You are here
Home > Koppal News > ಅಗಳಕೇರಾ ಗ್ರಾಮದಲ್ಲಿ ಯೋಗ ಮತ್ತು ಪ್ರಾಣಾಯಾಮ ಶಿಬಿರ.

ಅಗಳಕೇರಾ ಗ್ರಾಮದಲ್ಲಿ ಯೋಗ ಮತ್ತು ಪ್ರಾಣಾಯಾಮ ಶಿಬಿರ.

ಕೊಪ್ಪಳ-28- ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ಭೊರಕಾ ಪವರ್ ಕಾರ್ಪೊರೇಶನ್ ಲಿಮಿಟೆಡ್, ಬೆಂಗಳೂರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರ ನೇತೃತ್ವದಲ್ಲಿ ‘ಸ್ವಚ್ಛ ಶಾಲೆ, ಸ್ವಚ್ಛ ವಿದ್ಯಾರ್ಥಿ, ಸ್ವಚ್ಛ ಪರಿಸರ’ ಭೊರುಕಾ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಡಿಯಲ್ಲಿ ಆಯೋಜಿಸಿರುವ ‘ಯೋಗ ಮತ್ತು ಪ್ರಾಣಾಯಾಮ ಶಿಬಿರ’ ವನ್ನು ಅಗಳಕೇರಾ ಗ್ರಾಮದಲ್ಲಿ ದಿನಾಂಕ : ೩೦-೧೧-೨೦೧೫ ರಿಂದ ೦೫-೧೨-೨೦೧೫ ರವರಗೆ ಬೆಳಿಗ್ಗೆ ೬:೩೦ ರಿಂದ ೮:೦೦ ಗಂಟೆಯವರಗೆ ಸ್ಥಳ : ಸರಕಾರಿ ಪ್ರೌಢ ಶಾಲೆಯ ಆವರಣ ಅಗಳಕೇರಾ ೩೦-೧೧-೨೦೧೫ ರಂದು ಸೋಮುವಾರ ಕಾರ್ಯಕ್ರಮದ ಉದ್ಘಾಟನೆಯನ್ನು ಆರ್.ಡಿ.ಮುಲ್ಲಾ ಅಧ್ಯಕ್ಷರು ಗ್ರಾ.ಪಂ ಅಗಳಕೇರಾ, ಅಧ್ಯಕ್ಷತೆಯನ್ನು ನಿಂಗರಾಜ ಬೇಳೂರು ಎಸ್.ಡಿ.ಎಂ.ಸಿ ಅಧ್ಯಕ್ಷರು ಸ.ಪ್ರೌ.ಶಾಲೆ ಅಗಳಕೇರಾ, ಮುಖ್ಯಅತಿಥಿಗಳಾಗಿ ಶ್ರೀಮತಿ ಗೀತಾ ಭಜಂತ್ರಿ ಗ್ರಾ.ಪಂ ಉಪಾಧ್ಯಕ್ಷರು ಅಗಳಕೇರಾ, ದ್ವಾರಕೇಶ ಎಲ್.ಪಿ,ಎಸ್, ಎಸ್.ಡಿ.ಎಂ.ಸಿ ಅಧ್ಯಕ್ಷರು ಅಗಳಕೇರಾ, ಈ ಕಾರ್ಯಕ್ರಮಕ್ಕೆ ಎಮ್.ಹೆಚ್,ಪಿ,ಎಸ್, ಶಾಲೆಯ ಹಾಗೂ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಪಾಲಕರು, ಮತ್ತು ಸಾರ್ವಜನಿಕರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಭೊರಕಾ ಪವರ್ ಕಾರ್ಪೊರೇಶನ್ ಲಿಮಿಟೆಡ್ ನೌಕರರಾದ ದೇವರಾಜ ಗಡಾದ್ ತಿಳಿಸಿದ್ದಾರೆ.

Leave a Reply

Top