ಇಂದು ೨೦ ನೇ ವಚನಾನುಭವ ಕಾರ್ಯಕ್ರಮ

ಕೊಪ್ಪಳ, ನ.೨೪: ಶಿವಶರಣ ಹಡಪದ ಅಪ್ಪಣ್ಣ ಯುವಕ ಸಂಘ ಹಾಗೂ ವಿಶ್ವಗುರು ಬಸವೇಶ್ವರ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಇದೇ ದಿ.೨೫ ಮಂಗಳವಾರ ೨೦ ನೇ ವಚನಾನುಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
ಇಲ್ಲಿನ ಗಣೇಶ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ  ಸಂಜೆ ೬ ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೀದರ ಬಸವ ಸೇವಾ ಪ್ರತಿಷ್ಟಾನದ ಅಕ್ಕ ಅನ್ನಪೂರ್ಣ ತಾಯಿ ಕಾರ್ಯಕ್ರಮದ ಸಾನಿಧ್ಯವಹಿಸಲಿದ್ದು. ಅತಿಥಿಗಳಾಗಿ ನಗರಸಭೆ ಸದಸ್ಯ ಪ್ರಾಣೇಶ ಮಾದಿನೂರು, ನೃಪತುಂಗ ಶಿಕ್ಷಣ ಸಮಿತಿ ಅಧ್ಯಕ್ಷ, ಮಾಜಿ ನಗರಸಭೆ ಸದಸ್ಯ ವೈಜನ್ನಾಥ ಬಿ. ದಿವಟರ್, ಇನ್ನೊರ್ವ ನಗರಸಭೆ ಮಾಜಿ ಸದಸ್ಯ ಜಾಕೀರ ಹುಸೇನ ಕಿಲ್ಲೆದಾರ, ಗುತ್ತೆಗೆದಾರ ಸುರೇಶ ಮುಂಡರಗಿ, ಮುಖಂಡರಾದ ದುರಗೇಶಪ್ಪ ಹುರಿಗೆಜ್ಜಿ, ಪೊಲೀಸ್ ಇಲಾಖೆ ಚನ್ನವಿರಪ್ಪ ಹಡಪದ, ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಬಸವರಾಜಪ್ಪ ಪಾಲ್ಗೊಳ್ಳಲಿದ್ದಾರೆ.  

Leave a Reply