fbpx

ಅಲಹಬಾದ್ ಪ್ರಕರಣ ಖಂಡಿಸಿ: ದಿ.೧೬ ರಂದು ಕಲಾಪದಿಂದ ದೂರ ಉಳಿಯಲು ನಿರ್ಧಾರ

ಕೊಪ್ಪಳ,ಮಾ.೧೩: ಉತ್ತರ ಪ್ರದೇಶದ ಅಲಹಬಾದ್ ನ್ಯಾಯಾಲಯದ ಪ್ರಾಂಗಣದಲ್ಲಿ ಪೊಲೀಸರ ಗುಂಡೆಟಿಗೆ ವಕೀಲರೊಬ್ಬರು ಮರಣಹೊಂದಿರುವ ಘಟನೆಯನ್ನು ಖಂಡಿಸಿ ಇಲ್ಲಿನ ಜಿಲ್ಲಾ ವಕೀಲರ ಸಂಘ ಇದೇ ದಿ.೧೬ ರಂದು ನ್ಯಾಯಾಲಯದ ಕಲಾಪದಿಂದ ದೂರ ಉಳಿಯಲು ತಿರ್ಮಾನಿಸಲಾಗಿದೆ.
        ಈ ಘಟನೆ ಕುರಿತಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಕರೆ ಮೇರೆಗೆ ರಾಷ್ಟ್ರಾಧ್ಯಂತ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ರಾಜಶೇಖರ ಮಾಲಿ ಪಾಟೀಲ್ ತಿಳಿಸಿದ್ದಾರೆಂದು ಸಂಘದ ಪತ್ರಿಕಾ ವಕ್ತಾರರಾದ ಎಸ್.ಬಿ.ಪಾಟೀಲ್ ವಕೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Koppal Advocates
Please follow and like us:
error

Leave a Reply

error: Content is protected !!