕದ ಜನತೆಯ ಹಲವಾರು ವರ್ಷಗಳ ಹೋರಾಟದ ಫಲವಾಗಿ ಕೇಂದ್ರ ಸರಕಾರವು ವಿಶೇಷ ೩೭೧ ನೇ ಕಲಂ ಮೂಲಕ ಈ ಭಾಗದ ಹಿಂದುಳುವಿಕೆಗೆ ತಿಲಾಜಂಲಿ ಹಾಡಲು ಮಳೆಗಾಲ ಅದಿವೆಶನದಲ್ಲಿ ಜನತೆಯ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದ್ದು ಮತ್ತು ೩೭೧ ನೇ ಕಲಂ ಗೆ ಸಂಭದ ಪಟ್ಟಂತೆ ರಾಜ್ಯದ ವಿಧಾನ ಸಭೆಯ ಉಭಯ ಸದನಗಳಲ್ಲಿ ಚರ್ಚೆಯಾಗಿದ್ದು ಇಗ ವಿಶೇಷ ಮಾನ್ಯತೆಯನ್ನು ಜಾರಿಗೆ ತರುವಾಗ ರಾಜ್ಯ ಸರಕಾರವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳುವ ಮೂಲಕ ಹೈದ್ರಾಬಾದ ಕರ್ನಾಟಕದ ಜನತೆಗೆ ರಾಜ್ಯ ಬಿ.ಜೆ.ಪಿ ಸರಕಾರವು ದ್ರೋಹವನ್ನು ಎಸಗುತ್ತಿದೆ. ಇದನ್ನು ಗಮನಿಸಿದರೆ ಇಂದು ವಿನಾಶದ ಹಂಚಿನಲ್ಲಿರುವ ಭ್ರಷ್ಟ ಬಿ.ಜೆ.ಪಿ ಗೆ ಕೊನೆಗಾಲ ಬಂದಿದೆ. ಇವರ ಈ ವರ್ತನೆಗೆ ಹೈದ್ರಾಬಾದ ಕರ್ನಾಟಕ ಭಾಗದ ಜನತೆ ತಕ್ಕ ಪಾಠವನ್ನು ಕಲಿಸಲಿದ್ದಾರೆ.
    ಆಂಧ್ರ ಪ್ರದೇಶದಲ್ಲಿ ಗ್ರಾಮ ಪಂಚಾಯತ ಸದಸ್ಯನು ಆಗಲು ಲಾಯಕ್ ಇಲ್ಲದ ವೆಂಕಯ್ಯ ನಾಯ್ಡು ರಂತಹ ಅಯೋಗ್ಯ ನಾಯಕರು ಕರ್ನಾಟಕದಿಂದ ಸಂಸತಿಗೆ ಆಯ್ಕೆಯಾಗಿ ಉಂಡ ಮನೆಯ ಜಂತಿಯನ್ನು ಎಣಿಸುವ  ಹೀನ ಕೆಲಸಕ್ಕೆ ಕೈ ಹಾಕಿರುವುದು ಖಂಡನಾರ್ಹ ಮತ್ತು ಇವರನ್ನು ಸಂಸತಿಗೆ ಆಯ್ಕೆಮಾಡಿದ ಬಿ.ಜೆ.ಪಿ ಪಕ್ಷವು ಬಾರಿ ಬೆಲೆಯನ್ನು ತೆರಬೇಕಾಗುತ್ತದೆ. ಎಂದು ಸುರೇಶ ದಾಸರಡ್ಡಿ ಉಪಾಧ್ಯಕ್ಷರು ಕೊಪ್ಪಳ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ ಸಮಿತಿ ಇವರು ಆಕ್ರೋಶ ವ್ಯಕ್ತಪಡಿಸಿದರು.
Please follow and like us:
error