ಜಾನಪದ ನಿಜ ಜೀವನದ ಕೈಗನ್ನಡಿ –

ಕೊಪ್ಪಳ :- ಕೊಪ್ಪಳ ತಾಲೂಕಿನ ಸರಕಾರಿ ಪದವು ಪೂರ್ವ ಕಾಲೇಜ ಕಿನ್ನಾಳದ ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರದ ೫ ನೇ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಚುಟುಕು ಸಾಹಿತಿ,ಜನಪದ ಕಲಾವಿದ ಹಾಗೂ ಉಪನ್ಯಾಸಕರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಯವರು   ಜಾನಪದ ಸಾಹಿತ್ಯದ ಬೆಳವಣಿಗೆ ಕುರಿತು ಉಪನ್ಯಾಸದಲ್ಲಿ ಜನರು ತಾವು ಅನುಭವಿಸಿದ, ಕಂಡ ಸನ್ನೀವೆಶಗಳಲ್ಲಿ ಆಧರಿಸಿ ಬೆಳೆದ ಸಾಹಿತ್ಯವೇ ಜನಪದ ಸಾಹಿತ್ಯ  ಇದು ಜೀವನದ ಕಷ್ಟ ಸುಖ ಹಾರೈಕೆ ಸಂದೇಶಗಳನ್ನು ಒಳಗೊಂಡ ಸೋಭಾನೆ, ಲಾವಣಿ, ಹಂತಿ, ತತ್ವ, ಗುರ್ಜಿ, ಪದಗಳನ್ನು ಹೊಂದಿದೆ.ಆದರೆ ಇಂದು ಈ ಹಾಡುಗಳು ಪಾಶ್ಚಿಮಾತ್ಯ ಸಂಸ್ಕೃತಿಯ ದಾಳಿಯಿಂದ ನಮ್ಮ ಸಂಸ್ಕೃತಿಗೆ ತೊಡಕಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಜನಪದ ಸಾಹಿತ್ಯವನ್ನು ಅಭ್ಯಸಿಸಿ ರೂಢಿಸಿಕೊಂಡು ಬೆಳೆಸಿದಾಗ ಮಾತ್ರ ಈ ಜನಪದ ಮುಂದಿನ ಪಿಳಿಗೆಗೆ ಉಳಿಯಬಲ್ಲದು ಎಂದು ತಿಳಿಸಿದರು. 
ವೇಧುಕೆಯ ಮೇಲೆ ಗ್ರಾ.ಪಂಚಾಯತ ಅಧ್ಯಕ್ಷರಾದ ಹಂಪಮ್ಮ ಎಲಿಗಾರ, ಗ್ರಾ.ಪಂ ಸದಸ್ಯರಾದ ವೀರಭದ್ರಪ್ಪ ಗಂಜಿ, ಶೇಖರಪ್ಪ ಉದ್ದಾರ, ಉದಯಕುಮಾರ ಚಿತ್ರಗಾರ, ಲಕ್ಷ್ಮೀದೇವಿ ಕಾಳಪ್ಪ ಬಿದರೂರು, ಉಪನ್ಯಾಸಕಿಯಾದ ಹೇಮಾ.ಜೆ, ರತ್ನಬಾಯಿ ವಾಯ್.ಕೆ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಧಿಕಾರಿಗಳಾದ ವಾಸುದೇವ.ಜಿ.ಅಡವಿಭಾವಿ ಉಪಸ್ಥಿತರಿದ್ದರು. 
ಆರಂಭದಲ್ಲೆ ಶಿಭಿರಾರ್ಥಿಗಳಾದ ಪ್ರಶಾಂತ ಕುಮಾರ ಸಂಗಡಿಗರು ಪ್ರಾರ್ಥಿಸಿದರು, ವಿಜಲಕ್ಷ್ಮೀ ಸ್ವಾಗಿತಿಸಿದಳು, ರವಿಗೌಡ ನಿರೂಪಿಸಿದ, ನಾಗರಾಜ ಚಿತ್ರಗಾರ ವಂದಿಸಿದರು, ಕಾರ್ಯಕ್ರಮದ ನಂತರ ಶಿಭಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. 
Please follow and like us:
error