ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಅನುಕೂಲತೆ ಒದಗಿಸಲು ಸಯ್ಯದ್ ಮನವಿ.

ಕೊಪ್ಪಳ,ಜು.೧೬ ಜಿಲ್ಲಾಸ್ಪತ್ರೆಯಲ್ಲಿ ಬರುವ ಬಡ ರೋಗಿಗಳಿಗೆ, ಅಂಗವಿಕಲರಿಗೆ ಅವರ ಆರೋಗ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಹೆಚ್ಚಿನ ಅನುಕೂಲತೆಗಳನ್ನು ಒದಗಿಸಿಕೊಡುವಂತೆ ವೈದ್ಯಾಧಿಕಾರಿಗಳಿಗೆ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಮನವಿ ಮಾಡಿಕೊಂಡು ಹೆಚ್ಚಿನ ಸೌಕರ್ಯ ಒದಗಿಸಲು ಸಲಹೆ ನೀಡಿದರು.
    ಅವರು ಬುಧವಾರ ಸಚಿವರಾದ ಆರ್.ರೋಷನ್ ಬೇಗ್ ಅವರ ೬೨ನೇ ಜನ್ಮ ದಿನದ ಅಂಗವಾಗಿ ರೋಗಿಗಳಿಗೆ ಹಣ್ಣು, ಹಂಪಲ ವಿತರಣೆ ಮಾಡಲು ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಅಂಗವಿಕಲರು ಸಯ್ಯದ್‌ರವರನ್ನು ಭೇಟಿ ಮಾಡಿ ತಮ್ಮ ಕುಂದು ಕೊರತೆ ಅಹವಾಲುಗಳನ್ನು ತೋಡಿಕೊಂಡಾಗ ಅವರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡಿದ ಕೆ.ಎಂ.ಸಯ್ಯದ್‌ರವರು ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ, ಹೆಚ್ಚಿನ ಅನುಕೂಲತೆ ಒದಗಿಸಲು ಕೆ.ಎಂ.ಸಯ್ಯದ್‌ರವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮೌಲಾ ಹುಸೇನ್ ಜಮೇದಾರ, ಗೌಸ್‌ಸಾಬ ನೀರಲಗಿ, ರಫೀಕ್ ಧಾರವಾಡ, ಮಾರುತಿ, ಕವಲೂರು ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮವ್ವ ಲಕ್ಷ್ಮಪ್ಪ ಗುಡಿ, ಸದಸ್ಯ ಸ್ವಾರೆಪ್ಪ, ವಲೀಸಾಬ ಅಗಳಕೇರಾ, ಬಕ್ಷಿಸಾಬ ಹಿಟ್ನಾಳ, ಗುಡದಪ್ಪ ಹಲಗೇರಿ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.

Please follow and like us:
error